ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದಾಗಿ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರಿ ಎಂಬುದಾಗಿ ಹೇಳಲಾಗಿತ್ತು. ಅಲ್ಲದೇ ಕೋರ್ಟ್ ಕೂಡ ಘೋಷಿತ ಆರೋಪಿ ಎಂಬುದಾಗಿ ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸುವ ಮೂಲಕ ಡಿವೈಎಸ್ಪಿ ಶ್ರೀಧರ್ ಕೆ ಪೂಜಾರ್ ಗೆ ಬಿಗ್ ರಿಲೀಫ್ ನೀಡಿದೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ವಿಚಾರಣೆಗೆ ಸಹಕರಿಸದೇ ಡಿವೈಎಸ್ಪಿ ಶ್ರೀಧರ್ ಕೆ ಪೂಜಾರ್ ತಲೆ ಮರೆಸಿಕೊಂಡಿದ್ದರು. ಹೀಗಾಗಿ ವಿಚಾರಣಾ ನ್ಯಾಯಾಲಯವು ಅವರನ್ನು ಘೋಷಿತ ಆರೋಪಿ ಎಂಬುದಾಗಿ ಘೋಷಿಸಿ, ವಾರೆಂಟ್ ಜಾರಿಗೊಳಿಸತ್ತು. ಈ ವಾರೆಂಟ್ ಪ್ರಶ್ನಿಸಿ ಶ್ರೀಧರ್ ಪೂಜಾರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಮೇ.8ರಂದು ಬೆಳಿಗ್ಗೆ 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಬೆಳಿಗ್ಗೆ 9 ರಿದಂ ಸಂಜೆ6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತ್ರ 2 ಲಕ್ಷ ರೂ ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಆರೋಪಿ ಶ್ರೀಧರ್ ಸಹಕರಿಸಬೇಕು. ಜಾಮೀನು ಅರ್ಜಿ ಸಲ್ಲಿಸಿದ್ದರೇ ಪೊಲೀಸರು ಆಕ್ಷೇಪಿಸಬಾರದು ಎಂಬುದಾಗಿ ಆದೇಶಿಸಿದೆ.
ಕ್ಯಾನ್ಸರ್ ಪ್ರಕರಣಗಳಿಗೆ 648 ಕೋಟಿ ಪರಿಹಾರ ನೀಡಲು `ಜಾನ್ಸನ್ & ಜಾನ್ಸನ್’ ಅಂಗಸಂಸ್ಥೆ ನಿರ್ಧಾರ