ಬೆಂಗಳೂರು : 2025 ನೇ ಸಾಲಿನ ಬಿಎಂಟಿಸಿ ನೌಕರರ ಸಾರ್ವತ್ರಿಕ ವರ್ಗಾವಣೆ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದಂತೆ ಸಂಸ್ಥೆಯಲ್ಲಿ ಉಲ್ಲೇಖಿತ ಸುತ್ತೋಲೆಯನ್ವಯ ವರ್ಗಾವಣೆ ನೀತಿಯು ಜಾರಿಯಲ್ಲಿರುತ್ತದೆ. ಅದರಂತೆ, ಸಂಸ್ಥೆಯ ದರ್ಜೆ-3 ಮೇಲ್ವಿಚಾರಕ, ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4ರ ವರ್ಗದ ನೌಕರರುಗಳಿಗೆ 2025 ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಯನ್ನು ಸ್ಥಾನಗಳ ಲಭ್ಯತೆ ಹಾಗೂ ಸಂಸ್ಥೆಯ ಅವಶ್ಯಕತೆಗನುಗುಣವಾಗಿ ಸಂಪೂರ್ಣವಾಗಿ ಆನ್-ಲೈನ್ ಮೂಲಕ ಮಾಡಲು ಉದ್ದೇಶಿಸಲಾಗಿರುತ್ತದೆ.
ಪ್ರಸ್ತುತ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಷರತ್ತುಗಳನ್ನು ನಿಗಧಿಪಡಿಸಲಾಗಿದೆ.
I ವರ್ಗಾವಣೆ ಅರ್ಜಿಯನ್ನು ಸಲ್ಲಿಸಲು ಕನಿಷ್ಟ ಅರ್ಹತೆಗಳು:-
1. ವರ್ಗಾವಣೆ ಅರ್ಜಿ ಸಲ್ಲಿಸಲು ಬಯಸುವ ನೌಕರ ಸೇವೆಯಲ್ಲಿ ಖಾಯಂಗೊಂಡಿರತಕ್ಕದ್ದು.
2. ಸಾಮಾನ್ಯ ವರ್ಗಾವಣೆ: ಪ್ರಸ್ತುತ ಕಾರ್ಯಸ್ಥಳದಲ್ಲಿ ಪರೀಕ್ಷಣಾರ್ಥಿ ದಿನಾಂಕದಿಂದ ಅಥವಾ ಕಾರ್ಯಸ್ಥಳಕ್ಕೆ ವರ್ಗಾವಣೆಗೊಂಡ ದಿನಾಂಕದಿಂದ ಕನಿಷ್ಟ 02(ಎರಡು) ವರ್ಷ ಸೇವೆ ಸಲ್ಲಿಸಿರಬೇಕು.
3. ಪರಸ್ಪರ ವರ್ಗಾವಣೆ: ಅರ್ಜಿ ಸಲ್ಲಿಸುವ ಇಬ್ಬರು ಖಾಯಂ ಸಿಬ್ಬಂದಿಯಾಗಿದ್ದು, ಪ್ರಸ್ತುತ ಕಾರ್ಯ ಸ್ಥಳದಲ್ಲಿ ಕನಿಷ್ಠ 01 (ಒಂದು) ವರ್ಷ ಸೇವೆ ಸಲ್ಲಿಸಿರಬೇಕು.
4 . ಶಿಸ್ತು ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ ಬಾಕಿ ಇರುವ ನೌಕರರು ವರ್ಗಾವಣೆಗೆ ಅರ್ಹರಿರುವುದಿಲ್ಲ.
5. ನಿಯಮ-23 ರಡಿ ಆರೋಪಣಾ ಪತ್ರ ಜಾರಿಯಾಗಿದ್ದಲ್ಲಿ/ ಕ್ರಿಮಿನಲ್ ಮೊಕ್ಕದ್ದಮೆಯನ್ನು ಎದುರಿಸುತ್ತಿರುವ / ಭಾಗಿಯಾಗಿರುವ ನೌಕರರು ಅರ್ಹರಿರುವುದಿಲ್ಲ.
6. ಕೋರಿಕೆ. ಪರಸ್ಪರ ವರ್ಗಾವಣೆಯಲ್ಲಿ ಅರ್ಹತೆಯನ್ನು ಹೊಂದಿ ವರ್ಗಾವಣೆ ಆದೇಶ ಹೊರಡಿಸಿದ ನಂತರ ವರ್ಗಾವಣೆಯನ್ನು ರದ್ದುಪಡಿಸಲು ಅವಕಾಶವಿರುವುದಿಲ್ಲ.
II ವರ್ಗಾವಣೆಗೆ ಆದ್ಯತೆ ನೀಡುವ ವಿಶೇಷ ಪ್ರಕರಣಗಳು:
1. ನೌಕರರ ತೀವ್ರ ತರಹದ ಅನಾರೋಗ್ಯ ಪ್ರಕರಣಗಳು (ಹೆಚ್.ಐ.ವಿ. ಹೃದಯ ರೋಗ, ಕ್ಯಾನ್ಸರ್, ಸ್ಟೈನಲ್ ಕಾರ್ಡ್, ಕಿಡ್ನಿ ವೈಫಲ್ಯ ಹಾಗೂ ಮೆದುಳು ಸಂಬಂಧಿಸಿದ ಖಾಯಿಲೆಗಳು). (ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು).
2. 10 ವರ್ಷ ವಯಸ್ಸು ಮೀರದಿರುವ ಅಪ್ರಾಪ್ತ ಮಕ್ಕಳಿರುವ ವಿಧವೆ ಹಾಗೂ ವಿಧುರ ಪ್ರಕರಣಗಳು. (ಪೂರಕ ದಾಖಲೆಗಳನ್ನು ಸಲ್ಲಿಸತಕ್ಕದ್ದು).
3. ಶೇ.40ಕ್ಕೂ ಮೇಲ್ಪಟ್ಟು ಅಂಗವಿಕಲತೆ ಹೊಂದಿರುವ ಅಂಗವಿಕಲ ನೌಕರರ ಪ್ರಕರಣಗಳು. (ನಿಗದಿತ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು).
4. ಪತಿ – ಪತ್ನಿ ಪ್ರಕರಣಗಳು:- ಖಾಯಂ ಸಿಬ್ಬಂದಿಯಾಗಿದ್ದು, ಇದರಲ್ಲಿ ಒಬ್ಬರು ಅವರ ಹುದ್ದೆಯಲ್ಲಿ ಕನಿಷ್ಟ ಒಂದು ವರ್ಷ ಸೇವೆ ಸಲ್ಲಿಸಿರಬೇಕು. (ಇಬ್ಬರೂ ಸರ್ಕಾರಿ/ನಿಗಮ/ಮಂಡಳಿ ಹಾಗೂ ಸರ್ಕಾರದ ಸಾರ್ವಜನಿಕ ಉದ್ಯಮಗಳ ಖಾಯಂ ನೌಕರರಾಗಿದ್ದಲ್ಲಿ ಮಾತ್ರ ಅನ್ವಯಿಸುತ್ತದೆ. ಆಯಾ ಇಲಾಖೆಯ ಸೂಕ್ತ ಪ್ರಾಧಿಕಾರದಿಂದ ಧೃಡೀಕರಣ ಪತ್ರ ಪಡೆದು ಸಲ್ಲಿಸತಕ್ಕದ್ದು)
5. ನಿವೃತ್ತಿ ಅಂಚಿನಲ್ಲಿರುವ ನೌಕರರ ಪ್ರಕರಣಗಳು: ವಯೋ ನಿವೃತಿ ಹೊಂದಲು 02 ವರ್ಷ ಅಥವಾ ಅದಕ್ಕಿಂತ ಕಡಿಮೆ ಸೇವಾವಧಿವುಳ್ಳ ನೌಕರರರು.
6. ಆಧ್ಯತೆ ನೀಡುವ ವಿಶೇಷ ಪ್ರಕರಣಗಳಿಗೆ ಆದ್ಯತೆಯನ್ನು ಶೇಕಡ 10ಕ್ಕೆ ಮಿತಿಗೊಳಿಸಲಾಗಿದೆ.
III ವರ್ಗಾವಣೆಗೆ ಅರ್ಜಿ ಸಲ್ಲಿಸುವ ವಿಧಾನ:
1. ವರ್ಗಾವಣೆ ಬಯಸುವ ನೌಕರರು ಅರ್ಜಿಯನ್ನು ಕಡ್ಡಾಯವಾಗಿ ಆನ್‌ಲೈನ್ ಮುಖಾಂತರವೇ … 2 http://ems.mvbmtc.com/BMTC/login.php (EMS login) ವೆಬ್‌ಸೈಟ್‌ನ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
2. 01-02-2025 80 28-02-2025 0 ಸಂಜೆ 6.00 ಗಂಟೆವರೆಗೆ EMS login ಮೂಲಕ ಸಲ್ಲಿಸುವುದು.
3. ನೌಕರರು ವರ್ಗಾವಣೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ವರ್ಗಾವಣೆ ಬಯಸುವ ಸ್ಥಳಗಳ ಬಗ್ಗೆ ಮೂರು ಆಧ್ಯತೆಗಳನ್ನು ನಮೂದಿಸುವುದು. ಒಂದು ವೇಳೆ ನೌಕರರು ಒಂದೇ ಸ್ಥಳಕ್ಕೆ ವರ್ಗಾವಣೆ ಬಯಸಿದ್ದಲ್ಲಿ ಒಂದೇ ಸ್ಥಳವನ್ನು ಮೂರು ಆಧ್ಯತೆಗಳ ಕಾಲಂಗಳಲ್ಲಿಯು ನಮೂದಿಸತಕ್ಕದ್ದು. (ವರ್ಗಾವಣೆ ಸ್ಥಳಗಳನ್ನು ನಿಗದಿಪಡಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್-ಲೈನ್ ಮೂಲಕ ನಿರ್ವಹಿಸುತ್ತಿರುವುದರಿಂದ ಉದ್ಭವಿಸಬಹುದಾದ ಖಾಲಿ ಸ್ಥಾನಗಳನ್ನು ಪರಿಗಣಿಸುವುದರಿಂದ ಮೂರು ಆಧ್ಯತೆಗಳನ್ನು ಕಡ್ಡಾಯಗೊಳಿಸಿದೆ.)
4. ಒಮ್ಮೆ ಆಯ್ಕೆ ಮಾಡಿಕೊಂಡ ವರ್ಗಾವಣೆ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.
5. ವಿಶೇಷ ಪ್ರಕರಣಗಳಲ್ಲಿ ಆದ್ಯತೆ ಕೋರುವ ಸಿಬ್ಬಂದಿಗಳು ಎಲ್ಲಾ ಮೂಲ ದಾಖಲಾತಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ:28-02-2025 ರೊಳಗಾಗಿ ಪಡೆದಿರಬೇಕು’ ಹಾಗೂ ವಿಶೇಷ ಪ್ರಕರಣಗಳ ವಿವರಗಳನ್ನು ಆನ್-ಲೈನ್ ಅರ್ಜಿಯಲ್ಲಿ ನಮೂದಿಸತಕ್ಕದ್ದು.
6. ಎಲ್ಲಾ ನೌಕರರು ವರ್ಗಾವಣೆ ಅರ್ಜಿ ಸಲ್ಲಿಸಿದ ನಂತರ ಮುದ್ರಿತ ಪ್ರತಿಯನ್ನು ಮೂಲ ದಾಖಲಾತಿಗಳೊಂದಿಗೆ ದಿನಾಂಕ:28-02-2025 ರೊಳಗಾಗಿ ತಪ್ಪದೆ ಯುಕ್ತ ಮಾರ್ಗದಲ್ಲಿ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರು / ಕಛೇರಿ ಮುಖ್ಯಸ್ಥರಿಗೆ ಸಲ್ಲಿಸಿ ಸ್ವೀಕೃತಿ ಪಡೆಯುವುದು. ತಪ್ಪಿದಲ್ಲಿ ಅಂತಹ ನೌಕರರ ವರ್ಗಾವಣೆ ಅರ್ಜಿಯನ್ನು ವರ್ಗಾವಣೆಗೆ ಪರಿಗಣಿಸಲಾಗುವುದಿಲ್ಲ.
7. ಪರಸ್ಪರ ವರ್ಗಾವಣೆ ಕೋರಿಕೆ ಅರ್ಜಿ ಸಲ್ಲಿಸಲು ಬಯಸುವ ಇಬ್ಬರೂ ನೌಕರರು ಪ್ರತ್ಯೇಕ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಹಾಗೂ ಮುದ್ರಿತ ಅರ್ಜಿಯಲ್ಲಿ ಇಬ್ಬರೂ ನೌಕರರು ಸಹಿ ಮಾಡಿ ಸಂಬಂಧಿಸಿದ ಘಟಕ ವ್ಯವಸ್ಥಾಪಕರು / ಕಛೇರಿ ಮುಖ್ಯಸ್ಥರಿಗೆ ಸಲ್ಲಿಸುವುದು.
8. ನೌಕರರು ವರ್ಗಾವಣೆಗೆ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾನದಂಡಗಳನ್ನು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಮನವರಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ವರ್ಗಾವಣೆ ಅರ್ಜಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಅವಕಾಶವಿರುವುದಿಲ್ಲ.