ಬೆಂಗಳೂರು : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲೆ ಓದಲಾದ (1)ರ ಏಕಕಡತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ತಾನಪುರ ಹುಕ್ಕೇರಿ ತಾಲ್ಲೂಕು, ಶಾಲೆಯ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಿದ್ದು ಸದರಿ ಗ್ರಾಮದಿಂದ 5 ಕಿಮೀ ಒಳಗಾಗಿ ಯಾವುದೇ ಪ್ರೌಢ ಶಾಲೆಗಳು ಇರುವುದಿಲ್ಲ. ಸದರಿ ಗ್ರಾಮದಿಂದ ಸಮೀಪದ ಸರಕಾರಿ ಪ್ರೌಢ ಶಾಲೆಗಳಾದ 1) ಸರಕಾರಿ ಪ್ರೌಢ ಶಾಲೆ ಅವರಗೋಳ ರಸ್ತೆ ಮುಖಾಂತರ ಶಾಲೆಗೆ ತಲುಪಲು 7 ಕಿ ಮೀ ದೂರ ಇರುತ್ತದೆ. 2) ಸರಕಾರಿ ಪ್ರೌಢ ರಾ ಶಿರಗಾಂವ ರಸ್ತೆ ಮುಖಾಂತರ ಶಾಲೆಗೆ ತಲುಪಲು 8 ಕಿ ಮೀ ದೂರ ಇರುತ್ತದೆ. 3) ಸರಕಾರಿ ಪ್ರೌಢ ಶಾಲೆ ಬೇಳೆವಾಡ ರಸ್ತೆ ಮುಖಾಂತರ ಶಾಲೆಗೆ ತಲುಪಲು 6 ಕಿ ಮೀ ದೂರ ಇರುತ್ತದೆ. 4) ಸರಕಾರಿ ಪ್ರೌಢ ಶಾಲೆ ಮಸೂರ ಇದು 8 ಕಿ ಮೀ ಅಂತರ ಇರುತ್ತದೆ. 5) ಎಸ್ ಎಂ ಎಸ್ ಪ್ರೌಢ ಶಾಲೆ ಘೋಡಗೇರಿ ಸಹ 7 ಕಿ.ಮೀ. ಅಂತರ ಇದ್ದು ಈ ಶಾಲೆಗೆ ಹೋಗಲು ನೋಗನಿಹಾಳ ಘೋಡಗೇರಿ ಗ್ರಾಮದ ಮಧ್ಯದಲ್ಲಿ ಬಿಡ್ ಇದೆ. ಇದು ಘಟಪ್ರಭಾ ಹಿರಣ್ಯಕೇಶಿ ನದಿಗಳ ಸಂಗಮದಿಂದ ಮಳೆಗಾಲದಲ್ಲಿ ನೀರು ಬ್ರಿಡ್ಜ್ ಮೇಲೆ ಬಂದು ದಾರಿ
ಬಂದಾಗುತ್ತದೆ. ಮಕ್ಕಳಿಗೆ ಹೋಗಲು ತೊಂದರೆ ಆಗುತ್ತದೆ. ಇದರಿಂದಾಗಿ ಸುಲ್ತಾನಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ತಾನಪೂರ ಹುಕ್ಕೇರಿ ತಾಲ್ಲೂಕು, ಈ ಶಾಲೆಯನ್ನು 8 ನೇ ತರಗತಿಯಿಂದ 9 ನೇ ತರಗತಿಗೆ ಉನ್ನತೀಕರಿಸಿ ಸುಲ್ತಾನಪೂರ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಓದಲಾದ (2)ರ ಏಕಕಡತದಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗ, ಧಾರವಾಡ ವಿಭಾಗ ಹಾಗೂ ಕಲಬುರುಗಿ ವಿಭಾಗದಲ್ಲಿನ ಒಟ್ಟು 97 ಮರಾಠಿ ಹಾಗೂ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವ ಕುರಿತು ಪುಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರು ಸಲ್ಲಿಸಿರುವ ಏಕ ಕಡತದಲ್ಲಿನ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಇಪಿ 211 ಎಸ್‌ಓಹೆಚ್ 2024.
ಬೆಂಗಳೂರು, ದಿನಾಂಕ: 25/04/2025
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವ / ಮರಾಠಿ ಹಾಗೂ ಮಾಧ್ಯಮ 97 ಶಾಲೆಗಳ ಪೈಕಿ ಈ ಕೆಳಕಂಡ ಒಟ್ಟು 17 ಪ್ರೌಢಶಾಲೆಗಳನ್ನು ಕೇಂದ್ರ ಮಾನವ ಸಂಪನ್ಮೂಲಗಳ ಮಂತ್ರಾಲಯದ ಮಾರ್ಗಸೂಚಿಗಳನ್ನಯ ಉನ್ನತೀಕರಿಸಲು ಷರತ್ತಿಗೊಳಪಟ್ಟು ಸಹಮತಿಸಿದೆ.
ಷರತ್ತುಗಳು:-
1. ಪ್ರಸಕ್ತ ಶೈಕ್ಷಣಿಕ ವರ್ಷವು ಈಗಾಗಲೇ ಪ್ರಾರಂಭವಾಗಿರುವುದರಿಂದ, ಪ್ರಸ್ತಾಪಿತ ಪ್ರೌಢಶಾಲೆಗಳ ಉನ್ನತೀಕರಣವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ (AY-2025-26) ಪರಿಗಣಿಸುವುದು.
2. ಕಲ್ಯಾಣ ಕರ್ನಾಟಕ ವಿಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಆರ್ಥಿಕ ಸಹಾಯದೊಂದಿಗೆ ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವುದು.
3. ಹೀಗೆ ಉನ್ನತೀಕರಿಸಿದ ಪ್ರೌಢಶಾಲೆಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಒದಗಿಸುವುದನ್ನು ಸ್ಥಗಿತಗೊಳಿಸಿದ ನಂತರದಲ್ಲಿ, ಸದರಿ ಪ್ರೌಢಶಾಲೆಗಳಿಗೆ ಕೇಂದ್ರ ಶಿಕ್ಷಣ ಮಂತ್ರಾಲಯದ ಮಾನದಂಡಗಳನ್ನಯ ನಿಗಧಿತ ವಿದ್ಯಾರ್ಥಿಗಳ ದಾಖಲಾತಿ ಇಲ್ಲದಿದ್ದಲ್ಲಿ, ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಮುಂದುವರಿಸತಕ್ಕದ್ದು (reverted back to GHPS);
4. ಉನ್ನತೀಕರಿಸಿರುವುದರಿಂದ ಉಂಟಾಗುವ ಹುದ್ದೆ ಸೃಜನೆಯನ್ನು ಇಲಾಖೆಗೆ ಮಂಜೂರಾಗಿರುವ ಹುದ್ದೆಗಳಿಂದಲೇ ನಿಯೋಜನೆಯ ಮೇಲೆ ಭರ್ತಿ ಮಾಡತಕ್ಕದ್ದು. ಈ ಸಂಬಂಧ ಯಾವುದೇ ಹೆಚ್ಚುವರಿ ಹುದ್ದೆಗಳ ಸೃಜನೆ ಕೋರಿ ಪ್ರಸ್ತಾವನೆ ಸಲ್ಲಿಸಬಾರದು.
5. ಕೆ.ಪಿ.ಎಸ್ ಶಾಲೆಗಳಿಗೆ ಸಂಬಂಧಿಸಿದಂತೆ, 2024-2025ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ:96(a) ರನ್ನಯ ಕ್ರಮ ಕೈಗೊಳ್ಳುವುದು.