ವಿಜಯಪುರ : ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ವಿವಿಧ ಸಂಘಟನೆಗಳ ಒಕ್ಕೂಟದಿಂದ ವಿಜಯಪುರ ಬಂದ್ ಗೆ ಕರೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಅಹಿಂದ, ಪ್ರಗತಿಪರ, ದಲಿತ ಸಂಘಟನೆಗಳ ಒಕ್ಕೂಟದಿಂದ ಡಿ.30ರಂದು ಬಂದ್‌ಗೆ ಕರೆ ನೀಡಿದ್ದು, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ವಿಜಯಪುರ ನಗರ ವ್ಯಾಪ್ತಿಯಲ್ಲಿ ಶಾಲಾ– ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿಜಯಪುರ ನಗರ ಸಾರಿಗೆ ಸಂಚಾರವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಇಂದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಸೋಲಾಪೂರ ಕಡೆಯಿಂದ ಜಮಖಂಡಿ ಕಡೆಗೆ ತೆರಳುವ ವಾಹನಗಳು ಬಿ.ಎಂ. ಪಾಟೀಲ ಸರ್ಕಲ್, ಇಟಂಗಿಹಾಳ ಕ್ರಾಸ್, ಇಟಗಿ ಪೆಟ್ರೋಲ್ ಪಂಪ್, ರಿಂಗ್ ರೋಡ್ ಬಳಸಿಕೊಂಡು ತೆರಳಲು ಅವಕಾಶ ಕಲ್ಪಿಸಲಾಗಿದೆ. ಇಂಡಿ ಕಡೆಯಿಂದ ಜಮಖಂಡಿ ಕಡೆಗೆ ತೆರಳುವ ವಾಹನಗಳು ಸಿಂದಗಿ ಬೈಪಾಸ್, ಬೆಂಗಳೂರು ಬೈಪಾಸ್, ರಿಂಗ್ ರೋಡ್ ಮಾರ್ಗ ಬಳಸಿ ಸಂಚಾರಕ್ಕೆ ಅನುವು ಕಲ್ಪಿಸಲಾಗಿದ್ದು, ಅಥಣಿ ಕಡೆಯಿಂದ ಸಿಂದಗಿ ಕಡೆಗೆ ತೆರಳುವ ವಾಹನಗಳು ಇಟಗಿ ಪೆಟ್ರೋಲ್ ಪಂಪ್, ಕೋಲಾರ ರಸ್ತೆ ಬೆಂಗಳೂರ ಬೈಪಾಸ್, ರಿಂಗ್ ರೋಡ್ ಬಳಸಿಕೊಂಡು ತೆರಳುವಂತೆ ಮಾರ್ಗ ರೂಪಿಸಲಾಗಿದೆ. ಬೆಂಗಳೂರು ಬೈಪಾಸ್, ಕಡೆಯಿಂದ ಅಥಣಿ ಹಾಗೂ ಜತ್ತ ಕಡೆಗೆ ತೆರಳುವ ವಾಹನಗಳು ಬೆಂಗಳೂರು ಬೈಪಾಸ್, ಕೋಲಾರ ರಸ್ತೆ ರೈಲ್ವೆ ಬ್ರಿಡ್ಜ್, ಇಟಗಿ ಪೆಟ್ರೋಲ್ ಪಂಪ್, ರಿಂಗ್ ರೋಡ್ ಬಳಸಿಕೊಂಡು ತೆರಳುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.