ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅದೇ ಅವರ ವಿರುದ್ಧ ಪೊಲೀಸರು ದಾಖಲಿಸಿದ್ದಂತ ಸಂಘಟಿತ ಅಪರಾಧಗಳ ಕಾಯ್ದೆಯಡಿಯ ಪ್ರಕರಣವನ್ನು ರದ್ದುಗೊಳಿಸಿದೆ.
ಇಂದು ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಈ ಅರ್ಜಿಯ ವಿಚಾರಣೆ ನಡೆಸಿದರು. ಈ ವೇಳೆ ಶ್ರೀಕಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ನ್ಯಾಯಪೀಠಕ್ಕೆ ಶ್ರೀಕೃಷ್ಣ ವಿರುದ್ಧ ಸಂಘಟಿತ ಅಪರಾಧಗಳ ಕಾಯ್ದೆ ಅನ್ವಯವಾಗದೇ ಇದ್ದರೂ ಜಾಮೀನು ಸಿಗಬಾರದು ಅಂತ ದಾಖಲಿಸಿದ್ದಾರೆ ಪೊಲೀಸರು ಎಂಬುದಾಗಿ ಗಮನಕ್ಕೆ ತಂದರು.
ಈ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದಂತ ಕೋರ್ಟ್, ಶ್ರೀಕಿ ವಿರುದ್ಧ ದಾಖಲಿಸಲಾಗಿದ್ದಂತ ಸಂಘಟಿತ ಅಪರಾಧಗಳ ಕಾಯ್ದೆ(KCOC) ಯಾಕೆ ದಾಖಲಿಸಿದ್ದಾರೆ ಅಂತ ಪೊಲೀಸರು ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಾಗಿ ಕೆಸಿಓಸಿ ಕಾಯ್ದೆಯಡಿ ದಾಖಲಾಗಿದ್ದಂತ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೇ ಜಾಮೀನಿಗಾಗಿ ಸಂಬಂಧಿಸಿದಂತ ಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
UPDATE: ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ