Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉತ್ತರಕನ್ನಡ : ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ : ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು!

11/01/2026 9:08 PM

BREAKING: ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 650 ಸಿಕ್ಸರ್‌ ಬಾರಿಸಿದ ಮೊದಲ ಆಟಗಾರ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರ | Rohit Sharma

11/01/2026 8:50 PM

ರೈತರು ಮತ್ತೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಸಂಸದ ಬಸವರಾಜ ಬೊಮ್ಮಾಯಿ

11/01/2026 8:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕಲ್ಯಾಣ ಕರ್ನಾಟಕದ 200 ಶಾಲೆಗಳನ್ನ ‘KPS’ ಶಾಲೆಗಳಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ.!
KARNATAKA

BIG NEWS : ಕಲ್ಯಾಣ ಕರ್ನಾಟಕದ 200 ಶಾಲೆಗಳನ್ನ ‘KPS’ ಶಾಲೆಗಳಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ.!

By kannadanewsnow5701/12/2025 7:02 AM

ಬೆಂಗಳೂರು : ರಾಜ್ಯದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆಯ್ದ 200 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ, ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕದಲ್ಲಿ ಸುಮಾರು 47,493 ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿಪೂರ್ವ ಕಾಲೇಜುಗಳಿರುತ್ತವೆ. ಒಟ್ಟಾರೆಯಾಗಿ ಕೇವಲ 309 ಶಾಲೆಗಳು ಎಲ್.ಕೆ.ಜಿಯಿಂದ 12ನೇ ತರಗತಿಯವರೆಗೆ ಸಂಯುಕ್ತ ವ್ಯವಸ್ಥೆಯನ್ನು ಹೊಂದಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು 2015-16ರಲ್ಲಿ 47.1 ಲಕ್ಷದಿಂದ 2025-26ರಲ್ಲಿ 38.2 ಲಕ್ಷಕ್ಕೆ (19% ಕಡಿಮೆ) ಕುಸಿದಿರುತ್ತದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು 46% ರಿಂದ 38% ಕ್ಕೆ ಕುಸಿದಿರುತ್ತದೆ. ಆದರೆ ಖಾಸಗಿ ಅನುದಾನರಹಿತ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26ರಲ್ಲಿ 47 ಲಕ್ಷ ವಿದ್ಯಾರ್ಥಿಗಳಿಗೆ (29%) ಹೆಚ್ಚಾಗಿದೆ. 2025-26ನೇ ಸಾಲಿನಲ್ಲಿ 50 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳ ಸಂಖ್ಯೆ 25,683ಕ್ಕೆ ಏರಿಕೆಯಾಗಿದೆ.

ಪ್ರಸ್ತುತ ಒಟ್ಟು ದಾಖಲಾತಿ ಅನುಪಾತ (Gross Enrolment Ratio) ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 98.65, ಹಿರಿಯ ಪ್ರಾಥಮಿಕ ವಿಭಾಗ ಶೇ. 99.79 ಮತ್ತು ಪ್ರೌಢಶಾಲೆಗೆ ಸಂಬಂಧಿಸಿದಂತೆ ಶೇ. 96.08 ಇರುತ್ತದೆ. ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರ (Drop out rate) ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 2.50, ಹಿರಿಯ ಪ್ರಾಥಮಿಕ ವಿಭಾಗ ಶೇ.2.91 ಮತ್ತು ಪ್ರೌಢಶಾಲೆಗೆ ಸಂಬಂಧಿಸಿದಂತೆ ಶೇ.22.88 ಇರುತ್ತದೆ. ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮುಂದುವರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಆಗುತ್ತಿರುವುದನ್ನು ಗಮನಿಸಲಾಗಿದೆ. ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರ (Drop out rate)ವನ್ನು ಕಡಿಮೆ ಮಾಡಲು ಒಂದೇ ಆವರಣದಲ್ಲಿ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿಗಳವರೆಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸುವುದು ಸೂಕ್ತ ಪರಿಹಾರವಾಗಿರುತ್ತದೆ.

ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕಾಗಿ ಒಂದು ಅಭೂತಪೂರ್ವ ಬದಲಾವಣೆಯ ಚೌಕಟ್ಟನ್ನು ಒದಗಿಸುತ್ತವೆ. ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಆರಂಭಿಸಿದ ಒಂದು ಸುಧಾರಣಾತ್ಮಕ ಕಾರ್ಯತಂತ್ರವೇ ಕೆ.ಪಿ.ಎಸ್ ಆಗಿವೆ. ಈ ಮಾದರಿಯು ಒಂದೇ ಸೂರಿನಡಿಯಲ್ಲಿ (ಕ್ಯಾಂಪಸ್‌ನಲ್ಲಿ) ಶಾಲಾಪೂರ್ವ ತರಗತಿಗಳಿಂದ (LKG ಯಿಂದ) 12ನೇ ತರಗತಿಯವರೆಗಿನ (11 ಪಿಯುಸಿ) ಶಿಕ್ಷಣವನ್ನು ಒದಗಿಸುತ್ತದೆ. ಇದು ಕಲಿಕೆಯ ಗುಣಮಟ್ಟವನ್ನು ಉತ್ತಮಪಡಿಸಲು ಉತ್ತೇಜಿಸುತ್ತದೆ. ಅಲ್ಲದೇ ಪ್ರಾಥಮಿಕ, ಮಾಧ್ಯಮಿಕ ಮತ್ತು ಪಿಯುಸಿ ಹಂತಗಳಲ್ಲಿ ದಾಖಲಾತಿ ಹಂತದಲ್ಲಿ ಸೋರುವಿಕೆ/ ಶಾಲೆ ಬಿಡುವಿಕೆಯ ದರವನ್ನು ಕಡಿಮೆ ಮಾಡುತ್ತದೆ. 2018-19ರಲ್ಲಿ 176 ಶಾಲೆಗಳೊಂದಿಗೆ ಆರಂಭವಾದ KPSಗಳು ಪ್ರಸ್ತುತ ರಾಜ್ಯದಾದ್ಯಂತ 309 ಶಾಲೆಗಳಾಗಿ ವಿಸ್ತಾರಗೊಂಡಿವೆ.

2021ರಲ್ಲಿ KPS ಶಾಲೆಗಳ ಸರಾಸರಿ ದಾಖಲಾತಿ ಸುಮಾರು 785 ವಿದ್ಯಾರ್ಥಿಗಳಾಗಿದ್ದು, 2025-26ರಲ್ಲಿ ಇದು ಸುಮಾರು 819 ವಿದ್ಯಾರ್ಥಿಗಳಿಗೆ ಏರಿಕೆಯಾಗಿದೆ. KPS ಶಾಲೆಗಳ 10ನೇ ತರಗತಿಯ ಪರೀಕ್ಷೆಯ ಫಲಿತಾಂಶ 79.97%ರಷ್ಟಿರುತ್ತದೆ. ಈ ಶಾಲೆಗಳಿಗೆ ಸಮುದಾಯದ ಬೆಂಬಲ, ಮೂಲಸೌಕರ್ಯ ಬಲವರ್ಧನೆ ಅಥವಾ ಬೇಡಿಕೆಗನುಗುಣವಾದ ಪ್ರೋತ್ಸಾಹದ ಅಗತ್ಯವಿರುತ್ತದೆ.

2018 ಮತ್ತು 2024ರ ನಡುವೆ ಸ್ಥಾಪಿತವಾದ 308 KPS ಗಳು 2.8 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ. ಪ್ರಸ್ತುತ 2025-26ರಲ್ಲಿ ದಾಖಲಾತಿ ಚೇತರಿಕೆಯು ಭರವಸೆಯನ್ನುಂಟು ಮಾಡಿದೆ. ಆದರೆ ಈ ಬೆಳವಣಿಗೆಯ ಸುಸ್ಥಿರತೆಗಾಗಿ ಅಗತ್ಯ ನೀತಿಗಳು, ಸರ್ಕಾರದ ಮಧ್ಯವರ್ತನಗಳ ಅಗತ್ಯವಿರುತ್ತದೆ. ಇಲಾಖೆಯಿಂದ ನಿರಂತರ ಪರಿಶೀಲನೆಯ ಕೊರತೆ, KPS ಶಾಲೆಗಳಿಗೆ ಗುಣಮಟ್ಟ ಕಾರ್ಯಾಚರಣೆಯ ನೀತಿಯನ್ನು ಹೊಂದಿರದಿರುವುದು, ಶಿಕ್ಷಕರ ನಿರಂತರತೆಯ ಕೊರತೆ, ಒಂದೇ KPS ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿಗೆ ಕನಿಷ್ಠ ನಾಲ್ಕು ವರ್ಗಾವಣೆ ಪ್ರಮಾಣಪತ್ರಗಳನ್ನು ಪಡೆಯುವ ಅಗತ್ಯ. ನಾಲ್ಕು ವಿಭಿನ್ನ UDISE ಕೋಡ್‌ ಗಳ ಇರುವಿಕೆ, KPS ಶಾಲೆಗಳು ಮತ್ತು ಕಾಲೇಜುಗಳಿಂದ ನಾಲ್ಕು ವಿಭಿನ್ನ ಬ್ಯಾಂಕ್ ಖಾತೆಗಳ ನಿರ್ವಹಣೆ, ಇದರಿಂದಾಗಿ ಧನಸಹಾಯದ ಕಾರ್ಯನಿರ್ವಹಣೆಯಾಗದಿರುವುದು ಅಥವಾ ವಿಭಿನ್ನವಾಗಿ ಹಣ ಉಪಯೋಗವಾಗುವುದು, ಸಾರ್ವಜನಿಕ ಪರೀಕ್ಷೆಯ ಫಲಿತಾಂಶಗಳು ಕಡಿಮೆಯಾಗಿರುವುದು, ಇತ್ಯಾದಿ, ಇವುಗಳು KPS ಶಾಲೆಗಳ ಇತರೆ ಸಮಸ್ಯೆಗಳಾಗಿವೆ.

ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಉನ್ನತ ಗುಣಮಟ್ಟದ, ಭವಿಷ್ಯ-ಕೇಂದ್ರಿತ ಶಿಕ್ಷಣವನ್ನು ಸಂಯುಕ್ತವಾಗಿ ಹಾಗೂ ಸಮಗ್ರವಾಗಿ ಒದಗಿಸುವ ಹಾಗು ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತು ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸುವ ಗುರಿಯನ್ನು ಹೊಂದಿದೆ. KPSಗಳು ತಮ್ಮ ಉದ್ದೇಶಕ್ಕೆ ಅನುಗುಣವಾಗಿ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು KPS ನೀತಿಯ ಕೈಪಿಡಿಯನ್ನು ತರಲಾಗಿದೆ. ಈ ನೀತಿಯು ಮೂಲಸೌಕರ್ಯ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಹೊಂದಿರುತ್ತದೆ. ಸಣ್ಣ ಗಾತ್ರದ ಶಾಲೆಗಳನ್ನು ಸಂಭಾವ್ಯ KPS ಶಾಲೆಗಳ ಆಯ್ಕೆಯಲ್ಲಿ ಸಮ್ಮಿಳಿತಗೊಳಿಸಿ, ಶಾಲಾ ಏಕೀಕರಣ ಪ್ರಕ್ರಿಯೆಗೆ ಆದ್ಯತೆ ನೀಡಲಾಗುತ್ತಿದ್ದು, ಸಣ್ಣ ಗಾತ್ರದ ಶಾಲೆಗಳ ಸಮಸ್ಯೆಗಳನ್ನು ಪರಿಹಾರಗೊಳಿಸಲು ಇಲಾಖೆಯು ಕನಿಷ್ಠ 1200 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ಸಂಯುಕ್ತ ಹಾಗೂ ಸಂಪನ್ಮೂಲ ಶಾಲೆಗಳಾಗಿ ಏಕೀಕರಿಸುವ ಗುರಿಯನ್ನು ಹೊಂದಿದೆ. ಸಂಯುಕ್ತ ಶಾಲಾ ಸಂಕೀರ್ಣಗಳನ್ನು ರಚಿಸಲು ಎರಡು-ಹಂತದ ರಚನಾತ್ಮಕ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಮೊದಲನೆಯದಾಗಿ, ಪ್ರತಿ ಕ್ಲಸ್ಟರ್‌ನಲ್ಲಿ ಗ್ರೇಡ್ ಕವರೇಜ್, ದಾಖಲಾತಿ, ಸ್ಥಳ ಮತ್ತು ಮೂಲಸೌಕರ್ಯದ ಆಧಾರದ ಮೇಲೆ ಸ್ಕೋರಿಂಗ್ ವಿಧಾನವನ್ನು ಬಳಸಿ ‘ಮ್ಯಾಗ್ನೆಟ್ ಶಾಲೆ’ಯನ್ನು ಗುರುತಿಸಲಾಗಿದೆ. ಎರಡನೆಯದಾಗಿ 3 ರಿಂದ 5 ಕಿ.ಮೀ ವ್ಯಾಪ್ತಿಯೊಳಗಿನ ಸಣ್ಣ ಗಾತ್ರದ ಶಾಲೆಗಳನ್ನು ಆಯ್ದ ಮ್ಯಾಗ್ನೆಟ್ ಶಾಲೆಗೆ ಜೋಡಿಸುವ ಸಂಭಾವ್ಯ ಶಾಲೆಗಳಾಗಿ ಗುರುತಿಸಲಾಗಿದೆ.

Share. Facebook Twitter LinkedIn WhatsApp Email

Related Posts

ಉತ್ತರಕನ್ನಡ : ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ : ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು!

11/01/2026 9:08 PM1 Min Read

ರೈತರು ಮತ್ತೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಸಂಸದ ಬಸವರಾಜ ಬೊಮ್ಮಾಯಿ

11/01/2026 8:29 PM4 Mins Read

40ನೇ ‘ರಾಜ್ಯ ಪತ್ರಕರ್ತರ ಸಮ್ಮೇಳನ’ಕ್ಕೆ ಮುಹೂರ್ತ ಫಿಕ್ಸ್: ಬೀದರ್ ನಲ್ಲಿ ‘KUWJ ಸಮ್ಮೇಳನ’

11/01/2026 7:56 PM1 Min Read
Recent News

ಉತ್ತರಕನ್ನಡ : ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ : ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು!

11/01/2026 9:08 PM

BREAKING: ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 650 ಸಿಕ್ಸರ್‌ ಬಾರಿಸಿದ ಮೊದಲ ಆಟಗಾರ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರ | Rohit Sharma

11/01/2026 8:50 PM

ರೈತರು ಮತ್ತೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಸಂಸದ ಬಸವರಾಜ ಬೊಮ್ಮಾಯಿ

11/01/2026 8:29 PM

40ನೇ ‘ರಾಜ್ಯ ಪತ್ರಕರ್ತರ ಸಮ್ಮೇಳನ’ಕ್ಕೆ ಮುಹೂರ್ತ ಫಿಕ್ಸ್: ಬೀದರ್ ನಲ್ಲಿ ‘KUWJ ಸಮ್ಮೇಳನ’

11/01/2026 7:56 PM
State News
KARNATAKA

ಉತ್ತರಕನ್ನಡ : ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ : ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು!

By kannadanewsnow0511/01/2026 9:08 PM KARNATAKA 1 Min Read

ಉತ್ತರಕನ್ನಡ : ಪಾಗಲ್ ಪ್ರೇಮಿ ಒಬ್ಬ ಪ್ರೀತ್ಸೆ ಎಂದು ಯುವತಿಯ ಹಿಂದೆ ಬಿದ್ದಿದ್ದಾನೆ ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ…

ರೈತರು ಮತ್ತೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಸಂಸದ ಬಸವರಾಜ ಬೊಮ್ಮಾಯಿ

11/01/2026 8:29 PM

40ನೇ ‘ರಾಜ್ಯ ಪತ್ರಕರ್ತರ ಸಮ್ಮೇಳನ’ಕ್ಕೆ ಮುಹೂರ್ತ ಫಿಕ್ಸ್: ಬೀದರ್ ನಲ್ಲಿ ‘KUWJ ಸಮ್ಮೇಳನ’

11/01/2026 7:56 PM

ಮಂಗಳೂರಿನಲ್ಲಿ ಘೋರ ಘಟನೆ : ಚುರುಮುರಿ ಸ್ಟಾಲ್ ಗೆ ಬಂದ ಹಸುವಿಗೆ ಚೂರಿ ಇರಿದ ಪಾಪಿ!

11/01/2026 7:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.