ಬೆಂಗಳೂರು: ಕರ್ನಾಟಕ ಹೈಕೋರ್ಟ್ ಉಬರ್, Rapido ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಈ ಆದೇಶದಂತೆ ರಾಜ್ಯಾಧ್ಯಂತ ಉಬರ್, Rapido ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ.
ಈ ಸಂಬಂಧ ಇಂದು ಸಾರಿಗೆ ಇಲಾಖೆಯ ಕಾರ್ಯದರ್ಶಿ, ಸಾರಿಗೆ ಮತ್ತು ರಸ್ತೆ, ಸುರಕ್ಷತೆ ಆಯುಕ್ತರಿಗೆ ಪತ್ರ ಬರೆದಿರುವಂತ ಅವರು, ಕರ್ನಾಟಕ ಉಚ್ಚ ನ್ಯಾಯಾಲಯವು WP No.6421/2022 (MV) c/w WP No.14627/2021 (MV), WP No.19869/2021 (MV), WP No.24569/2023 (MV) (Uber India Systems Pvt.Ltd. Mumbi, Gurgaon & Bangalore and others V/S State of Karnataka, Rep.by the Secretary, Department of Transport, Bangalore and others) ಸಂಬಂಧಿಸಿದಂತೆ ದಿನಾಂಕ:02-04-2025 ರಂದು ನೀಡಿದ ಆದೇಶದ ಪುಟ ಸಂಖ್ಯೆ 70 ರಲ್ಲಿ ಕಂಡಿಕೆ (ಬಿ) ನಲ್ಲಿ, ಕೆಳಕಂಡಂತೆ ಆದೇಶ ನೀಡಿರುತ್ತದೆ ಎಂದಿದ್ದಾರೆ.
The petitioners (M/s Uber India Systems Pvt.Ltd., M/s Roppen Transportation Services Pvt. Ltd., and M/s ANI Technologies Pvt.Ltd.) are permitted six [6] weeks from today to cease all their operations as aggregators of Bike-taxis. The State Government is called upon to ensure that all Bike Taxi Operations are stopped after these six [6] weeks.
ಮೇಲ್ಕಂಡ ಆದೇಶದ ಮೇರೆಗೆ M/s Uber India Systems Pvt.Ltd., M/s Roppen Transportation Services Pvt.Ltd. and M/s ANI Technologies Pvt.Ltd, ಈ ಸಂಸ್ಥೆಗಳಿಗೆ ಬೈಕ್, ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲು ಆರು ವಾರಗಳ ಕಾಲಾವಕಾಶ ನೀಡಿರುತ್ತದೆ. ಆದ್ದರಿಂದ, ಮಾನ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.