ಬೆಂಗಳೂರು: ರಾಜ್ಯ ಸರ್ಕಾರದಿಂದ ಡಯಾಲಿಸಿಸ್ ರೋಗಿಗಳಿಗೆ ಬಿಗ್ ಶಾಕ್ ಎನ್ನುವಂತೆ, ಇನ್ ಹೌಸ್ ಮಾದರಿಯ ಡಯಾಲಿಸಿಸ್ ಸೇವೆಗಳ ಪ್ರತಿ ಡಯಾಲಿಸಿಸ್ ದರವನ್ನು ಹೆಚ್ಚಳ ಮಾಡಿ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ದಿನಾಂಕ:17.09.2024ರ ಸಚಿವ ಸಂಪುಟದ ತೀರ್ಮಾನದಂತೆ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿಯಲ್ಲಿ ವಿಭಾಗವನ್ನು ಒಳಗೊಂಡಂತೆ ಪಿ.ಪಿ.ಪಿ. ಮಾದರಿಗೆ ಒಳಪಡದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸ್ವಯಂ ಚಾಲನೆಯ ಆಧಾರದ ಮೇಲೆ ಡಯಾಲಿಸಿಸ್ ಸೇವೆಯನ್ನು ಒದಗಿಸಲು, ಡಯಾಲಿಸಿಸ್ ಸೇವೆಯನ್ನು SAST ಸಂಸ್ಥೆಯ ಮುಖಾಂತರ ಅನುಷ್ಠಾನಗೊಳಿಸಲು ಹಾಗೂ PHH ಕಾರ್ಡ್‌ದಾರರಿಗೆ ಉಚಿತವಾಗಿ ಮತ್ತು PHH ಕಾರ್ಡ್ ದಾರರಲ್ಲದ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ನೀಡಲಾಗಿದ್ದು, ಪ್ರತಿ ಡಯಾಲಿಸಿಸ್ ಸೈಕಲ್ ಕಾರ್ಯಾಚರಣೆಯ ವೆಚ್ಚವನ್ನು ರೂ. 1000/- ದಂತೆ ಮರುಪಾವತಿಗೆ ನಿಗದಿಪಡಿಸಲಾಗಿರುತ್ತದೆ ಎಂದಿದ್ದಾರೆ.
ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ರವರ ಏಕಕಡತದಲ್ಲಿ ಕಲ್ಬುರ್ಗಿ ವಿಭಾಗದ 46 ಆರೋಗ್ಯ ಕೇಂದ್ರಗಳಲ್ಲಿ 25 ಆರೋಗ್ಯ ಕೇಂದ್ರಗಳು M/s DCDC ಸಂಸ್ಥೆಯಿಂದ ಪಿ.ಪಿ.ಪಿ. ಮಾದರಿಯಲ್ಲಿ ಪ್ರತಿ ಡಯಾಲಿಸಿಸ್ ಸೈಕಲ್‌ಗೆ ರೂ.1573 ರಂತೆ ಡಯಾಲಿಸಿಸ್ ಸೇವೆಯನ್ನು ನಡೆಸಲು KTPP ಅಧಿನಿಯಮ -19990 ಕಲಂ 4(29) ರಡಿ ವಿನಾಯಿತಿ ನೀಡಲಾಗಿರುತ್ತದೆ. ಉಳಿದ 21 ಡಯಾಲಿಸಿಸ್ ಕೇಂದ್ರಗಳು in-house ಮಾದರಿಯಲ್ಲಿ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತಿರುತ್ತದೆ. ಪತಿ ಡಯಾಲಿಸಿಸ್ ಸೈಕಲ್ ಗೆ SAST ನಿಂದ ರೂ. 1000 ಗಳ ಮರುಪಾವತಿ ವಿಧಾನದಲ್ಲಿ ಡಯಾಲಿಸಿಸ್ ಸೇವೆಯನ್ನು ನಡೆಸಲಾಗುತ್ತಿರುತ್ತದೆ. ಪುಸ್ತುತ ಉಪಭೋಗ್ಯ ವಸ್ತುಗಳು ಹಾಗೂ ನಿರ್ವಹಣಾ ವೆಚ್ಚದಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಹಾಗೂ ಗುಣಮಟ್ಟದ ಡಯಾಲಿಸಿಸ್ ಸೇವೆಯನ್ನು ಒದಗಿಸುವ ಸಲುವಾಗಿ ಕಲ್ಬುರ್ಗಿ ವಿಭಾಗದ In house ಮಾದರಿಯಲ್ಲಿ ಡಯಾಲಿಸಿಸ್ ಸೇವೆಯನ್ನು ಒದಗಿಸಲಾಗುತ್ತಿರುವ 21 ಡಯಾಲಿಸಿಸ್ ಕೇಂದ್ರಗಳ ಪ್ರತಿ ಡಯಾಲಿಸಿಸ್ ಸೈಕಲ್ ಕಾರ್ಯಾಚರಣೆಯ ವೆಚ್ಚವನ್ನು ರೂ.1000/-ರಿಂದ ರೂ.1573/- ಹೆಚ್ಚಳ ಮಾಡುವಂತೆ
ಕೋರಲಾಗಿರುತ್ತದೆ ಎಂದಿದ್ದಾರೆ.
ಅಭಿಯಾನ ನಿರ್ದೇಶಕರ ಪುಸ್ತಾವನೆಯಂತೆ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿಯಲ್ಲಿ ಕಲ್ಬುರ್ಗಿ ವಿಭಾಗವನ್ನು ಒಳಗೊಂಡಂತೆ ಪಿ.ಪಿ.ಪಿ. ಮಾದರಿಗೆ ಒಳಪಡದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸ್ವಯಂ ಚಾಲನೆಯ ಆಧಾರದ ಮೇಲೆ ಡಯಾಲಿಸಿಸ್ ಸೇವೆಯನ್ನು ಒದಗಿಸಲು, ಡಯಾಲಿಸಿಸ್ ಸೇವೆಯನ್ನು SAST ಸಂಸ್ಥೆಯ ಮುಖಾಂತರ ಅನುಷ್ಟಾನಗೊಳಿಸಲು ಹಾಗೂ PHH ಕಾರ್ಡ್‌ದಾರರಿಗೆ ಉಚಿತವಾಗಿ ಮತ್ತು PHH ಕಾರ್ಡ್‌ದಾರರಲ್ಲದ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ನೀಡಲಾಗಿದ್ದು, ಪ್ರತಿ ಡಯಾಲಿಸಿಸ್ ಸೈಕಲ್ ಕಾರ್ಯಾಚರಣೆಯ ವೆಚ್ಚವನ್ನು ರೂ.1000/-ದಂತೆ ಮರುಪಾವತಿಸಲು ದಿನಾಂಕ: 17.09.2024 ರಂದು ನಡೆದ ಸಚಿವ ಸಂಪುಟವು ಅನುಮೋದನೆ ನೀಡಿರುವುದನ್ನು ಮಾರ್ಪಡಿಸಿ ಕಲಬುರಗಿ ವಿಭಾಗದ ಆರೋಗ್ಯ ಕೇಂದ್ರಗಳಲ್ಲಿ In house ಮಾದರಿಯಲ್ಲಿ ಡಯಾಲಿಸಿಸ್ ಸೇವೆಗಳನ್ನು ಒದಗಿಸುತ್ತಿರುವ ಪತಿ ಡಯಾಲಿಸಿಸ್ ಸೈಕಲ್ ದರವನ್ನು ಹೆಚ್ಚಿಸಿ ನಿಗಧಿಪಡಿಸಲು ತೀರ್ಮಾನಿಸಿ ಕೆಳಕಂಡಂತೆ ಆದೇಶಿಸಿದ್ದಾರೆ.
ಕಲಬುರಗಿ ವಿಭಾಗದ ಆರೋಗ್ಯ ಕೇಂದ್ರಗಳಲ್ಲಿ In house ಮಾದರಿಯಲ್ಲಿ ಡಯಾಲಿಸಿಸ್ ಸೇವೆಗಳನ್ನು ಒದಗಿಸುತ್ತಿರುವ ಪ್ರತಿ ಡಯಾಲಿಸಿಸ್ ಸೈಕಲ್ ದರವನ್ನು ರೂ. 1,000/- ದಿಂದ ರೂ. 1,500/- ಕ್ಕೆ ಈ ಕೆಳಕಂಡ ಷರತ್ತಿಗೊಳಪಟ್ಟು ನಿಗದಿಪಡಿಸಲಾಗಿದೆ.
ಷರತ್ತುಗಳು:
1. The Department should take necessary and proactive action to increase utilization of the established infrastructure.
2. The Department should encourage utilization of public health facilities for the purpose, as this is the key deliverable.
3. The dialysis providing public health institutions will also be more operationally and financially prudent and careful while providing services, within the financial envelope provided.
4. The Department to ensure that the financial implications are fully redressed annually in the programme implementation plan of NHM.
5. No additionality from State sector will be given.

ರಾಜ್ಯದ ರಬ್ಬರ್ ಬೆಳೆಗಾರರಿಗೆ ಗುಡ್ ನ್ಯೂಸ್: ತೋಟಗಾರಿಕಾ ಬೆಳೆಗಳ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಶಿಫಾರಸ್ಸು
ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಈಗ ಮೆಟ್ರೋ ರೈಲಿನಲ್ಲಿ ಈ ಎಲ್ಲವೂ ನಿಷೇಧ, ತಪ್ಪಿದ್ರೆ ಕೇಸ್, ದಂಡ ಫಿಕ್ಸ್








