ಬೆಂಗಳೂರು : ನೋಂದಾಯಿತ ಕಾರ್ಮಿಕರು ಮರಣ ಹೊಂದಿದ ವೇಳೆ ಅಂತ್ಯಕ್ರಿಯೆಗೆ ಮಂಡಳಿಯು ಅವರ ನಾಮ ನಿರ್ದೇಶಿತರಿಗೆ ಸಹಾಯಧನ ನೀಡುತ್ತದೆ. ಈ ಸೌಲಭ್ಯ ಪಡೆಯಲು ಮೃತ ಫಲಾನುಭವಿಯ ವಯಸ್ಸು 60 ವರ್ಷದೊಳಗಿರಬೇಕು.
ನೋಂದಾಯಿತ ಕಾರ್ಮಿಕರು ಮರಣಹೊಂದಿದ ವೇಳೆ ಅವರ ಅಂತ್ಯಕ್ರಿಯೆಗೆ ಮಂಡಳಿಯು ಅವರ ನಾಮ ನಿರ್ದೇಶಿತರಿಗೆ ಸಹಾಯಧನವನ್ನು ನೀಡುತ್ತದೆ
ಸಲ್ಲಿಸಬೇಕಾದ ದಾಖಲೆಗಳು
* ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ
* ರೇಷನ್ ಕಾರ್ಡ್ ಪ್ರತಿ
* ಬ್ಯಾಂಕ್ ಪಾಸ್ ಬುಕ್ ಪ್ರತಿ
* ಮರಣ ಪ್ರಮಾಣ ಪತ್ರ
* ಅವಲಂಬಿತರ ಸ್ವಯಂ ದೃಢೀಕೃತ ಆಧಾರ್ ಕಾರ್ಡ್ ಪ್ರತಿ
ಗಮನಿಸಿ
ಫಲಾನುಭವಿಯು ಮೃತಪಟ್ಟ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಮೃತ ಫಲಾನುಭವಿಯ ನಾಮ ನಿರ್ದೇಶಿತರು ಈ ಸೌಲಭ್ಯ ಪಡೆದುಕೊಳ್ಳಬಹುದಾಗಿರುತ್ತದೆ