ಬೆಂಗಳೂರು : ದೀರ್ಘಕಾಲ ಶೂ ಧರಿಸಿದ್ರೆ ಸೋಂಕು ತಗುಲುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಶೂ ಬದಲು ಚಪ್ಪಲಿ ವಿತರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಹವಾಮಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಚಪ್ಪಲಿ ನೀಡಲು ತಯಾರಿ ನಡೆಸಿದೆ.
ರಾಜ್ಯದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಬದಲು ಚಪ್ಪಲಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಬೇಡಿಕೆ ಇರುವ ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಕ್ಕೆ ಪ್ಲಾನ್ ನಡೆಸಲಾಗಿದೆ. ಮಾಹಿತಿ ಕಲೆ ಹಾಕಲು ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಉರ್ದು ಮತ್ತು ಅಲ್ಪಸಂಖ್ಯಾತ ಭಾಷಾ ಶಾಲೆ ನಿರ್ದೇಶನಾಲಯ ಸೂಚನೆ ನೀಡಲಾಗಿದೆ. ಬೇಸಿಗೆ, ಮಳೆಗಾಲದಲ್ಲಿ ಶೂ, ಸಾಕ್ಸ್ ಧರಿಸಲು ಕೆಲವೆಡೆ ಅಸಾಧ್ಯ. ಅಂತಹ ಜಿಲ್ಲೆಗಳ ಪಟ್ಟಿ ಮಾಡಲು ಇಲಾಖೆ ಸೂಚನೆ ನೀಡಿದೆ. 2015ರಲ್ಲಿಯೂ ಶೂ ಬದಲು ಚಪ್ಪಲಿ ನೀಡುವ ಪ್ಲ್ಯಾನ್ ಇತ್ತು. ಕಾರಣಾಂತರಗಳಿಂದ ಚಪ್ಪಲಿ ನೀಡುವ ಪ್ಲ್ಯಾನ್ ಕೈ ಬಿಡಲಾಗಿತ್ತು. ಈಗ ಚಪ್ಪಲಿ ಭಾಗ್ಯ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.








