ಬೆಂಗಳೂರು: ವಿಶ್ವ ಬ್ರೈಲ್ ದಿನಾಚರಣೆಯಂದು ದೃಷ್ಟಿದೋಷವುಳ್ಳ ವಿಕಲಚೇತನರ ಸರ್ಕಾರಿ ನೌಕರರಿಗೆ ದಿನಾಂಕ 04-01-2025ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದೆ.
ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ನಿರ್ದೇಶಕರು, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆರವರ ಪುಸ್ತಾವನೆಯಲ್ಲಿ ಪ್ರತಿ ವರ್ಷ ದಿವಂಗತ ಲೂಯಿ ಬೈಲ್ ರವರ ಜನ್ಮ ದಿನದ ಅಂಗವಾಗಿ ಜನವರಿ 04ರಂದು ನಡೆಯುವ ವಿಶ್ವ ಬ್ರೆಲ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ದೃಷ್ಟಿದೋಷವುಳ್ಳ ವಿಕಲಚೇತನ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವನ್ನು ಒದಗಿಸುವಂತೆ ಪ್ರಧಾನ ಕಾರ್ಯದರ್ಶಿಗಳು, ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ರೌಂಡ್, ಬೆಂಗಳೂರು ಇವರು ಕೋರಿದ್ದು, ಅದರಂತೆ ದಿನಾಂಕ: 04.01.2025 ರಂದು ದಿವಂಗತ ಲೂಯಿ ಬೈಲ್ ಅವರ ಜನ್ಮ ದಿನದ ಅಂಗವಾಗಿ ನಡೆಯುವ ವಿಶ್ವ ಬೈಲ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಅಂಧ ಸರ್ಕಾರಿ ನೌಕರರಿಗೆ ಒಂದು ದಿನ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 04.01.2025 ರಂದು ದಿವಂಗತ ಲೂಯಿ ಬೈಲ್ ರವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ವಿಶ್ವ ಬ್ರೆಲ್ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದೃಷ್ಟಿ ದೋಷವುಳ್ಳ ವಿಕಲಚೇತನ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸಿ, ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನೌಕರರು ಹಾಜರಾತಿ ಪ್ರಮಾಣ ಪತ್ರವನ್ನು ಒದಗಿಸುವ ಹಾಗೂ ಈ ವಿಶೇಷ ಸಾಂದರ್ಭಿಕ ರಜೆ ದಿನಕ್ಕೆ ಸರ್ಕಾರದಿಂದ ಯಾವುದೇ ದಿನ ಭತ್ಯೆ ಅಥವಾ ಪ್ರಯಾಣ ಭತ್ಯೆಯ ಕ್ರೈಮ್‌ನ್ನು ಪರಿಗಣಿಸಲಾಗುವುದಿಲ್ಲವೆಂಬ ಷರತ್ತುಗಳಿಗೊಳಪಟ್ಟು, ದಿನಾಂಕ:04.01.2025 ರಂದು ಒಂದು ದಿನ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.