Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನ ಸವಾರರಿಗೆ ಬಿಗ್ ರಿಲೀಫ್ ; ಪೆಟ್ರೋಲ್, ಡೀಸೆಲ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ!

17/03/2026 6:22 PM

BREAKING: ನಟ, ನಿರ್ದೇಶಕ ಜೋಗಿ ಪ್ರೇಮ್‌ ಗೆ ಬಿಗ್‌ ಶಾಕ್‌: ಸರ್ಸೆ ಸೆರಗ ಸರ್ಸೆ ಹಾಡು ತೆಗೆದುಹಾಕಲು ಸರ್ಕಾರದ ಆದೇಶ

17/03/2026 6:09 PM

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ : ಸರ್ಕಾರದ ಘೋಷಣೆ ಯಾವಾಗ ಗೊತ್ತಾ?

17/03/2026 6:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನಟ, ನಿರ್ದೇಶಕ ಜೋಗಿ ಪ್ರೇಮ್‌ ಗೆ ಬಿಗ್‌ ಶಾಕ್‌: ಸರ್ಸೆ ಸೆರಗ ಸರ್ಸೆ ಹಾಡು ತೆಗೆದುಹಾಕಲು ಸರ್ಕಾರದ ಆದೇಶ
INDIA

BREAKING: ನಟ, ನಿರ್ದೇಶಕ ಜೋಗಿ ಪ್ರೇಮ್‌ ಗೆ ಬಿಗ್‌ ಶಾಕ್‌: ಸರ್ಸೆ ಸೆರಗ ಸರ್ಸೆ ಹಾಡು ತೆಗೆದುಹಾಕಲು ಸರ್ಕಾರದ ಆದೇಶ

By kannadanewsnow0917/03/2026 6:09 PM

ಬೆಂಗಳೂರು/ಮುಂಬೈ: ಪ್ರೇಮ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್’ ಹಾಡಿನ ವಿವಾದ ತಾರಕಕ್ಕೇರಿದೆ. ಅಖಿಲ ಭಾರತ ಸಿನಿ ಕಾರ್ಮಿಕರ ಸಂಘದ (AICWA) ತೀವ್ರ ಆಕ್ಷೇಪ ಮತ್ತು ಕಾನೂನು ಕ್ರಮದ ಎಚ್ಚರಿಕೆಯ ಬೆನ್ನಲ್ಲೇ, ಚಿತ್ರತಂಡವು ಹಾಡಿನ ಹಿಂದಿ ಮತ್ತು ಕನ್ನಡ ಎರಡೂ ಆವೃತ್ತಿಗಳನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲು ಮುಂದಾಗಿದೆ ಎನ್ನಲಾಗುತ್ತಿದೆ.

ಪಬ್ಲಿಸಿಟಿಗಾಗಿ ಅಶ್ಲೀಲತೆ? ಸಂಘಟನೆಯ ಆಕ್ರೋಶ

ಹಾಡಿನ ವಿರುದ್ಧ ಧ್ವನಿ ಎತ್ತಿರುವ AICWA, ಇದೊಂದು “ಆತಂಕಕಾರಿ ಪ್ರವೃತ್ತಿ” ಎಂದು ಕರೆದಿದೆ. ಕೇವಲ ಪ್ರಚಾರಕ್ಕಾಗಿ ಮತ್ತು ವಿವಾದ ಸೃಷ್ಟಿಸಲೆಂದೇ ಇಂತಹ ಹಾಡುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಇದು ಚಿತ್ರರಂಗದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿದೆ ಎಂದು ಸಂಘಟನೆ ವಾದಿಸಿದೆ.

  • ತಕ್ಷಣದ ನಿಷೇಧಕ್ಕೆ ಆಗ್ರಹ: ಈ ಹಾಡನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ನಿಷೇಧಿಸಬೇಕು ಎಂದು ಸೆನ್ಸಾರ್ ಮಂಡಳಿ (CBFC) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಂಘಟನೆ ಮನವಿ ಮಾಡಿದೆ.

  • ತನಿಖೆಗೆ ಬೇಡಿಕೆ: ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಿ ಪಬ್ಲಿಸಿಟಿ ಗಿಮಿಕ್ ಮಾಡಲಾಗಿದೆಯೇ ಎಂಬ ಬಗ್ಗೆ ಚಿತ್ರತಂಡದ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಮುಂಬೈನಲ್ಲಿ ಎಫ್‌ಐಆರ್ ದಾಖಲಿಸಲು ದೂರು

ಮತ್ತೊಂದೆಡೆ, ಮುಂಬೈನ ಮಿರಾ ರೋಡ್ ಪೊಲೀಸ್ ಠಾಣೆಯಲ್ಲಿ ವಕೀಲರೊಬ್ಬರು ಈ ಹಾಡಿನ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ.

  • ಆಕ್ಷೇಪಾರ್ಹ ಅಂಶಗಳು: ವಕೀಲೆ ಜಹಾನಾರಾ ಖಾನ್ ಅವರು ಸಲ್ಲಿಸಿರುವ ದೂರಿನಲ್ಲಿ, ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು “ಅತ್ಯಂತ ಅಶ್ಲೀಲ ಮತ್ತು ಲೈಂಗಿಕ ಪ್ರಚೋದಕ”ವಾಗಿವೆ ಎಂದು ಆರೋಪಿಸಿದ್ದಾರೆ.

  • ಕಾನೂನು ಕ್ರಮ: ಈ ಹಾಡು ಮಹಿಳೆಯರ ಘನತೆಗೆ ಕುಂದು ತರುತ್ತಿದ್ದು, ‘ಭಾರತೀಯ ನ್ಯಾಯ ಸಂಹಿತೆ 2023’ ರ ಸೆಕ್ಷನ್ 79 ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ಬಿಂಬಿಸಿರುವುದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯೂಟ್ಯೂಬ್‌ನಿಂದ ಹಾಡು ಮಾಯ!

ಸಾರ್ವಜನಿಕವಾಗಿ ಮತ್ತು ಕಾನೂನಾತ್ಮಕವಾಗಿ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೆವಿಎನ್ ಪ್ರೊಡಕ್ಷನ್ಸ್, ವಿವಾದಿತ ಹಾಡನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ದೊಡ್ಡ ಸ್ಟಾರ್ ನಟರು ಇಂತಹ ಕಂಟೆಂಟ್‌ಗಳನ್ನು ಬೆಂಬಲಿಸುವುದು ಸಾಂಸ್ಕೃತಿಕ ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕೆಡಿ ದಿ ಡೆವಿಲ್ ಚಿತ್ರದ “ಸರ್ಕೆ ಚುನಾರ್” ಹಾಡಿನ ಸುತ್ತ ಹೆಚ್ಚುತ್ತಿರುವ ವಿವಾದದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಧ್ಯಪ್ರವೇಶಿಸಿದೆ. ಸಭ್ಯತೆಯ ಮಾನದಂಡಗಳನ್ನು ಉಲ್ಲಂಘಿಸಿದರೆ ಎಲ್ಲಾ ವೇದಿಕೆಗಳಿಂದ ಟ್ರ್ಯಾಕ್ ಅನ್ನು ತೆಗೆದುಹಾಕುವಂತೆ ಸಿಬಿಎಫ್‌ಸಿಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ.

ಸೊರಬ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಉಗ್ರ ಹೋರಾಟದ ಎಚ್ಚರಿಕೆ

Share. Facebook Twitter LinkedIn WhatsApp Email

Related Posts

ವಾಹನ ಸವಾರರಿಗೆ ಬಿಗ್ ರಿಲೀಫ್ ; ಪೆಟ್ರೋಲ್, ಡೀಸೆಲ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ!

17/03/2026 6:22 PM1 Min Read

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ : ಸರ್ಕಾರದ ಘೋಷಣೆ ಯಾವಾಗ ಗೊತ್ತಾ?

17/03/2026 6:06 PM1 Min Read

BREAKING: ಅಶ್ಲೀಲತೆಯ ಆರೋಪ: ‘ಕೆಡಿ’ ಚಿತ್ರದ ‘ಸರ್ಕೆ ಚುನರ್’ ಹಾಡು ನಿಷೇಧಿಸಿದ ಕೇಂದ್ರ ಸರ್ಕಾರ!

17/03/2026 6:01 PM1 Min Read
Recent News

ವಾಹನ ಸವಾರರಿಗೆ ಬಿಗ್ ರಿಲೀಫ್ ; ಪೆಟ್ರೋಲ್, ಡೀಸೆಲ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ!

17/03/2026 6:22 PM

BREAKING: ನಟ, ನಿರ್ದೇಶಕ ಜೋಗಿ ಪ್ರೇಮ್‌ ಗೆ ಬಿಗ್‌ ಶಾಕ್‌: ಸರ್ಸೆ ಸೆರಗ ಸರ್ಸೆ ಹಾಡು ತೆಗೆದುಹಾಕಲು ಸರ್ಕಾರದ ಆದೇಶ

17/03/2026 6:09 PM

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ : ಸರ್ಕಾರದ ಘೋಷಣೆ ಯಾವಾಗ ಗೊತ್ತಾ?

17/03/2026 6:06 PM

ಸೊರಬ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಉಗ್ರ ಹೋರಾಟದ ಎಚ್ಚರಿಕೆ

17/03/2026 6:05 PM
State News
KARNATAKA

ಸೊರಬ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಉಗ್ರ ಹೋರಾಟದ ಎಚ್ಚರಿಕೆ

By kannadanewsnow0917/03/2026 6:05 PM KARNATAKA 2 Mins Read

ಸೊರಬ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ…

BREAKING: ಬೆಂಗಳೂರಿನಲ್ಲಿ ಬಿರು ಬಿಸಿಲಿಗೆ ವರುಣನ ತಂಪು: ಹಲವೆಡೆ ದಿಢೀರ್ ಮಳೆ, ವಾಹನ ಸವಾರರು ಕಂಗಾಲು!

17/03/2026 5:37 PM

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್‌ ಖರೀದಿಗೆ ಒಪ್ಪಂದ: ಸಚಿವ ಶಿವಾನಂದ ಪಾಟೀಲ

17/03/2026 5:32 PM

BREAKING: ರಾಜ್ಯದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ನಡೆ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ

17/03/2026 5:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.