ಬೆಂಗಳೂರು: ಮೇ ಅಂತ್ಯದವರೆಗೆ 18 ಟಿಎಂಸಿ (7.61 ಟಿಎಂಸಿ ಬಾಕಿ ಸೇರಿದಂತೆ) ಹರಿಸಬೇಕೆಂಬ ತಮಿಳುನಾಡು ರಾಜ್ಯದ ಕೋರಿಕೆಗೆ ಸ್ಪಂದಿಸದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯೂಎಂಎ) ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆಗೆ ಯಾವುದೇ ನಿರ್ದೇಶನ ನೀಡದೇ ಇರುವ ಹಿನ್ನಲೆಯಲ್ಲಿ, ರಾಜ್ಯಕ್ಕೆ ಬಿಗ್ ರಿಲೀಫ್‌ಸಿಕ್ಕಿದೆ.
ಗುರುವಾರ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಕರ್ನಾಟಕ ಅಧಿಕಾರಿಗಳು, ರಾಜ್ಯದ ಜಲಾಶಯಗಳ ಸದ್ಯದ ಸ್ಥಿತಿಯನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ. 2024ರ ಮೇ ಅಂತ್ಯದವರೆಗೆ 18 ಟಿಎಂಸಿ ನೀರು (7.61 ಟಿಎಂಸಿ ಬಾಕಿ ಸೇರಿದಂತೆ) ಬಿಡುಗಡೆ ಮಾಡುವಂತೆ ತಮಿಳುನಾಡು ಒತ್ತಾಯಿಸಿತು. ಆದರೆ ಆದರೆ ತಮಿಳುನಾಡು ಮನವಿಗೆ CWMA ಸ್ಪಂದಿಸಿಲ್ಲ ಎನ್ನಲಾಗಿದೆ. ಜಲಾಶಯಗಳಿಗೆ ಶೇಕಡಾ 50ರಷ್ಟು ಒಳಹರಿವು ಕಡಿಮೆ ಇರುವುದನ್ನು ತೋರಿಸಿದೆ. ಹೀಗಾಗಿ ಸದ್ಯ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA) ಯಾವುದೇ ಸೂಚನೆ ನೀಡಿಲ್ಲ.