ಹೈದರಾಬಾದ್: ತೆಲುಗಿನ ಖ್ಯಾತ ನಟ ನಾಗಾರ್ಜುನ್ ಅವರು ಅವರು ಕೆಲೆ ಒತ್ತುವರಿ ಮಾಡಿಕೊಂಡು ಕಟ್ಟಿದ್ದಾರೆ ಎಂಬುದಾಗಿ ಅವರ ಹೈದರಾಬಾದ್ ನಲ್ಲಿನ ಎನ್-ಕನ್ವೆಷನ್ಷನ್ ಸೆಂಟರ್ ಅನ್ನು ಧ್ವಂಸಗೊಳಿಸಲಾಗುತ್ತಿತ್ತು. ಇದನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್ ಮೊರೆಯನ್ನು ಹೋಗಿದ್ದರು. ಈಗ ಧ್ವಂಸಗೊಳಿಸದಂತೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದು, ನಟ ನಾಗಾರ್ಜುನ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ.
ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ರಕ್ಷಣೆ (ಹೈಡ್ರಾ) ಅಧಿಕಾರಿಗಳು ಶನಿವಾರ ನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಮಾಧಪುರದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ನೆಲಸಮಗೊಳಿಸಿದ್ದಾರೆ. ತಮ್ಮಿಡಿ ಕುಂಟ ಸರೋವರದ ಫುಲ್ ಟ್ಯಾಂಕ್ ಲೆವೆಲ್ (ಎಫ್ಟಿಎಲ್) ಪ್ರದೇಶದಲ್ಲಿ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ನಗರದ ಮಾಧಾಪುರ ಪ್ರದೇಶದ ಫುಲ್ ಟ್ಯಾಂಕ್ ಲೆವೆಲ್ (ಎಫ್ಟಿಎಲ್) ಪ್ರದೇಶದಲ್ಲಿ ಅಕ್ರಮವಾಗಿ ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಒಡೆತನದ ಕನ್ವೆನ್ಷನ್ ಹಾಲ್ ಅನ್ನು ನೆಲಸಮಗೊಳಿಸಲು ಹೈದರಾಬಾದ್ ವಿಪತ್ತು ಪರಿಹಾರ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ (ಹೈಡ್ರಾ) ಶನಿವಾರ ಪ್ರಾರಂಭಿಸಿತ್ತು.
ನಟ ನಾಗಾರ್ಜುನ ಅವರು ಕೂಡಲೇ ತೆಲಂಗಾಣ ಹೈಕೋರ್ಟ್ ಗೆ ಕೋರ್ಟ್ ತಡೆಯಾಜ್ಞೆಯನ್ನು ಉಲ್ಲಂಘಿಸಿ ಎನ್-ಕನ್ವೆನ್ಷನ್ ಸೆಂಟರ್ ಧ್ವಂಸಗೊಳಿಸಿದ್ದರ ಬಗ್ಗೆ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದಂತ ಹೈಕೋರ್ಟ್ ನ್ಯಾಯಪೀಠವು ಎನ್-ಕನ್ವೆನ್ಷನ್ ಸೆಂಟರ್ ಧ್ವಂಸಗೊಳಿಸದಂತೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿ ಆದೇಶಿಸಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ: NC ಜೊತೆಗಿನ ಮೈತ್ರಿಯ ಬಗ್ಗೆ ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು
ಉಕ್ರೇನ್ ಗೆ ನಾಲ್ಕು ‘ಭೀಷ್ಮ್ ಕ್ಯೂಬ್’ ಗಳನ್ನು ಉಡುಗೊರೆಯಾಗಿ ನೀಡಿದ ಭಾರತ | BHISHM Cubes