ಬೆಂಗಳೂರು : ಪ್ರಮುಖ ವೈದ್ಯಕೀಯ ಸಹಾಯಧನ ಪಡೆಯಲು ಫಲಾನುಭವಿಯು ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು. ಸರ್ಕಾರಿ / ಸರ್ಕಾರದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ದಿನ ಒಳರೋಗಿಯಾಗಿ ದಾಖಲಾಗಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಯಾವೆಲ್ಲ ಆರೋಗ್ಯ ತೊಂದರೆಗಳಿಗೆ ಸಹಾಯಧನ ಪಡೆಯಬಹುದು
* ಹೃದಯ ಸಂಬಂಧಿ ಖಾಯಿಲೆ
* ಕಿಡ್ನಿ ಜೋಡಣೆ
* ಕ್ಯಾನ್ಸರ್ ಶಸ್ತ್ರಚಿಕಿತ್ಸೆ
* ಕಣ್ಣಿನ ಶಸ್ತ್ರಚಿಕಿತ್ಸೆ
* ಮೂಳೆ ಶಸ್ತ್ರಚಿಕಿತ್ಸೆ
* ಗರ್ಭಕೋಶ ಶಸ್ತ್ರಚಿಕಿತ್ಸೆ
* ಅಸ್ತಮಾ ಚಿಕಿತ್ಸೆ
* ಗರ್ಭಪಾತ ಪ್ರಕರಣಗಳು
* ಪಿತ್ತಕೋಶದ ತೊಂದರೆಗೆ ಸಂಬಂಧಿಸಿದ ಚಿಕಿತ್ಸೆ
* ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ
* ಮೆದುಳಿನ ರಕ್ತಸ್ರಾವ ಚಿಕಿತ್ಸೆ
* ಅಲ್ಸರ್ ಚಿಕಿತ್ಸೆ
* ಡಯಾಲಿಸಿಸ್
* ಕಿಡ್ನಿ ಶಸ್ತ್ರಚಿಕಿತ್ಸೆ
* ಇ ಎನ್ ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ
* ನರರೋಗ ಶಸ್ತ್ರಚಿಕಿತ್ಸೆ
* ವ್ಯಾಸ್ಕೂಲರ್ ಶಸ್ತ್ರಚಿಕಿತ್ಸೆ
* ಅನ್ನನಾಳದ ಚಿಕಿತ್ಸೆ ಸೇರಿದಂತೆ
* ಇತರೆ ಖಾಯಿಲೆಗಳ ಚಿಕಿತ್ಸೆಗಳು