ಕನಕಪುರ : ದೇಶಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳವಾಗಿದ್ದು, ಬಿಸಿಲಿನ ತಾಪಕ್ಕೆ ಕನಕಪುರ ತಾಲೂಕಿನಲ್ಲಿ ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕನಕಪುರ ತಾಲೂಕಿನ ಬೆಟ್ಟಹಳ್ಳಿ ಹಾಗೂ ಯಲುವನಾಥ ಗ್ರಾಮಗಳ ಬಳಿ ಆಹಾರದ ಕೊರತೆ ಮತ್ತು ಬಿಸಿಲಿನ ತಾಪಕ್ಕೆ ಕಾಡಾನೆಗಳು ಸಾವನ್ನಪ್ಪಿವೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಟ್ಟಹಳ್ಳಿ ಬಳಿ 14 ವರ್ಷದ ಗಂಡಾನೆ ಸಾವನ್ನಪ್ಪಿದ್ದು, ಯಲುವನಾಥ ಗ್ರಾಮದ ಸಮೀಪದ ಅರಣ್ಯದಲ್ಲಿ 30 ವರ್ಷದ ಆನೆ ಮೃತಪಟ್ಟಿದೆ. ಈ ಆನೆ ಆಹಾರ ಸಿಗದೆ, ಬಿಸಿಲಿನ ತಾಪದಿಂದ ನಿತ್ರಾಣಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.