ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿಗೊಳಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಅದರಂತೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಮಸೂದೆಯನ್ನು ವಾಪಾಸ್ ಕಳುಹಿಸಿದ್ದರು. ಹೀಗಾಗಿ ಇಂದು ರಾಜ್ಯ ಸರ್ಕಾರದಿಂದ ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಕಾಯ್ದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಮರು ರವಾನೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರದಿಂದ ರಾಜ್ಯಪಾಲರು ವಾಪಾಸ್ಸು ಕಳುಹಿಸಿದ್ದಂತ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸುಗ್ರೀವಾಜ್ಞೆಗೆ ಎಲ್ಲಾ ಆಕ್ಷೇಪಣೆಗಳಿಗೆ ಕಾನೂನು ಇಲಾಖೆಯಿಂದ ಸೂಕ್ತ ಸ್ಪಷ್ಟೀಕರಣ ಸಿದ್ಧಪಡಿಸಲಾಗಿದೆ. ಈ ಸ್ಪಷ್ಟೀಕರಣದೊಂದಿಗೆ ಇಂದು ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡನ್ನು ಸಿಎಂ ಕಚೇರಿಯಿಂದ ರಾಜ್ಯಪಾಲರಿಗೆ ಮರು ರವಾನೆ ಮಾಡಲಾಗುತ್ತಿದೆ.
ಈಗಾಗಲೇ ಸಿಎಂ ಕಚೇರಿಗೆ ಕಾನೂನು ಇಲಾಖೆಯು ಮೈಕ್ರೋ ಫೈನಾನ್ಸ್ ತಡೆ ಸುಗ್ರೀವಾಜ್ಞೆಗೆ ಸ್ಪಷ್ಟೀಕರಣ ಸಿದ್ಧಪಡಿಸಿ ಸಿದ್ಧರಾಮಯ್ಯ ಅವರ ಅವಗಾಹನೆಗೆ ಕಳುಹಿಸಲಾಗಿದೆ. ಈ ಕರಡನ್ನು ಸಿಎಂ ಕಚೇರಿಯಿಂದ ಅಂತಿಮಗೊಳಿಲಿ, ಇಂದು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ಈ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುತ್ತಾರೋ ಅಥವಾ ಮತ್ತೆ ವಾಪಾಸ್ಸು ಕಳುಹಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.