ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಸ್ಕಾಂ ದುಬಾರಿ ಸ್ಮಾರ್ಟ್ ಮೀಟರ್ ದರ ಏರಿಕೆಗೆ ಬ್ರೇಕ್ ಹಾಕಲಾಗಿದೆ. ಅಲ್ಲದೇ ಹಳ್ಳಿ, ಪಟ್ಟಣಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಬೆಸ್ಕಾಂ ಸ್ಮಾರ್ಟ್ ಮೀಟರ್ ಶೇ.800ರಷ್ಟು ದುಬಾರಿ ದರ ತೆರುವುದರಿಂದ ಜನರನ್ನು ಪಾರು ಮಾಡಿದೆ.
ಈ ಸಂಬಂಧ ರಾಜ್ಯ ಸರ್ಕಾರ ಬೆಸ್ಕಾಂಗೆ ಖಡಕ್ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಮೀಣ ಮತ್ತು ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಎನ್ ಟಿ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಪಡೆಯಲು ಒತ್ತಾಯಿಸಬಾರದೆಂದು ಸೂಚಿಸಿದೆ.
ಈ ಹಿನ್ನಲೆಯಲ್ಲಿ ಶೇ.400ರಿಂದ 800ರಷ್ಟು ಅಧಿಕ ದರದೊಂದಿಗೆ ಖರೀದಿಸಬೇಕಿದ್ದಂತ ಸ್ಮಾರ್ಟ್ ಮೀಟರ್ ದುಬಾರಿ ಬೆಲೆಗೆ ಬ್ರೇಕ್ ಬಿದ್ದಂತೆ ಆಗಿದೆ.
BREAKING: ರಾಜ್ಯ ಸರ್ಕಾರದಿಂದ ‘ಆಶಾ ಕಾರ್ಯಕರ್ತೆ’ಯರ ನಿವೃತ್ತಿ ವಯೋಮಿತಿ ’60 ವರ್ಷ’ಕ್ಕೆ ನಿಗದಿಪಡಿಸಿ ಆದೇಶ
ರಾಜ್ಯದಲ್ಲಿ ಗಲಭೆ ಸೃಷ್ಟಿಸಿದರೇ ಸ್ವಯಂಪ್ರೇರಿತ ಕೇಸ್ ದಾಖಲು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ