ಬೆಳಗಾವಿ: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಇಲಾಖೆಯ ಈ ಒಂದು ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಈ ಮೂಲಕ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದಂತ ಅತಿಥಿ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್ ಅನ್ನು ರಾಜ್ಯ ಸರ್ಕಾರ ನೀಡಿದೆ.
ಮೆಲ್ಮನೆಯಲ್ಲಿ ಬಿಜೆಪಿಯ ಡಾ. ಧನಂಜಯ ಸರ್ಜೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವ ಧನ ಮೊತ್ತವನ್ನು 2022ರಲ್ಲಿ ಆರ್ಥಿಕ ಇಲಾಖೆಯು ಪರಿಷ್ಕರಿಸಲು ಅನುಮತಿ ನೀಡಿತ್ತು.
ಈಗ ಮತ್ತೆ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದರೆ ಈಗ ಮರು ಪರಿಶೀಲನೆಗಾಗಿ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದಾಗ, 48 ಸಾವಿರ ಅತಿಥಿ ಶಿಕ್ಷಕರಿದ್ದಾರೆ. ಕನಿಷ್ಠ ವೇತನಕ್ಕೆ ಅನುಗುಣವಾಗಿಯೂ ವೇತನ ನೀಡುತ್ತಿಲ್ಲ ಹೀಗಿರುವಾಗ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ ಎಂದು ಡಾ. ಸರ್ಜಿ ಸಚಿವರಿಗೆ ಪ್ರಶ್ನಿಸಿದರು.