ಬೆಂಗಳೂರು : ಪ್ರಾಥಮಿಕ ಶಾಲಾ ಶಿಕ್ಷಕರ ವಲಯ ವರ್ಗಾವಣೆ/ಶಿಕ್ಷಕರ ಹೆಚ್ಚುವರಿ/ ವರ್ಗಾವಣೆ, ಶಿಸ್ತು ಪ್ರಕರಣಗಳು, ನಿರ್ಧಿಷ್ಟಪಡಿಸಿದ ಹುದ್ದೆಗಳ ವರ್ಗಾವಣೆ ಹಾಗೂ ಇನ್ನಿತರೆ ಆಡಳಿತಾತ್ಮಕ ನೀತಿ ವಿಷಯದ ಕುರಿತಂತೆ ಬಂದಿರುವ ಕೆ.ಎ.ಟಿ/ಉಚ್ಚ ನ್ಯಾಯಾಲಯಗಳ ತೀರ್ಪನ್ನು ಉಪನಿರ್ದೇಶಕರ ಹಂತದಲ್ಲಿ ಅನುಷ್ಟಾನಗೊಳಿಸಿರುವ ಬಗ್ಗೆ ಪರಿಶೀಲಿಸಲು ವಿಭಾಗಮಟ್ಟದ ಕ್ರೋಢೀಕೃತ ವರದಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರ ವಲಯ ವರ್ಗಾವಣೆ, ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ, ಕೋರಿಕೆ ವರ್ಗಾವಣೆ, ಶಿಸ್ತು ಪ್ರಕರಣಗಳು, ನಿರ್ಧಿಷ್ಟಪಡಿಸಿದ ಹುದ್ದೆಗಳ ವರ್ಗಾವಣೆ ಹಾಗೂ ಇನ್ನಿತರೆ ಆಡಳಿತಾತ್ಮಕ ನೀತಿ ವಿಷಯದ ಕುರಿತಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಹಾಗೂ ಉಚ್ಚನ್ಯಾಯಾಲಯದಿಂದ ವಿವಿಧ ದಿನಾಂಕಗಳಲ್ಲಿ ತೀರ್ಪು ಬಂದಿರುವ ವಿಷಯ ಸ್ವಯಂ ವೇಧ್ಯವಾಗಿರುತ್ತದೆ. ಸದರಿ ನ್ಯಾಯಾಲಯಗಳಲ್ಲಿ ಕೆಲವು ಪ್ರಕರಣದಲ್ಲಿ ಅರ್ಜಿದಾರರ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿರುತ್ತದೆ. ಕೆಲವು ಪ್ರಕರಣದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಸೂಚಿಸಿರುತ್ತದೆ. ಕೆಲವು ಪ್ರಕರಣದಲ್ಲಿ ಇಲಾಖೆಗೆ ವ್ಯತಿರಿಕ್ತ ತೀರ್ಪುಗಳು ಬಂದಿರುವುದನ್ನು ಗಮನಿಸಲಾಗಿದೆ.
ಇಂತಹಾ ಪ್ರಕರಣಗಳಲ್ಲಿ ಸಕ್ಷಮ ವ್ಯಾಜ್ಯ ನಿರ್ವಹಣಾಧಿಕಾರಿಗಳು ಸಂಬಂಧಪಟ್ಟ ಉಪನಿರ್ದೇಶಕರು(ಆಡಳಿತ) ಇವರೇ ಆಗಿರುವುದರಿಂದ ನ್ಯಾಯಾಲಯದ ತೀರ್ಪನ್ನು ನಿಗಧಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸದೇ ಇರುವುದರಿಂದ ನ್ಯಾಯಾಂಗ ನಿಂದನಾ ದಾವೆ ದಾಖಲಾಗುತ್ತಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಉಪನಿರ್ದೇಶಕರ ವಿಳಂಬಧೋರಣೆಯಿಂದ ನಿಗಧಿತ ಕಾಲಮಿತಿಯೊಳಗೆ ಅರ್ಜಿದಾರ ಶಿಕ್ಷಕರಿಗೆ ನಿಯಮಾನುಸಾರ ಹಿಂಬರಹ ನೀಡದೇ ಇರುವುದು ಇಲಾಖೆಯ ವಿರುದ್ಧ ತೀರ್ಪು ಬಂದಿದ್ದರೂ ಮೇಲ್ಮನವಿ ಸಲ್ಲಿಸದೇ ಅನಗತ್ಯ ಕಾಲಹರಣ ಮಾಡಿ ಇಲಾಖೆಯನ್ನು ಮುಜುಗರಕ್ಕೆ ಒಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾನ್ಯ ಆಯುಕ್ತರು ಹಾಗೂ ನಿರ್ದೇಶಕರುಗಳನ್ನು ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಗೆ ನ್ಯಾಯಾಲಯವು ಆದೇಶಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿರುತ್ತದೆ.
ಇದಕ್ಕೆ ಸಕ್ಷಮ ವ್ಯಾಜ್ಯ ನಿರ್ವಹಣಾಧಿಕಾರಿಗಳು ಪ್ರಕರಣದ ತೀವ್ರತೆಯನ್ನು ಗಮನಿಸದೇ ಪ್ರತೀ ಹಂತದಲ್ಲಿ ಬೇಜವಾಬ್ದಾರಿತನ ಹಾಗೂ ತೀವ್ರ ಉದಾಸೀನತೆ ತೋರಿರುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿರುತ್ತದೆ. ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದ್ದು ನ್ಯಾಯಾಲಯ ಪ್ರಕರಣಗಳಲ್ಲಿ ಜಿಲ್ಲಾವಾರು ಪ್ರಗತಿ ಪರಿಶೀಲನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿರುತ್ತದೆ.
Accordance with law ‘ಎಂದಿರುವ ಪ್ರಕರಣದಲ್ಲಿ ಅರ್ಜಿದಾರ ಶಿಕ್ಷಕರಿಗೆ ಸೂಕ್ತ ಹಿಂಬರಹ ನೀಡಬೇಕಾಗುತ್ತದೆ.
ಅರ್ಜಿದಾರರ ಅರ್ಜಿಯನ್ನು ‘Dismiss’ ಕ್ರಮವಹಿಸಬೇಕಾಗುತ್ತದೆ. ವಜಾಗೊಳಿಸಿದ್ದಲ್ಲಿ ನ್ಯಾಯಾಲಯ ತೀರ್ಪಿನಂತೆ
ಅರ್ಜಿದಾರರ ಅರ್ಜಿಯನ್ನು ನ್ಯಾಯಾಲಯವು ‘Application is allowed’ ಅಂಗೀಕರಿಸಿ ಇಲಾಖೆಗೆ ವ್ಯತಿರಿಕ್ತ ತೀರ್ಪು ಬಂದಿದ್ದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಅಥವಾ ತೀರ್ಪಿನ ಆನುಷ್ಟಾನಕ್ಕೆ ಮಾನ್ಯ ಆಯುಕ್ತರಿಗೆ ಪತ್ರ ಬರೆದಿರಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಪತ್ರದಲ್ಲಿ ಲಗತ್ತಿಸಿರುವ ನಮೂನೆಯಲ್ಲಿ ದಿನಾಂಕ: 01/01/2023 ರಿಂದ 15/03/2025 ರ ಒಳಗೆ ವಿವಿಧ ನ್ಯಾಯಾಲಯಗಳಿಂದ ಬಂದಿರುವ ನ್ಯಾಯಾಲಯ ಪ್ರಕರಣಗಳ ತೀರ್ಪಿನ ಹಾಗೂ ತೀರ್ಪಿನ ಕುರಿತಂತೆ ಕೈಗೊಳ್ಳಲಾಗಿರುವ ಕ್ರಮದ ಮಾಹಿತಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿ ದಿನಾಂಕ: 25/03/2025 ರ ಒಳಗಾಗಿ ಆಯಾ ವ್ಯಾಪ್ತಿಯ ವಿಭಾಗೀಯ ಸಹನಿರ್ದೇಶಕರು. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ ವಿಭಾಗ ಇವರಿಗೆ ಮಾಹಿತಿ ಸಲ್ಲಿಸಲು ಹಾಗೂ ವಿಭಾಗೀಯ ಸಹನಿರ್ದೇಶಕರುಗಳು ಉಪನಿರ್ದೇಶಕರಿಂದ ಪಡೆಯಲಾದ ಮಾಹಿತಿಯ ಯಥಾ ಪ್ರತಿಗಳನ್ನು ದಿನಾಂಕ: 17/03/2025 ರಂದು E-mail ID : primarydpi@gmail.com ಗೆ ಸ್ಯಾನ್ಸ್ ಪ್ರತಿಯನ್ನು ಕಳುಹಿಸತಕ್ಕದ್ದು. ನಿಗಧಿತ ಕಾಲಮಿತಿಯೊಳಗೆ ನ್ಯಾಯಾಲಯ ಪ್ರಕರಣಗಳ ವಿವರಗಳನ್ನು ಸಲ್ಲಿಸಲು ಅನಗತ್ಯ ವಿಳಂಬ ಧೋರಣೆ ಅನುಸರಿಸಿದ್ದಲ್ಲಿ ಅಂತಹ ಉಪನಿರ್ದೇಶಕರು(ಆಡಳಿತ) ಇವರ ವಿವರವನ್ನು ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲು ವಿಭಾಗೀಯ ಸಹನಿರ್ದೇಶಕರುಗಳಿಗೆ ಸೂಚಿಸಲಾಗಿತ್ತು. ಆದರೆ ಇದುವರೆಗೂ ನೀವು ನಿಗಧಿಪಡಿಸಿರುವ ಗಡುವು ಮೀರಿದ್ದರೂ ಸಹ ಈ ಕಛೇರಿಯ ಸೂಚನೆಯನ್ನು ಪಾಲಿಸದೇ ಉದಾಸೀನತೆ ತೋರಿರುತ್ತೀರಿ. (ಉಲ್ಲೇಖಿತ ಪತ್ರದ ಪ್ರತಿಯನ್ನು ಲಗತ್ತಿಸಿದೆ)
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣಗಳ ಪ್ರಗತಿಯನ್ನು ತುರ್ತಾಗಿ ಪರಿಶೀಲಿಸಬೇಕಾಗಿರುವುದರಿಂದ ಅನಗತ್ಯ ವಿಳಂಬಕ್ಕೆ ಆಸ್ಪದವಿಲ್ಲದೇ ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವ ಮಾಹಿತಿಗಳನ್ನು ಇಂದೇ ನಿಮ್ಮ ವ್ಯಾಪ್ತಿಯ ಉಪನಿರ್ದೇಶಕರು(ಆಡಳಿತ) ಇವರಿಂದ ಸಂಗ್ರಹಿಸಿ ದಿನಾಂಕ: 16/04/2025 ರಂದು ಈ ಕಛೇರಿಗೆ ಖುದ್ದಾಗಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ತಮ್ಮ ವ್ಯಾಪ್ತಿಯ ಯಾವುದೇ ಉಪನಿರ್ದೇಶಕರು(ಆಡಳಿತ) ಇವರು ಮಾಹಿತಿಯನ್ನು ಸಲ್ಲಿಸಲು ವಿಫಲರಾದಲ್ಲಿ ಅಂತಹಾ ಉಪನಿರ್ದೇಶಕರ ಹೆಸರನ್ನು ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲು ತಿಳಿಸಿದೆ. ಇದು ನ್ಯಾಯಾಲಯ ಪ್ರಕರಣವಾಗಿರುವುದರಿಂದ ಅನಗತ್ಯ ವಿಳಂಬಕ್ಕೆ ಆಸ್ಪದವಿಲ್ಲದೇ ನ್ಯಾಯಾಲಯ ಪ್ರಕರಣಗಳ ತೀವ್ರತೆಯನ್ನು ಮನಗಂಡು ಸೂಚನೆಯನ್ನು ಪಾಲಿಸಲು ಹಾಗೂ ತಾವುಗಳು ಮೇಲೆ ವಿವರಿಸಿರುವ ಅಪೇಕ್ಷಿತ ವರದಿಯನ್ನು ದಿನಾಂಕ: 16/04/2025 ರಂದು ಈ ಕಛೇರಿಗೆ ಸಲ್ಲಿಸದಿದ್ದಲ್ಲಿ ನೀವೇ ದಿನಾಂಕ: 17/04/2025 ರಂದು ಖುದ್ದಾಗಿ ಮಾನ್ಯ ಆಯುಕ್ತರ ಮುಂದೆ ಹಾಜರಾಗಿ ನ್ಯಾಯಾಲಯ ಪ್ರಕರಣಗಳ ವಿವರಗಳನ್ನು ಸಲ್ಲಿಸದೇ ಇಥಲು/ವಿಳಂಬಕ್ಕೆ ಕಾರಣ ಸಹಿತ ವಿವರಣೆ ಸಲ್ಲಿಸಲು ತಿಳಿಸಿದೆ. ತಪ್ಪಿದಲ್ಲಿ ಮುಂದಿನ ಆಗುಹೋಗುಗಳಿಗೆ ನೀವೇ ನೇರ ಜವಾಬ್ದರಾರಾಗಿರುತ್ತೀರಿ ಎಂದು ಸ್ಪಷ್ಟಪಡಿಸಿದೆ.