ಬೆಂಗಳೂರು : ವಿದ್ಯಾರ್ಥಿನಿಲಯಗಳ ನಿರ್ವಹಣೆಯಲ್ಲಿ ನಿಲಯ ಮೇಲ್ವಿಚಾರಕರ ಪಾತ್ರ ಮುಖ್ಯವಾಗಿದ್ದು, ನಿಲಯದ ಸಮರ್ಪಕ / ಅಸಮರ್ಪಕ ನಿರ್ವಹಣೆಗೆ ನಿಲಯ ಮೇಲ್ವಿಚಾರಕರೇ ಬಹಳಮಟ್ಟಿಗೆ ಕಾರಣರಾಗಿರುತ್ತಾರೆ. ಅದ್ದರಿಂದ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುವುದು.
ನಿಲಯಾರ್ಥಿಗಳ ಮೇಲ್ವಿಚಾರಣೆ:–
ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳು (ದಸರಾ ಹಾಗೂ ಇನ್ನಿತರ ದೀರ್ಘಕಾಲದ ರಜೆ ಅವಧಿಯನ್ನು ಹೊರತುಪಡಿಸಿ) ನಿಲಯದಲ್ಲಿ ವಾಸ್ತವ್ಯವಿದ್ದು, ದಿನನಿತ್ಯ ಹಾಜರಾಗುತ್ತಿರುವರೇ ಎಂಬ ಸಂಪೂರ್ಣ ಬಗ್ಗೆ ಮೇಲ್ವಿಚಾರಣೆ ಕಾಲೇಜಿಗೆ ಶಾಲೆಗೆ /ಮಾಡುವ ಜವಾಬ್ದಾರಿ ನಿಲಯಮೇಲ್ವಿಚಾರಕದ್ದಾಗಿರುತ್ತದೆ. ಗೈರು ಹಾಜರಾದಂತಹ, ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಟ್ಟು ಊರಿಗೆ ఎల్లా ತರಗತಿಗಳಿಗೆ ಹೋಗುವಂತಹ, ನಿಲಯದಲ್ಲಿ ವಾಸ್ತವ್ಯವಿದ್ದು, ಶಾಲೆಗೆ ಅಥವಾ ಶಾಲೆಯ ಹಾಜರಾಗದಂತಹ ವಿದ್ಯಾರ್ಥಿಗಳ ಪಾಲಕರನ್ನು ವಿದ್ಯಾರ್ಥಿನಿಲಯಕ್ಕೆ ಕರೆಸಿ ಇಂತಹ ಸ್ವಭಾವ ನಡತೆಯನ್ನು ಮುಂದುವರೆಸಿದಲ್ಲಿ ಅಂತಹ ವಿದ್ಯಾರ್ಥಿಗಳನ್ನು ನಿಲಯದಿಂದ ಹೊರಹಾಕಲು ಮೇಲಾಧಿಕಾರಿಗಳಿಗೆ ವರದಿಮಾಡಲಾಗುವುದೆಂದು ಎಚ್ಚರಿಕೆ ನೀಡುವುದು. ಇಂತಹ ಎಚ್ಚರಿಕೆಯಿಂದಲೂ ಸುಧಾರಿಸದೇ ಇರುವಂತಹ ವಿದ್ಯಾರ್ಥಿಗಳನ್ನು ನಿಲಯದಿಂದ ತೆಗೆದುಹಾಕುವ ಕ್ರಮವನ್ನು ಕೈಗೊಳ್ಳತಕ್ಕದ್ದು.
ಅಲ್ಲದೇ, ನಿಲಯಾರ್ಥಿಗಳ ವಾಸ್ತವ್ಯ, ಅವರಿಗೆ ಉತ್ತಮ / ಪೌಷ್ಠಿಕ ಆಹಾರ ನೀಡಿಕೆ, ಅವರ ಆರೋಗ್ಯ, ವ್ಯಾಸಂಗ, ವ್ಯಕ್ತಿತ್ವವಿಕಸನ ಇತ್ಯಾದಿಗಳ ಜವಾಬ್ದಾರಿಮೇಲ್ವಿಚಾರಕರದಾಗಿದ್ದು, ಇವರು ನಿಲಯಾರ್ಥಿಗಳಿಗೆ ಕೇವಲ ನಿಲಯಮೇಲ್ವಿಚಾರಕರಾಗಿರದೇ, ಪಾಲಕ ಹಾಗೂ ಶಿಕ್ಷಕರಾಗಿ ನಡೆದುಕೊಳ್ಳಬೇಕಾಗಿರುತ್ತದೆ. ನಿಲಯಾರ್ಥಿಗಳ ಶಿಸ್ತು, ನಡತೆ, ಹಾಜರಾತಿ, ವ್ಯಾಸಂಗದ ಪಗತಿ ಆರೋಗ್ಯ ಇವುಗಳ ಬಗ್ಗೆ ಅವರ ವೈಯಕ್ತಿಕ ವಿವರಗಳುಳ್ಳ ಕಡತವನ್ನು ನಿರ್ವಹಿಸಿ ಪಾಲಕರ ಸಭೆಯಲ್ಲಿ ವಿದ್ಯಾರ್ಥಿಯ ಪಾಲಕ / ಪೋಷಕರಿಗೆ ಕಡತದಲ್ಲಿನ ವಿವರಗಳನ್ನು ತೋರಿಸಿ ಸಹಿ ಪಡೆಯುವುದು.
ನಿಲಯದ ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತಂತೆ ಮೇಲ್ವಿಚಾರಣೆ:
ఎంబ ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿ ನಿಯತವಾಗಿ ಹಾಗೂ ನಿಗದಿತ ವೇಳೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೇ? ಬಗ್ಗೆ ಮೇಲ್ವಿಚಾರಕರು/ವಾರ್ಡನ್‌ರವರು ಮೇಲ್ವಿಚಾರಣೆ ಮಾಡತಕ್ಕದ್ದು. ಅನಧಿಕೃತವಾಗಿ ಗೈರುಹಾಜರಾಗುವ ಅಥವಾ ಕರ್ತವ್ಯಕ್ಕೆ ವಿಳಂಬವಾಗಿ ಬರುವ ಅಥವಾ ಕೆಲಸದ ವೇಳೆ ಮುಗಿಯುವ ಮುನ್ನವೇ ವಿದ್ಯಾರ್ಥಿನಿಲಯದಿಂದ ಹೊರ ಹೋಗುವ ಸಿಬ್ಬಂದಿಗೆ ತಮ್ಮ ಹಂತದಲ್ಲಿಯೇ ಲಿಖಿತವಾಗಿ ಎಚ್ಚರಿಕೆ ನೀಡುವುದು.
ಇಷ್ಟಾದರೂ ಸುಧಾರಿಸದಂತಹ ಸಿಬ್ಬಂದಿಯವರ ವಿರುದ್ಧ ಮೇಲಾಧಿಕಾರಿಗಳಿಗೆ ವರದಿಮಾಡಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡತಕ್ಕದ್ದು. ಅಡುಗೆ ಸಿಬ್ಬಂದಿಯವರು ಸಹ ಆರೋಗ್ಯವಂತ ರಾಗಿರುವಂತೆ ಮೇಲ್ವಿಚಾರಕರು ಕ್ರಮವಹಿಸುವುದು. ಅಡುಗೆಯವರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಶುಭ್ರ ಸಮವಸ್ತ್ರಗಳನ್ನು “ ತೊಟ್ಟಿರಬೇಕು. ಅವರ ರಜೆ ಲೆಕ್ಕವನ್ನು ಸರಿಯಾಗಿ ನಿರ್ವಹಿಸುವುದು. ಅಡುಗೆಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರಬೇಕು.
III. ವಿದ್ಯಾರ್ಥಿನಿಲಯದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
ಚಿ) ಸ್ವಂತ ಕಟ್ಟಡಗಳಿಲ್ಲದ ಸಂದರ್ಭದಲ್ಲಿ ಉತ್ತಮ ವಾತಾವರಣವಿರುವಂತಹ ಸ್ಥಳದಲ್ಲಿ ಲಭ್ಯವಿರುವ ಕಟ್ಟಡವನ್ನು ಬಾಡಿಗೆ ಮೇಲೆ ಪಡೆಯಲು ಕ್ರಮ ಕೈಗೊಳ್ಳುವುದಲ್ಲದೇ, ಇಂತಹ ಕಟ್ಟಡದಲ್ಲಿ ಗಾಳಿ ಬೆಳಕು, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸಾಕಷ್ಟು ಸ್ಥಳಾವಕಾಶ, ಅನುಕೂಲಕರವಾದ ಅಡುಗೆ ಕೋಣೆ ಮುಂತಾದ ಮೂಲಭೂತ ಸೌಕರ್ಯಗಳುಳ್ಳ ಕಟ್ಟಡವನ್ನು ವಿದ್ಯಾರ್ಥಿನಿಲಯಕ್ಕಾಗಿ ಪಡೆದುಕೊಳ್ಳುವುದು.
ಛ) ವಿದ್ಯಾರ್ಥಿನಿಲಯವು ಸ್ವಂತ ಕಟ್ಟಡದಲ್ಲಿದ್ದಲ್ಲಿ, ವಿದ್ಯಾರ್ಥಿನಿಲಯವು ಬೇಸಿಗೆ ರಜೆ ನಂತರ ಮರುಪ್ರಾರಂಭವಾಗುವ ಮುನ್ನವೇ ಕಿಟಕಿ, ಬಾಗಿಲು ವಿದ್ಯುತ್ ವೈರಿಂಗ್, ಸ್ವಿಚ್, ನೀರಿನ ಪೈಪ್ ಲೈನ್ ಅನಿಲ ಒಲೆ, ಪಾತ್ರೆ, ಪೀಠೋಪಕರಣ, ಕಟ್ಟಡದ ಮೇಲ್ಬಾವಣೆ, ಕೊಳವೆ ಬಾವಿ ರಿಪೇರಿ, ಹಿಟ್ಟು ರುಬ್ಬುವ ಯಂತ್ರ ಇತ್ಯಾದಿಗಳಲ್ಲಿ ಯಾವುದಾದರೂ ಸುಸ್ಥಿತಿಯಲ್ಲಿಲ್ಲದಿದ್ದಲ್ಲಿ, ಅಂತಹವುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ರಿಪೇರಿ ಮಾಡಿಸುವುದು.
ಛಿ) ನಿಲಯಾರ್ಥಿಗಳಿಗೆ ಹಾಸಿಗೆ, ಹೊದಿಕೆ, ತಟ್ಟೆ, ಲೋಟ, ಸಮವಸ್ತ್ರ, ಸೋಪು, ಎಣ್ಣೆ, ಟೂತ್ ಪೇಸ್ಟ್, ಬ್ರಷ್, ಲೇಖನ ಸಾಮಗ್ರಿಗಳು, ವೈದ್ಯರು ನೀಡುವ ಸಲಹೆ ಮೇರೆಗೆ ಔಷಧಿ ಇತ್ಯಾದಿಗಳನ್ನು ಸಕಾಲದಲ್ಲಿ ಒದಗಿಸುವುದು.
ಜ) ಗ್ರಂಥಾಲಯ ಪುಸ್ತಕಗಳನ್ನು ಹಾಗೂ ಆಟದ ಸಾಮಗಿಗಳನ್ನು ಇಲಾಖೆಯಿಂದ ಸುಧಾರಣಾ ಕಾರ್ಯಕ್ರಮದಡಿಯಲ್ಲಾಗಲೀ ಒದಗಿಸುವುದು. ಅಥವಾ ಸಾರ್ವಜನಿಕರ ವಂತಿಗೆಯ ಮೂಲಕವಾಗಲೀ
ಜ) ನಿಲಯಾರ್ಥಿಗಳಿಗೆ ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸುವ ಮೆನುಚಾರ್ಟ್ ಪ್ರಕಾರ ಪೌಷ್ಟಿಕ ಹಾಗೂ ಶುದ್ಧವಾದ ಮತ್ತು ರುಚಿಯಾದ ಊಟ/ಉಪಾಹಾರವನ್ನು ಒದಗಿಸುವುದು.
ಶುಚಿ, ರುಚಿ ಹಾಗೂ ಪೌಷ್ಟಿಕ ಆಹಾರ ನೀಡಿಕೆ:
ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚಕ್ಕೆ ನಿಗದಿಪಡಿಸಿರುವ ಮಾಸಿಕ ವೆಚ್ಚದ ಮಿತಿಯೊಳಗೆ ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಲಾಗುವ ಮೆನುಚಾರ್ಟ್ ಪ್ರಕಾರ ನಿಲಯಾರ್ಥಿಗಳಿಗೆ ಉಪಾಹಾರ ಹಾಗೂ 2 ಬಾರಿ ಊಟವನ್ನು ನೀಡಲು, ಅಗತ್ಯ ಆಹಾರ ಸಾಮಗ್ರಿಗಳ ಬೇಡಿಕೆ ಸಲ್ಲಿಸಿ, ಪತಿ ಮಾಹೆಯಲ್ಲಿ ಖರೀದಿಸಿ ದಾಸ್ತಾನಿನಲ್ಲಿ ಇಟ್ಟುಕೊಳ್ಳತಕ್ಕದ್ದು. ಆಹಾರಸಾಮಗ್ರಿಗಳನ್ನು ಖರೀದಿಸುವಲ್ಲಿ ಎಚ್ಚರಿಕೆವಹಿಸಿ, ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು, ತರಕಾರಿಯನ್ನು ಕೊಂಡುಕೊಳ್ಳುವುದು ಹಾಗೂ ಅವುಗಳನ್ನು ಶುದ್ಧ ಮಾಡಿಸಿ, ಸುರಕ್ಷಿತವಾಗಿ ದಾಸ್ತಾನಿನಲ್ಲಿ ಇಡುವುದು. ದಿನನಿತ್ಯ ಮೆನುಚಾರ್ಟ್ ಪ್ರಕಾರ ಆಹಾರ ತಯಾರಿಕೆ ಮಾಡಿಸಿ ನಿಲಯಾರ್ಥಿಗಳಿಗೆ ಒದಗಿಸುವುದು. ಪರಿವೀಕ್ಷಣೆಗೆ ಅನಿರೀಕ್ಷಿತವಾಗಿ ಭೇಟಿ ನೀಡುವ ಅಧಿಕಾರಿಗಳ ಪರಿವೀಕ್ಷಣೆಗೆ ಆ ದಿನ ತಯಾರಿಸಿದ ಆಹಾರದ ಸ್ಯಾಂಪಲ್‌ನ್ನು ಒಂದು ಕಡೆ ವ್ಯವಸ್ಥಿತವಾಗಿ ಎತ್ತಿಡುವುದು. ಅಡುಗೆ ತಯಾರಿಕೆಗೆ ಬಳಸುವ ಆಹಾರ ಸಾಮಗ್ರಿಗಳು ನೀರು, ತರಕಾರಿ ಶುದ್ಧವಿರತಕ್ಕದ್ದು.
V, ನಿಲಯಾರ್ಥಿಗಳ ವ್ಯಾಸಂಗ ಮತ್ತು ಶಿಕ್ಷಣ:
ನಿಲಯಮೇಲ್ವಿಚಾರಕರು ಅತ್ಯಾವಶ್ಯಕವಾಗಿ ನಿಲಯಾರ್ಥಿಗಳ ಶಿಕ್ಷಣ ಹಾಗೂ ವ್ಯಾಸಂಗದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಮತ್ತು ಶ್ರದ್ಧೆಯಿಂದ ಮೇಲ್ವಿಚಾರಣೆ ಮಾಡತಕ್ಕದ್ದು.
a) ವಿದ್ಯಾರ್ಥಿಯು ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆದ ನಂತರ ನಿಲಯದಲ್ಲಿ ನಿಯತವಾಗಿ ಹಾಜರಿರುವಂತೆ ಹಾಗೂ ಶಾಲೆಗೆ ದಿನನಿತ್ಯ ತಪ್ಪದೇ ಎಲ್ಲಾ ಪಠ್ಯವಿಷಯಗಳ ತರಗತಿಗಳಿಗೆ ಹಾಜರಾಗುತ್ತಿರುವರೇ ಎಂದು ನಿಗಾ ಇಡಬೇಕು.
b) ಶಾಲೆಯಲ್ಲಿ ನೀಡಿರುವ ಹೋಂ ವರ್ಕ್, ಎಲ್ಲಾ ಪಠ್ಯ ವಿಷಯಗಳ ನೋಟ್ಸ್‌ಗಳನ್ನು ಆಯಾ ದಿನದಂದೇ ಬರೆದಿರುವರೇ ಎಂದು ಆಗಿಂದಾಗ್ಗೆ ಅನಿರೀಕ್ಷಿತವಾಗಿ ಪರಿಶೀಲನೆ ಮಾಡತಕ್ಕದ್ದು.
c) ಅರೆಕಾಲಿಕ ಬೋಧಕರನ್ನು ಸಕಾಲದಲ್ಲಿ ನೇಮಕ ಮಾಡಿಸಿ ಶಾಲೆ ಹಾಗೂ ವಸತಿನಿಲಯದಲ್ಲಿ ನಡೆಸುವ ಮಾಸಿಕ/ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಯಾವ ಪಠ್ಯ ವಿಷಯದಲ್ಲಿ ಕಡಿಮೆ ಅಂಕಗಳಿಸಿ, ಪ್ರಗತಿಯಲ್ಲಿ ಹಿಂದುಳಿದಿರುವರೋ, ಅಂತಹ ವಿದ್ಯಾರ್ಥಿಗಳಿಗೆ ಆ ವಿಷಯಗಳಲ್ಲಿ ವಾರದಲ್ಲಿ ಕನಿಷ್ಠ ಎರಡು ದಿನ ವಿಶೇಷ ಬೋಧನೆ ವ್ಯವಸ್ಥೆ ಗೊಳಿಸುವುದು.
d) ವಿದ್ಯಾರ್ಥಿನಿಲಯದಲ್ಲಿ ಶೈಕ್ಷಣಿಕ ದಾಖಲೆಯ ನಿರ್ವಹಣೆಗಾಗಿ ಒಂದು ವಹಿಯನ್ನು ಇಟ್ಟು ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಎರಡು ಅಥವಾ ಮೂರು ಪುಟಗಳನ್ನು ಕಾದಿರಿಸಿ, ಈ ಕೆಳಗಿನಂತೆ ನಿಯತವಾಗಿ ನಿಲಯಾರ್ಥಿಯು ಶಾಲೆಯಲ್ಲಿ ನಡೆಸುವ ಮಾಸಿಕ/ಅರ್ಧವಾರ್ಷಿಕ ಪರಿಕ್ಷೆಗಳಲ್ಲಿ ಅಂಕಗಳನ್ನು ಸಂಗ್ರಹಿಸಿ, ನಿಲಯಾರ್ಥಿಯ ಇನ್ನಿತರ ವೈಯ್ಯಕ್ತಿಕ ದಾಖಲೆಗಳೊಂದಿಗೆ ದಾಖಲಿಸುವುದು ಹಾಗೂ ನಿಲಯಾರ್ಥಿಯ ಪಾಲಕರ/ಪೋಷಕರ ಸಭೆಯಲ್ಲಿ ಗಮನಕ್ಕೆ ತಂದು ಅವರ ಸಹಿ ಪಡೆಯುವುದು.









