ಮದುವೆಯ ಸಂದರ್ಭದಲ್ಲಿ ವಧುವಿನ ಕುಟುಂಬವು ವರನಿಗೆ ಅಥವಾ ವರನ ಕುಟುಂಬಕ್ಕೆ ಹಣ, ಬಂಗಾರ, ಆಸ್ತಿ ಅಥವಾ ಇತರ ವಸ್ತುಗಳನ್ನು ನೀಡುವುದು ಕಾನೂನಿನ ಪ್ರಕಾರ ಅಪರಾಧ.
ವರದಕ್ಷಿಣೆ ನಿಯಂತ್ರಣ ಕಾಯ್ದೆ, 1961 ರ ಪರಿಣಾಮಕಾರಿ ಜಾರಿಗೆ ಗೊಳಿಸಲು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳ ಜವಾಬ್ದಾರಿಗಳನ್ನು ತಿಳಿಯೋಣ.
ಮಹಿಳೆಯರ ವಿರುದ್ಧದ ಹಿಂಸಾಚಾರ, ಕಿರುಕುಳ, ಗೃಹ ಹಿಂಸೆ, ಕಾನೂನು ನೆರವು ಹಾಗೂ ತುರ್ತು ಸಹಾಯಕ್ಕಾಗಿ ವನಿತಾ ಸಹಾಯವಾಣಿ 1091 ಗೆ ಸಂಪರ್ಕಿಸಿ.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳು
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿಯೋಜಿಸಲಾದ ವರದಕ್ಷಿಣೆ ನಿಷೇಧ ಉಸ್ತುವಾರಿ ಅಧಿಕಾರಿಗಳ ಹೆಸರು, ಹುದ್ದೆ, ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸುವುದು.
ಸ್ವಸಹಾಯ ಸಂಘದ ಮಹಿಳೆಯರು, ಸಂಘ/ ಸಂಸ್ಥೆ ಹಾಗೂ ಕೂಲಿ/ಕಾರ್ಮಿಕರ ಸಂಘ ಹಾಗೂ ಸಮುದಾಯದಲ್ಲಿ ವರದಕ್ಷಿಣೆ ನಿಷೇಧ ಕುರಿತು ಅರಿವು ಮೂಡಿಸುವುದು.
ಚುನಾಯಿತ ಪ್ರತಿನಿಧಿಗಳು, ಜಿಪಿಎಲ್ಎಫ್ ಮತ್ತು ಸ್ವಸಹಾಯ ಸಂಘದ ಪ್ರತಿನಿಧಿಗಳು, ಸ್ಥಳೀಯ ಸಂಘ/ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರ ಸಹಭಾಗಿತ್ವ / ಸಮನ್ವಯತೆಯಲ್ಲಿ ಸಾರ್ವಜನಿಕವಾಗಿ ಜಾಥಾ/ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದು.
ಶಾಲಾ/ ಕಾಲೇಜುಗಳಲ್ಲಿ ವರದಕ್ಷಿಣೆ ನಿಷೇಧ ಕುರಿತು ಕಾರ್ಯಾಗಾರ, ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.









