ಬೆಂಗಳೂರು: ರಾಜ್ಯ ಸರ್ಕಾರದಿಂದ ದಾಸ್ತಾವೇಜಿನ ನೋಂದಣಿಯಲ್ಲಿ ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಲಾಗಿದೆ.
ಈ ಸಂಬಂಧ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಸ್ಥಿರಾಸ್ತಿಗಳ ನೋಂದಣಿಯಲ್ಲಿ ಆಧಾರ್ ದೃಢೀಕರಣ ಪಡೆಯಲು ಸರ್ಕಾರದ ಅಧಿಸೂಚನೆ ಸಂಖ್ಯೆ DPAR 24 PRJ 2021, ದಿನಾಂಕ:22-02-2023 Aadhaar Authentication for Good Governance (Social Welfare, Innovation Knowledge) Rules, 2020 ರ ನಿಯಮ-5 ಹಾಗೂ Aadhar Act, 2016 ರ ಕಲಂ 4(4)(b)(ii) ರಡಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಅನುಮತಿ ನೀಡಲಾಗಿರುತ್ತದೆ. ಮುಂದುವರೆದು ಸರ್ಕಾರದ ಅಧಿಸೂಚನೆ ಸಂಖ್ಯೆ: RD 34 MNMU 2023 ದಿನಾಂಕ: 11/03/2024 ರಲ್ಲಿ ಕರ್ನಾಟಕ ನೋಂದಣಿ ನಿಯಮಗಳು 1965ರಲ್ಲಿ ಈ ಸಂಬಂಧ ಸೂಕ್ತ ತಿದ್ದುಪಡಿಗಳನ್ನು ತರಲಾಗಿರುತ್ತದೆ ಎಂದಿದ್ದಾರೆ.
ಕಾವೇರಿ-2,0 ತಂತ್ರಾಂಶದಲ್ಲಿ ಸ್ಥಿರಾಸ್ತಿಗಳ ನೋಂದಣಿಯಲ್ಲಿ ಆಧಾರ್ ದೃಢೀಕರಣವನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಸಾರ್ವಜನಿಕರು, ಉಪನೋಂದಣಾಧಿಕಾರಿಗಳು ಹಾಗೂ ಗಣಕಯಂತ್ರ ನಿರ್ವಾಹಕರು ಅನುಸರಿಸಬೇಕಾದ ಕ್ರಮಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.
ಆಧಾರ್ ಆಧಾರಿತ ದೃಢೀಕರಣ ಸ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ (SOP) :
ಗಣಕಯಂತ್ರ ನಿರ್ವಾಹಕರು
1. ತಾಂತ್ರಿಕ ಸಿದ್ಧತೆ:
i. ಬಯೋಮೆಟ್ರಿಕ್ ಆಧಾರಿತ ದೃಢೀಕರಣಕ್ಕೆ:
ಡಿಇಓಗಳ ಗಣಕಯಂತ್ರಗಳಲ್ಲಿ Finger print ಹಾಗೂ Iris Scannerಗಳ RD Services ಅಳವಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. Device Driver ಹಾಗೂ RD Services ಗಳು FTP ಯಲ್ಲಿ ಲಭ್ಯವಿರುತ್ತದೆ.
ii. ಚಹರೆ ಆಧಾರಿತ ದೃಢೀಕರಣಕ್ಕೆ
ನೋಂದಣಿ ಮಾಡುವ ಡಿಇಓಗಳು Play Store ನಿಂದ “Aadhar Face RD Service” ಹಾಗೂ FTP a “Face Authentication Application” de Ink Lowjoʻng ಅಳವಡಿಸಿಕೊಳ್ಳುವುದು,
2. ಆಧಾರ್ ದೃಢೀಕರಣ ಪಡೆಯಲು ಹಾಗೂ ಭಾವಚಿತ್ರ ಮತ್ತು ಬೆರಳಿನ ಗುರುತನ್ನು ಸೆರೆ ಹಿಡಿಯಲು ವಿಭಿನ್ನ ಸ್ಯಾನರ್‌ಗಳನ್ನು ನೀಡಲಾಗಿರುತ್ತದೆ. ಇವುಗಳ ಮೇಲೆ ಸ್ಯಾನರ್‌ನ ಆಧಾರ್ ದೃಢೀಕರಣಕ್ಕೆ” ಹಾಗೂ “ನೋಂದಣಿಗೆ ಎಂಬ ಸ್ಟಿಕರ್‌ಗಳನ್ನು ಡಿಇಓ ಹಾಗೂ ಸಾರ್ವಜನಿಕರಿಗೆ ಕಾಣುವಂತೆ ನಮೂದಿಸಬೇಕು.
3. ಆಧಾರ್ ದೃಢೀಕರಣವು ಸಮ್ಮತಿ ಆಧಾರಿತವಾಗಿರುವುದರಿಂದ ಸರ್ಕಾರದ ಅಧಿಸೂಚನೆ ಸಂಖ್ಯೆ: DPAR 24 PRJ 2021, ದಿನಾಂಕ : 22-02-2023 ರಲ್ಲಿ ನಿಗದಿಪಡಿಸಿರುವ ಸಮ್ಮತಿ ಅರ್ಜಿಯ ಮಾದರಿಯನ್ನು ಡಿಇಓಗಳು ತಮ್ಮ ಕೌಂಟರ್‌ನಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಹಾಗೂ ದೃಢೀಕರಣ ಪಡೆಯುವ ಮೊದಲು ಸಮ್ಮತಿ ಅರ್ಜಿಯನ್ನು ಸಾರ್ವಜನಿಕರಿಗೆ ಓದಲು ತಿಳಿಸಬೇಕು.
ಸಮ್ಮತಿ ನಮೂನೆ
“ಯುಐಡಿಎಐ ಮೂಲಕ ಆಧಾರ್ ಒಟಿಪಿ ಅಥವಾ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಡೆಮೋಗ್ರಾಫಿಕ್ ದೃಢೀಕರಣಕ್ಕಾಗಿ ಅಥವಾ ಇ-ಕೆವೈಸಿ ಉದ್ದೇಶಕ್ಕಾಗಿ ನನ್ನ ಗುರುತು ಮತ್ತು ಇತರೆ ಮಾಹಿತಿಯನ್ನು ಪಡೆಯಲು, ಇದನ್ನು ಆಸ್ತಿ ಕಾರ್ಡ್‌ಗಳನ್ನು ನೀಡಲು ಮತ್ತು ಆಸ್ತಿ ವಹಿವಾಟುಗಳಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಲ್ಲಿ ರಚಿಸಲಾದ ನೋಂದಾಯಿತ ದಸ್ತಾವೇಜಿನಲ್ಲಿ ಬಳಸಲು ಸ್ವಯಂಪ್ರೇರಿತವಾಗಿ ನನ್ನ ಆಧಾರ್ ಸಂಖ್ಯೆಯನ್ನು ನಾನು ಈ ಮೂಲಕ ಸಮ್ಮತಿಸುತ್ತೇನೆ.
ಸಮ್ಮತಿ ಮತ್ತು ಆಧಾರ್ ಸಂಗ್ರಹಿಸುವ ಉದ್ದೇಶವನ್ನು ನನಗೆ ಸ್ಥಳೀಯ ಭಾಷೆಯಲ್ಲಿ ವಿವರಿಸಲಾಗಿದೆ. ಮೇಲೆ ವಿವರಿಸಿದ ಉದ್ದೇಶಕ್ಕೆ ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕಾಗಿ ನನ್ನ ಆಧಾರ್ ಅನ್ನು ಬಳಸಲಾಗುವುದಿಲ್ಲ ಎಂದು ಇಲಾಖೆಯು ನನಗೆ ತಿಳಿಸಿದೆ.
ಕೆವೈಸಿ ಉದ್ದೇಶಕ್ಕಾಗಿ ಅಧಿಕೃತವಾಗಿ ಮಾನ್ಯವಾದ ದಾಖಲೆಗಳನ್ನು ಸಲ್ಲಿಸುವ ಭೌತಿಕ ಕೆವೈಸಿ ಸೇರಿದಂತೆ ಇತರೆ ಪರ್ಯಾಯ ವಿಧಾನಗಳನ್ನು ಇಲಾಖೆಯು ನನಗೆ ನೀಡಿರುತ್ತದೆ ಹಾಗು ನಾನು ಸ್ವಯಂಪ್ರೇರಿತವಾಗಿ ಆಧಾರ್ ಆಧಾರಿತ ಕೆವೈಸಿಯನ್ನು ಆಯ್ಕೆ ಮಾಡಿದ್ದೇನೆ.
ದೃಢೀಕರಣಕ್ಕಾಗಿ ನಾನು ಒದಗಿಸುವ ಬಯೋಮೆಟ್ರಿಕ್ಸ್ ಅಥವಾ ಒಟಿಪಿಯನ್ನು ಆ ನಿರ್ದಿಷ್ಟ ವಹಿವಾಟಿಗೆ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ನನ್ನ ಗುರುತನ್ನು ದೃಢೀಕರಿಸಲು ಮಾತ್ರ ಬಳಸಲಾಗುತ್ತದೆ ಹಾಗೂ ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ.”
4. ಡಿಇಓಗಳ ಹಂತದಲ್ಲಿ ಆಧಾರ್ ದೃಢೀಕರಣದ ಪ್ರಕ್ರಿಯೆ
.. ಪಕ್ಷಕಾರರು ಸಿಟಿಜನ್ ಲಾಗಿನ್‌ನಲ್ಲಿ ಓಟಿಪಿ ಆಧಾರಿತ ದೃಢೀಕರಣ ಮಾಡಿದ್ದಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢೀಕರಣವನ್ನು ಆಧಾರ್‌ಗೆ ನಿಗದಿಪಡಿಸಿರುವ Finger Print Scanner ನಲ್ಲಿಯೇ ಮಾಡಬೇಕು. ನಂತರ ಭಾವಚಿತ್ರ ಹಾಗೂ ಬೆರಳಿನ ಗುರುತನ್ನು ಸೆರೆ ಹಿಡಿಯಲು ನಿಗದಿಪಡಿಸಿರುವ ಸ್ಥಾನರ್‌ನಲ್ಲಿ ಪಡೆಯಬೇಕು. l. ಮೊದಲನೇ ಪ್ರಯತ್ನದಲ್ಲಿ ಬೆರಳಿನ ದೃಢೀಕರಣ ವಿಫಲವಾದಲ್ಲಿ ಕಡ್ಡಾಯವಾಗಿ ಇತರ ಬೆರಳುಗಳಿಂದ ಪ್ರಯತ್ನಿಸಬೇಕು.
iii, ಎಲ್ಲಾ ಬೆರಳಿಗಳಿಂದ ದೃಢೀಕರಣ ವಿಫಲವಾದಲ್ಲಿ ಕಡ್ಡಾಯವಾಗಿ Iris ಆಧಾರಿತ ದೃಢೀಕರಣವನ್ನು ಆಯ್ಕೆ ಮಾಡಿಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
iv. ಮೂರು ಪ್ರಯತ್ನಗಳಲ್ಲೂ Iris ಆಧಾರಿತ ದೃಢೀಕರಣವೂ ಸಹ ವಿಫಲವಾದಲ್ಲಿ ಕಡ್ಡಾಯವಾಗಿ ಚಹರೆ ಆಧಾರಿತ ದೃಢೀಕರಣ ಆಯ್ಕೆ ಮಾಡಿಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
v. ಬಯೋಮೆಟ್ರಿಕ್‌ನ (Finger Print, Iris & Face Auth) ಯಾವುದೇ ವಿಧಾನದಲ್ಲಿ ದೃಢೀಕರಣ
ಸಾಧ್ಯವಾಗದಿದ್ದಲ್ಲಿ ಉಪನೋಂದಣಾಧಿಕಾರಿಗಳು ಗುರುತಿನ ಚೀಟಿಯ ಭೌತಿಕ ಪರಿಶೀಲನೆ ಮಾಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.ದೃಢೀಕರಣ ಪಡೆಯುವ ಮೊದಲು ಮೇಲೆ ತಿಳಿಸಿರುವ ಅಂಶಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು.
5. ಭಾವಚಿತ್ರ ಹಾಗೂ ಬೆರಳಿನ ಗುರುತನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಆಧಾರ್ ದೃಢೀಕರಣ ಮಾಡಿರುವ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು.
ಉಪನೋಂದಣಾಧಿಕಾರಿಗಳು:
1. ಆಧಾರ್ ದೃಢೀಕರಣದ ನಂತರ ಉಪನೋಂದಣಾಧಿಕಾರಿಗಳು ಡೆಮೋಗ್ರಾಫಿಕ್ ಡೇಟಾವನ್ನು ಪರಿಶೀಲಿಸಿ ನೋಂದಣಿ ಕಾಯ್ದೆಯಡಿ ಸೂಕ್ತ ಕ್ರಮ ಜರುಗಿಸಬೇಕು.
2. ಸಮ್ಮರಿ ರಿಪೋರ್ಟ್‌ನಲ್ಲಿ ಪಕ್ಷಕಾರರ ಹೆಸರು ಆಧಾರ್ ಹೆಸರಿನೊಂದಿಗೆ ತಾಳೆಯಾಗುತ್ತಿದೆಯೇ ಎಂಬುದನ್ನು
ಪರಿಶೀಲಿಸಬೇಕು.
3. ನೋಂದಣಿ ಅರ್ಜಿಯು ಪರಿಶೀಲನೆಯ ಸಮಯದಲ್ಲಿ ದಸ್ತಾವೇಜಿನಲ್ಲಿ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳು ಮಾತ್ರ ನಮೂದಿಸಿರುವ ಬಗ್ಗೆ ಹಾಗೂ ಉಳಿದ ಸಂಖ್ಯೆಗಳನ್ನು ಮರೆ ಮಾಚಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. (ಉದಾ:XXXX XXXX 1234)
4. ಸಾರ್ವಜನಿಕರು ಆಧಾರ್‌ನ್ನು ಗುರುತಿನ ಪುರಾವೆಯಾಗಿ ಆಯ್ಕೆ ಮಾಡಿದ್ದಲ್ಲಿ ಪಕ್ಷಕಾರರ ಹೆಸರನ್ನು ಆಧಾರ್‌ನಲ್ಲಿರುವಂತೆ ದಸ್ತಾವೇಜಿನಲ್ಲಿ ನಮೂದಿಸಿರಬೇಕು.
5. ಸಾರ್ವಜನಿಕರು ನೋಂದಣಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಓಟಿಪಿ ಆಧಾರದ ಮೇಲೆ ಆಧಾರ್ ದೃಢೀಕರಣ ಮಾಡಿದ್ದಲ್ಲಿ ಉಪನೋಂದಣಿ ಕಛೇರಿಯಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಆಧಾರಿತ ದೃಢೀಕರಣಕ್ಕೆ ಒಳಪಡಬೇಕಾಗುತ್ತದೆ.
6. ಆಧಾರ್ ಬಯೋಮೆಟ್ರಿಕ್ ಲಾಕ್ ಆಗಿದ್ದಲ್ಲಿ ದೃಢೀಕರಣ ಸಾಧ್ಯವಿಲ್ಲ. ಆದುದರಿಂದ ಇದನ್ನು ಅನ್‌ಲಾಕ್ ಮಾಡಿಕೊಳ್ಳಲು ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು.
7. ಸಿಟಿಜನ್ ಲಾಗಿನ್‌ನಲ್ಲಿ ಹಾಗೂ ಉಪನೋಂದಣಿ ಕಛೇರಿಯಲ್ಲಿ ಪಕ್ಷಕಾರರ ಗುರುತು ಆಧಾರ್ ಮೂಲಕ ದೃಢೀಕರಣವಾಗಿದ್ದಲ್ಲಿ ಗುರುತಿನ ಸಾಕ್ಷಿಗಳ ಅವಶ್ಯಕತೆ ಇರುವುದಿಲ್ಲ.
8. ಆಧಾರ್ ದೃಢೀಕರಣವು ಪಕ್ಷಕಾರರಿಗೆ ಮಾತ್ರ ಅನ್ವಯಿಸುತ್ತದೆ. ಹಾಗೂ ಸಾಕ್ಷಿಗಳಿಗೆ ಅನ್ವಯಿಸುವುದಿಲ್ಲ.
9. ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯ ಯುಟ್ಯೂಬ್ ಚಾಲನ್‌ನಲ್ಲಿ ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ವಿಡಿಯೋ ಟುಟೋರಿಯಲ್‌ಗಳನ್ನು ನೀಡಲಾಗಿದೆ. ಅವುಗಳ ಲಿಂಕ್ ಈ ಕೆಳಕಂಡಂತಿದೆ.
ದಸ್ತಾವೇಜು ನೋಂದಣಿಯಲ್ಲಿ ಆಧಾರ್ ದೃಢೀಕರಣ ಯುಟ್ಯೂಬ್ ಲಿಂಕ್ : https://youtu.be/kXHhNp2VZ_Y? si-HPAAC4mGEG_jaQFt
ಡೇಟಾ ನಮೂದು ಮಾಡುವಾಗ ಆಧಾರ್ ದೃಢೀಕರಣ https://youtu.be/6yB8IngOdLU? ಮಾಡುವ ವಿಧಾನ si-fysTaoGwhcihs8EM
ಆಧಾರ್ ಬಯೋಮೆಟ್ರಿಕ್ ಲಾಕ್ / ಅನ್‌ಲಾಕ್ ಮಾಡುವhttps://youtu.be/Jtq6nTtpu5A? ವಿಧಾನ si=5YKvqpc3Zqfi7h8f
10. ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ಕ್ರಸಂ.03 ರಿಂದ 09 ರಲ್ಲಿ ತಿಳಿಸಿರುವ ವಿಷಯಗಳ ಮಾಹಿತಿಯುಳ್ಳ ಪೋಸ್ಟರ್‌ನ್ನು 4’X 3′ ಅಳತೆಯ 5mm Thickness ವುಳ್ಳ Eco Solvent Display Board ನಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ಕಾಣುವ ಜಾಗದಲ್ಲಿ ಜಿಲ್ಲಾ / ಉಪನೋಂದಣಿ ಕಛೇರಿಗಳಲ್ಲಿ ಪ್ರದರ್ಶಿಸಲು ಈ ಮೂಲಕ ಸೂಚಿಸಿದೆ. ದಸ್ತಾವೇಜು ಬರಹಗಾರರಿಗೆ, ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸಿ ಮಾಹಿತಿ ನೀಡಬೇಕು ಎಂದಿದ್ದಾರೆ.