ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಈಗಾಗಲೇ ಖುದ್ದು ಹಾಜರಾತಿಗೆ ವಿನಾಯ್ತಿ ನೀಡಲಾಗಿತ್ತು. ಈಗ ಮತ್ತೆ ಹೈಕೋರ್ಟ್ ಖುದ್ದು ಹಾಜರಾತಿಯಿಂದ ಬಿಎಸ್ ವೈಗೆ ವಿನಾಯ್ತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಈ ಕುರಿತಂತೆ ಇಂದು ಹೈಕೋರ್ಟ್ ನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಪ್ರಕರಣದ ವಿಚಾರಣೆಯನ್ನು ಜುಲೈ.26ಕ್ಕೆ ನಿಗದಿ ಪಡಿಸಿದೆ.
ಈ ಹಿನ್ನಲೆಯಲ್ಲಿ ಜುಲೈ.25ರವರೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಇತರೆ ಆರೋಪಿಗಳಿಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಿ ಮಧ್ಯಂತರ ಆದೇಶವನ್ನು ನೀಡಿದೆ.
ಇನ್ನೂ ಬಿಎಸ್ ಯಡಿಯೂರಪ್ಪ ಸೇರಿದಂತೆ ಇತರೆ ಆರೋಪಿಗಳ ಬದಲಿಗೆ ವಕೀಲರು ಹಾಜರಾಗಿ ವಿನಾಯ್ತಿ ಕೋರಲು ಅವಕಾಶ ಮಾಡಿಕೊಟ್ಟಿದೆ. ಜುಲೈ.25ರವರೆಗೆ ಬಿಎಸ್ ಯಡಿಯೂರಪ್ಪಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಿದೆ.
ಅಂದಹಾಗೇ ಜುಲೈ.15ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬೆಂಗಳೂರಿನ 1ನೇ ತ್ವರಿತ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತ್ತು. ಈ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಖುದ್ದು ವಿಚಾರಣೆಯ ಹಾಜರಾತಿಗೆ ವಿನಾಯ್ತಿ ನೀಡಿ ಆದೇಶಿಸಿತ್ತು. ಈಗ ಮತ್ತೆ ಇದನ್ನು ವಿಸ್ತರಣೆ ಮಾಡಿ ಆದೇಶಿಸಿದೆ.
ಶಿವಮೊಗ್ಗ: ಜುಲೈ.13ರ ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING: ‘ಅಗಲಿದ ಅಪರ್ಣಾ’ ಪಂಚಭೂತಗಳಲ್ಲಿ ಲೀನ: ‘ಅಚ್ಚಕನ್ನಡ ನಿರೂಪಕಿ’ ಇನ್ನೂ ‘ನೆನಪು’ ಮಾತ್ರ | Anchor Aparna