ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಿಷೇದಿತ ಮಾದಕ ವಸ್ತುವಾದಂತ ಎಂಡಿಎಂಎ, ಚರಸ್ ಹಾಗೂ ಗಾಂಜವನ್ನು ಮಾರಾಟ ಮಾಡುತ್ತಿದ್ದಂತ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಂದು ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಉತ್ತರ ವಿಭಾಗದ ಜೆ.ಸಿ.ನಗರ, ಹೆಬ್ಬಾಳ, ಆರ್.ಟಿ.ನಗರ ಮತ್ತು ಜಾಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಅಪರಿಚಿತ ವ್ಯಕ್ತಿಗಳು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀಧಾರರಿಂದ ಈಗ್ಗೆ ಒಂದು ವಾರದ ಅವಧಿಯೊಳಗೆ ಖಚಿತ ಮಾಹಿತಿ ಬಂದಿದ್ದು, ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ, ಠಾಣಾ ಸರಹದ್ದುಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು.
ಬಾತ್ಮೀಧಾರರು ತಿಳಿಸಿದ ಸ್ಥಳಗಳಾದ ಆರ್.ಟಿ.ನಗರ ಪೊಲೀಸ್ ಠಾಣಾ ಸರಹದ್ದಿನ, ಸುಲ್ತಾನ್ ಪಾಳ್ಯದಲ್ಲಿರುವ ಅಪಾರ್ಟ್ ಮೆಂಟ್ ವೊಂದರ ಸಮೀಪ ದಿನಾಂಕ:06/08/2025 ರಂದು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆತನ ವಶದಿಂದ 3 ಕೆ.ಜಿ 330 ಗ್ರಾಂ ಗಾಂಜಾ, 278 ಗ್ರಾಂ ಎಂ.ಡಿ.ಎಂ.ಎ. ಕೃತ್ಯಕ್ಕೆ ಉಪಯೋಗಿಸಿದ 1 ದ್ವಿ-ಚಕ್ರ ವಾಹನ, 3 ಮೊಬೈಲ್ ಫೋನ್, 1 69,100 ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ಹೆಬ್ಬಾಳ ಪೊಲೀಸ್ ಠಾಣಾ ಸರಹದ್ದಿನ, ರೈಲ್ವೆ ಟ್ರ್ಯಾಕ್ ಸಮೀಪದ ಖಾಲಿ ಜಾಗದಲ್ಲಿ ದಿನಾಂಕ:07/08/2025 ರಂದು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆತನ ವಶದಿಂದ 1 ಕೆ.ಜಿ 287 ಗ್ರಾಂ ಗಾಂಜಾ, ಕೃತ್ಯಕ್ಕೆ ಉಪಯೋಗಿಸಿದ 1 ದ್ವಿ-ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಜೆ.ಸಿ.ನಗರ ಪೊಲೀಸ್ ಠಾಣಾ ಸರಹದ್ದಿನ, ಎಂ.ಆರ್.ಎಸ್ ಪಾಳ್ಯದ ಇಂದಿರಾ ಕ್ಯಾಂಟಿನ್ ಬಳಿ ದಿನಾಂಕ:09/08/2025 ರಂದು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆತನಿಂದ 600 ಗ್ರಾಂ ಗಾಂಜಾ, * 1,200/- ನಗದನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಜಾಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನ, ಎಚ್.ಎಂ.ಟಿ ಕ್ವಾಟ್ರಸ್ ಬಳಿ, ದಿನಾಂಕ:10/08/2025 ರಂದು ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅವರುಗಳ ವಶದಿಂದ 991 ಗ್ರಾಂ ಗಾಂಜಾ, 75 ಗ್ರಾಂ ಚರಸ್‌ನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಒಟ್ಟಾರೆ ಈ ವಿಶೇಷ ಕಾರ್ಯಾಚರಣೆಯಲ್ಲಿ, ಆರು ವ್ಯಕ್ತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಕ್ಕೆ ಪಡೆದ ಆರು ವ್ಯಕ್ತಿಗಳನ್ನು ವಿಚಾರಣೆ ಗೊಳಪಡಿಸಲಾಗಿ, ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ. ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ನಿಷೇದಿತ ಮಾದಕ ವಸ್ತುವಾದ ಗಾಂಜಾ, ಚರಸ್, ಎಂ.ಡಿ.ಎಂ.ಎ ನ್ನು ಕಡಿಮೆ ಬೆಲೆಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ತಪ್‌ಪ್ಪಿಕೊಂಡಿರುತ್ತಾರೆ.
ಆರು ಆರೋಪಿಗಳ ವಶದಿಂದ ಒಟ್ಟು 6 ಕೆ.ಜಿ 208 ಗ್ರಾಂ ಗಾಂಜಾ, 278 ಗ್ರಾಂ ಎಂ.ಡಿ.ಎಂ.ಎ. 75 ಗ್ರಾಂ ಚರಸ್, 2 ದ್ವಿ-ಚಕ್ರ ವಾಹನ, 3 ಮೊಬೈಲ್ ಫೋನ್, * 69,100 ನಗದು, 3 ತೂಕದ ಯಂತ್ರಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ * 60,00,000/-(ಆರವತ್ತು ಲಕ್ಷ ರೂಪಾಯಿ).
CRIME NEWS: ಮಾಲೀಕರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ವ್ಯವಸ್ಥಾಪಕ ಅರೆಸ್ಟ್
ಬೆಂಗಳೂರಲ್ಲಿ ಮುಂದುವರಿದ ಬೀದಿ ನಾಯಗಳ ಅಟ್ಟಹಾಸ: ಇಬ್ಬರು ವಿದ್ಯಾರ್ಧಿನಿಯರ ಮೇಲೆ ದಾಳಿ