ಬೆಂಗಳೂರು : ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವಿಶ್ವಾದ್ಯಂತ ಭಾರಿ ಸಂಚಲನ ಮೂಡಿಸಿರುವಾಗಲೇ, ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದಲೇ ಕನ್ನಡ ಸಿನಿಮಾವೊಂದನ್ನು ತಯಾರಿಸಲಾಗಿದೆ.
ಹೌದು, ಕನ್ನಡದಲ್ಲಿ ಲವ್ ಯೂ ಎನ್ನುವ ಸಿನಿಮಾವನ್ನು ಎಐನಿಂದ ತಯಾರಿಸಲಾಗಿದ್ದು, ನಾಯಕ- ನಾಯಕಿಯೂ ಎಐ . ಸಂಗೀತ, ಹಾಡು, ಡಬ್ಬಿಂಗ್ ಎಲ್ಲವನ್ನೂ ಮಾಡಿದ್ದು ಎಐ, ಕೇವಲ 10 ಲಕ್ಷ ರೂ ಬಜೆಟ್ ನಲ್ಲಿ ‘ಲವ್ ಯು’ ಎಂಬ ಸಿನಿಮಾ ನಿರ್ಮಾಣವಾಗಿದ್ದು, ಮೇ ತಿಂಗಳಿನಲ್ಲಿ ರಿಲೀಸ್ ಆಗುತ್ತಿದೆ. 95 ನಿಮಿಷ ಅವಧಿಯ ಈ ಸಿನಿಮಾದಲ್ಲಿ 12 ಹಾಡುಗಳಿವೆ. ಸೆನ್ಸಾರ್ ಬೋರ್ಡ್ ಕೂಡ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಿದೆ. ಚಿತ್ರವನ್ನು ಎಸ್. ನರಸಿಂಹಮೂರ್ತಿ ನಿರ್ದೇಶಿಸಿದ್ದಾರೆ.
ಚಿತ್ರಕ್ಕೆ ಇಬ್ಬರು ಮಾತ್ರ ಕೆಲಸ ಮಾಡಿದ್ದು,ನರಸಿಂಹ ಮೂರ್ತಿ ನಿರ್ದೇಶನ ಮಾಡಿದರೆ. ಇಡೀ ಚಿತ್ರದ ಎಐ ಕೆಲಸ ಮಾಡಿದ್ದು ನೂತನ್ ಎಂಬುವವರು. ನಟನೆ, ಹಾಡುಗಳು, ಹಿನ್ನೆಲೆ ಸಂಗೀತ, ಡಬ್ಬಿಂಗ್ ಎಲ್ಲವನ್ನೂ ಎಐ ತಂತ್ರಜ್ಞಾನದಿಂದಲೇ ಮಾಡಿ ಮುಗಿಸಲಾಗಿದೆ. ಮೇ ತಿಂಗಳಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ನಿರ್ದೇಶನ, ನಿರ್ಮಾಣ ಮಾಡಿರುವ ನರಸಿಂಹ ಮೂರ್ತಿ ಹಾಗೂ ಇಡೀ ಚಿತ್ರದ ಎಐ ಕೆಲಸ ಮಾಡಿರುವ ನೂತನ್ ಅವರನ್ನು ಹೊರತುಪಡಿಸಿದರೆ ನಟನೆ, ಸಂಗೀತ ಸಂಯೋಜನೆ, ಹಾಡುಗಳು, ಹಿನ್ನೆಲೆ ಸಂಗೀತ, ಡಬ್ಬಿಂಗ್ ನಿರ್ವಹಿಸಿರುವುದು ಎಐ ತಂತ್ರಜ್ಞಾನ.