Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ : ಬೈಕ್ ಗೆ ಕ್ಯಾಂಟರ್ ಡಿಕ್ಕಿಯಾಗಿ, ಫಾರೆಸ್ಟ್ ಗಾರ್ಡ್ ಸೇರಿದಂತೆ ಇಬ್ಬರ ಸಾವು!

25/08/2025 10:15 AM

BIG NEWS : ರಾಜ್ಯದಲ್ಲಿ `ಗಣೇಶ ಹಬ್ಬ’ ಆಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

25/08/2025 9:59 AM

BREAKING :  ಇಸ್ರೇಲ್ ರಕ್ಷಣಾ ಪಡೆಯಿಂದ `ಹೌತಿ ಬಂಡುಕೋರರ’ ಪ್ರದೇಶಗಳಲ್ಲಿ ಏರ್ ಸ್ಟ್ರೈಕ್ | WATCH VIDEO

25/08/2025 9:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ಗಣೇಶ ಹಬ್ಬ’ ಆಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ
KARNATAKA

BIG NEWS : ರಾಜ್ಯದಲ್ಲಿ `ಗಣೇಶ ಹಬ್ಬ’ ಆಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

By kannadanewsnow5725/08/2025 9:59 AM

ಬೆಂಗಳೂರು : ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ದಿನಾಂಕ: 27-08-2025 ರಿಂದ ಬೆಂಗಳೂರು ನಗರದಾದ್ಯಂತ ಸಾರ್ವಜನಿಕರು ಗೌರಿ-ಗಣೇಶ ಹಬ್ಬವನ್ನು ಆಚರಿಸಲಿದ್ದು, ಈ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ನಗರದ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಬಗ್ಗೆ ಸಂಬಂಧಪಟ್ಟವರಿಂದ ಅನುಮತಿ ಅರ್ಜಿಗಳನ್ನು ಪಡೆದುಕೊಳ್ಳುವುದು. 2023 ಮತ್ತು 2024ನೇ ಸಾಲಿನಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ವಿಗ್ರಹಗಳ ಆಧಾರದ ಮೇಲೆ ಯಾವ ಯಾವ ಸ್ಥಳಗಳಲ್ಲಿ ಪ್ರಸ್ತುತ ಸಾಲಿನಲ್ಲಿ ಪ್ರತಿಷ್ಠಾಪಿಸಬಹುದು ಎಂಬುದನ್ನು ಗುರುತಿಸಿಕೊಳ್ಳುವುದು. ಸಂಘ-ಸಂಸ್ಥೆಗಳು ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸುವ ಜಾಗ, ದಿನ, ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಮುಂಚಿತವಾಗಿ ಏಕ ಗವಾಕ್ಷಿ ವ್ಯವಸ್ಥೆ ((Single window System) ಮೂಲಕ ಪರವಾನಗಿ ಪಡೆದುಕೊಳ್ಳುವಂತೆ ಸೂಚಿಸುವುದು.
ಸಾರ್ವಜನಿಕ ರಸ್ತೆ ಹಾಗೂ ಸಾರ್ವಜನಿಕರು ಓಡಾಡುವ ಜಾಗಗಳಲ್ಲಿ ವಾಹನ ಮತ್ತು ಪಾದಚಾರಿಗಳ ಓಡಾಟಕ್ಕೆ ಅಡಚಣೆಯಾಗುವ ರೀತಿಯಲ್ಲಿ ಪೆಂಡಾಲ್, ಚಪ್ಪರ ಹಾಕಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬಾರದು.

ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ ಹಾಗೂ ಗಣಪತಿ ವಿಗ್ರಹ ಪ್ರತಿಷ್ಟಾಪನೆ ಮಾಡುವುದಿದ್ದರೆ, ಅಂತಹ ಆಯೋಜಕರು ಬಿ.ಬಿ.ಎಂ.ಪಿ, ಸಂಚಾರ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು, ಸದರಿ ದಾಖಲಾತಿಗಳೊಂದಿಗೆ ಈಗಾಗಲೇ ನಿಯೋಜಿಸಲಾಗಿರುವ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ಪರವಾನಗಿ ಪಡೆದುಕೊಳ್ಳುವಂತೆ ತಿಳಿಸುವುದು.

ಧ್ವನಿವರ್ಧಕಗಳಿಗೆ ಪರವಾನಗಿ ನೀಡುವಾಗ ಮಾನ್ಯ ಉಚ್ಚ ನ್ಯಾಯಾಲಯವು ಧ್ವನಿವರ್ಧಕ ಉಪಯೋಗಿಸಲು ನೀಡರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ ಮತ್ತು ಕರ್ನಾಟಕ ಸರ್ಕಾರವು ಕಾಲ-ಕಾಲಕ್ಕೆ ಹೊರಡಿಸಲಾಗಿರುವ ನಿಯಮಗಳು / ಮಾರ್ಗಸೂಚಿಗಳು | ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ. ಆದ್ದರಿಂದ ಅನುಮತಿ ನೀಡುವ ಅಧಿಕಾರಿಗಳು ಈ ಕೆಳಕಂಡ ಸೂಚನೆಗಳನ್ನು ತಮ್ಮ ಅನುಮತಿ ಪತ್ರದಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು
ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡತಕ್ಕದ್ದು. ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯವರೆಗೆ ಯಾವುದೇ ಕಾರಣಕ್ಕೂ ಧ್ವನಿವರ್ಧಕಗಳನ್ನು ಬಳಸಲು ಅವಕಾಶ ನೀಡಬಾರದು.

ನಾಗರಿಕರಿಗೆ, ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಉಪಯೋಗಿಸುವಾಗ ಆ ಪ್ರದೇಶದ ಸುತ್ತಮುತ್ತ ಇರುವ ಸಾರ್ವಜನಿಕರಿಗೆ, ಹಿರಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಆಸ್ಪತ್ರೆಯಲ್ಲಿರುವವರಿಗೆ, ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ, ಯಾವುದೇ ತೊಂದರೆಯಾಗದ ರೀತಿಯಲ್ಲಿ ಧ್ವನಿವರ್ಧಕದ ಧ್ವನಿಯನ್ನು ಮಿತವಾಗಿ ಉಪಯೋಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದು.

ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ರೋಗಿಗಳಿಗೆ, ತೊಂದರೆಯಾಗದಂತೆ ರಾತ್ರಿ 10-00 ಗಂಟೆಯ ನಂತರ ಬೆಳಿಗ್ಗೆ 06-00 ಗಂಟೆಯವರೆಗೆ ಯಾವುದೇ ಪಟಾಕಿ ಸಿಡಿಸಬಾರದೆಂದು ಸೂಚನೆ ನೀಡುವುದರ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳತಕ್ಕದ್ದು.

ಕೆಲವು ವ್ಯಕ್ತಿಗಳು ಸಂಸ್ಥೆಗಳ ಹೆಸರಿನಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಂದ ಉತ್ಸವದ ಆಚರಣೆಗೆ ಬಲವಂತವಾಗಿ ಹಣ, ವಂತಿಕೆಯನ್ನು ವಸೂಲಿ ಮಾಡುವ ಸಾಧ್ಯತೆಗಳಿದ್ದು, ಇಂತಹ ಕೃತ್ಯಗಳಿಗೆ ಒಳಗಾದ ವ್ಯಕ್ತಿಗಳು ದೂರು ಕೊಡಲು ಮುಂದೆ ಬರುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಠಾಣೆಗಳ ಠಾಣಾಧಿಕಾರಿಗಳು ತಮ್ಮ ಠಾಣಾ ವ್ಯಾಪ್ತಿಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಈ ರೀತಿಯಾಗಿ ಬಲವಂತವಾಗಿ ಹಣ ಸಂಗ್ರಹಿಸುವ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳತಕ್ಕದ್ದು. ಬಲವಂತವಾಗಿ ಹಣ ಸಂಗ್ರಹಿಸುವ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ವಿರುದ್ಧ, ಯಾವುದೇ ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಲ್ಲಿ, ತಕ್ಷಣವೇ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು.

ಗಣಪತಿ ಉತ್ಸವಕ್ಕೆಂದು ಹೇಳಿ, ಹಣ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಮನೆಯೊಳಕ್ಕೆ ಪ್ರವೇಶಿಸಿ, ದರೋಡೆ, ಸುಲಿಗೆಯಂತಹ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿರುವುದರಿಂದ, ಠಾಣಾಧಿಕಾರಿಗಳು ಈ ಬಗ್ಗೆ ಸೂಕ್ತ ತಿಳುವಳಿಕೆಯನ್ನು / ಮಾರ್ಗದರ್ಶನಗಳನ್ನು ಸಾರ್ವಜನಿಕರಿಗೆ ನೀಡುವುದು.

ಉತ್ಸವಕ್ಕೆ ಮುಂಚಿತವಾಗಿ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಕೋಮಿನ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಕರೆಯಿಸಿ, ಠಾಣಾ, ಉಪ ವಿಭಾಗ ಮತ್ತು ವಿಭಾಗೀಯ ಮಟ್ಟದಲ್ಲಿ ಕೋಮು ಸೌಹಾರ್ದ ಸಭೆಯನ್ನು ಆಯೋಜಿಸಿ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಸಲಹೆಗಳನ್ನು ನೀಡುವುದು.

ಗಣಪತಿ ವಿಗ್ರಹವನ್ನು ಪ್ರತಿಷ್ಟಾಪಿಸುವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಜಾಗಗಳಲ್ಲಿ ವ್ಯವಸ್ಥಾಪಕರಿಂದ ಮುಂಚಿತವಾಗಿ ಕಾರ್ಯಕ್ರಮದ ಬಗ್ಗೆ ಲಿಖಿತ ಕೋರಿಕೆಯನ್ನು ಸ್ವೀಕರಿಸಿ, ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸುವುದು.

ಪ್ರತಿಯೊಂದು ಗಣಪತಿ ವಿಗ್ರಹ ಪ್ರತಿಷ್ಟಾಪನೆ ಮಾಡುವ ಜಾಗ ಮತ್ತು ಚಪ್ಪರ ಹಾಕಿರುವ ಜಾಗಗಳಲ್ಲಿ ಎಲ್ಲಾ ಸಮಯದಲ್ಲಿ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಚಪ್ಪರ ಹಾಗೂ ಗಣಪತಿ ವಿಗ್ರಹದ ರಕ್ಷಣೆಯನ್ನು ಸಂಬಂಧಪಟ್ಟ ವ್ಯವಸ್ಥಾಪಕರೇ / ಆಯೋಜಕರೇ ಸ್ವಯಂಸೇವಕರನ್ನು ನೇಮಿಸಿಕೊಳ್ಳುವಂತೆ ಠಾಣಾಧಿಕಾರಿಗಳು ಸೂಕ್ತ ಸಲಹೆಗಳನ್ನು ನೀಡುವುದು.

ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಕಿರುವ ಪೆಂಡಾಲ್ / ಚಪ್ಪರಗಳಲ್ಲಿ ಕಡ್ಡಾಯವಾಗಿ Fire Extinguisher ಗಳನ್ನು ಅಳವಡಿಸಿಕೊಳ್ಳುವಂತೆ ಆಯೋಜಕರಿಗೆ ತಿಳಿಸುವುದು.

ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಹಾಕಿರುವ Stage ಗಳ Stability ಬಗ್ಗೆ ಸಂಬಂಧಪಟ್ಟವರಿಂದ ದೃಢಪಡಿಸಿಕೊಂಡಿರುವ ಬಗ್ಗೆ ದೃಢೀಕರಣ ಪತ್ರವನ್ನು ಪಡೆದುಕೊಳ್ಳುವಂತೆ ಆಯೋಜಕರಿಗೆ ಸೂಚಿಸುವುದು.

ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಕನಿಷ್ಟ 5 ಸಿ.ಸಿ. ಟಿ.ವಿ.ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಆಯೋಜಕರಿಗೆ ಸೂಚಿಸುವುದು

ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡುವ ದಿನದಿಂದ ವಿಗ್ರಹಗಳ ವಿಸರ್ಜನೆ ಮುಗಿಯುವವರೆಗೂ ಸ್ಥಳೀಯ ಪೊಲೀಸರನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ತಪ್ಪದೇ ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ವಿಭಾಗೀಯ ಉಪ ಪೊಲೀಸ್ ಆಯುಕ್ತರುರವರುಗಳಿಗೆ ಸೂಚಿಸಲಾಗಿದೆ.

ಗಣಪತಿ ವಿಗ್ರಹ ವಿಸರ್ಜನೆಯ ಸಮಯ, ಮಾರ್ಗ ಮತ್ತು ಭಾಗವಹಿಸುವವರ ಸಂಖ್ಯೆಯನ್ನು ಮೊದಲೇ ತಿಳಿದುಕೊಂಡು, ಎಲ್ಲಾ ವಿಸರ್ಜನಾ ಮೆರವಣಿಗೆಗಳಿಗೂ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸತಕ್ಕದ್ದು. ಮೆರವಣಿಗೆ, ವಿಸರ್ಜನೆ ಹಾಗೂ ಆನಂತರವೂ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳತಕ್ಕದ್ದು. ಯಾವುದೇ ಕಾರಣಕ್ಕೂ ಇಂತಹ ವಿಸರ್ಜನಾ ಮೆರವಣಿಗೆಗಳು ರಾತ್ರಿ 10-00 ಗಂಟೆಯ ನಂತರ ನಡೆಯಲು ಅವಕಾಶ ಕೊಡಬಾರದು. ಮುಖ್ಯ ಉತ್ಸವಗಳಲ್ಲಿ ಹಿರಿಯ ಅಧಿಕಾರಿಗಳು ಖುದ್ದಾಗಿ ಹಾಜರಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಿ, ಉತ್ಸವದ ಬಂದೋಬಸ್ತ್ ಮೇಲ್ವಿಚಾರಣೆ ನೋಡಿಕೊಳ್ಳುವುದು.

ಗಣೇಶ ವಿಗ್ರಹಗಳ ವಿಸರ್ಜನೆಯ ಸ್ಥಳದಲ್ಲಿ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ವ್ಯವಸ್ಥಾಪಕರು ಮುಂಜಾಗ್ರತಾ ಕ್ರಮವಾಗಿ ಸ್ವಯಂ ಸೇವಕರನ್ನು ನೇಮಿಸಿಕೊಂಡು, ಸ್ಥಳೀಯ ಪೊಲೀಸರ ಜೊತೆ ಸಹಕರಿಸಲು ಸಂಬಂಧಪಟ್ಟ ಗಣೇಶೋತ್ಸವ ಆಯೋಜಕರಿಗೆ ಸೂಚಿಸುವುದು. ವಿಸರ್ಜನಾ ಸ್ಥಳದಲ್ಲಿ ಅವಶ್ಯಕ ಕ್ರೇನ್ಗಳು ಮತ್ತು ಸಾಕಷ್ಟು ಸಂಖ್ಯೆಯ ಮುಳುಗು ತಜ್ಞರು ಇರುವ ಹಾಗೆ ಖಾತರಿಪಡಿಸಿಕೊಳ್ಳುವುದು, ವಿಸರ್ಜನಾ ಸ್ಥಳದಲ್ಲಿ ಅವಶ್ಯಕ ವಿದ್ಯುತ್ ದೀಪ / ಜನರೇಟರ್ ವ್ಯವಸ್ಥೆ ಹಾಗೂ ಧ್ವನಿವರ್ಧಕ ವ್ಯವಸ್ಥೆ ಇರುವ ಹಾಗೆ ಖಾತರಿ ಪಡಿಸಿಕೊಳ್ಳುವುದು.

ಗಣಪತಿ ವಿಸರ್ಜನಾ ಮೆರವಣಿಗೆಯು, ಧಾರ್ಮಿಕ ಸ್ಥಳಗಳ ಬಳಿ ಸಂಚರಿಸುವ ಸಮಯದಲ್ಲಿ, ಸ್ಥಳದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು, ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಸಂಚಾರ ವ್ಯವಸ್ಥೆಯನ್ನು ಏರ್ಪಡಿಸುವುದು. ಸಂಬಂಧಿಸಿದ ಮಸೀದಿ ಕಮಿಟಿ ಸದಸ್ಯರು ಸಹ ಮೆರವಣಿಗೆ ಸಂದರ್ಭದಲ್ಲಿ ಹಾಜರಿರಲು ತಿಳುವಳಿಕೆ ನೀಡುವುದು. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಅಗತ್ಯವಿರುವ ಸಂಖ್ಯೆಯಲ್ಲಿ ಮಪ್ತಿಯಲ್ಲಿಯೂ ಸಹ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವುದು.

ವಿಸರ್ಜನಾ ಮಾರ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೈ-ಸೆಂಟ್ರಿಗಳನ್ನು ನೇಮಿಸಿ ಅವರುಗಳಿಂದ ಅಕ್ಕಪಕ್ಕದ ರಸ್ತೆಯಲ್ಲಿ ನಡೆಯುವ ವಿಶೇಷ ಬೆಳವಣಿಗೆಗಳ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಿಸುವುದು ಹಾಗೂ ಸೈ-ಸೆಂಟ್ರಿ ರವರಿಗೆ ತಿಳುವಳಿಕೆ ನೀಡುವುದು ಹಾಗೂ ಕಡ್ಡಾಯವಾಗಿ ವಾಕಿಟಾಕಿ ನೀಡುವುದು.

BIG NEWS: The 'Police Department' has issued guidelines for the celebration of 'Ganesh Festival' in the state: Compliance with these rules is mandatory
Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ : ಬೈಕ್ ಗೆ ಕ್ಯಾಂಟರ್ ಡಿಕ್ಕಿಯಾಗಿ, ಫಾರೆಸ್ಟ್ ಗಾರ್ಡ್ ಸೇರಿದಂತೆ ಇಬ್ಬರ ಸಾವು!

25/08/2025 10:15 AM1 Min Read

BIG NEWS : ರಾಜ್ಯದಲ್ಲಿ `ಗಣೇಶ ಮೂರ್ತಿ’ ಪ್ರತಿಷ್ಠಾಪನೆ, ವಿಸರ್ಜನೆಗೆ ಈ ನಿಯಮಗಳ ಪಾಲನೆ ಕಡ್ಡಾಯ | Ganesha Chaturthi

25/08/2025 9:21 AM1 Min Read

BREAKING : ಬೆಂಗಳೂರಲ್ಲಿ ಕಿಲ್ಲರ್ `BMTC’ಗೆ ಮತ್ತೊಂದು ಬಲಿ : ಬಸ್ ಹರಿದು 11 ವರ್ಷದ ಬಾಲಕ ಸಾವು.!

25/08/2025 8:58 AM1 Min Read
Recent News

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ : ಬೈಕ್ ಗೆ ಕ್ಯಾಂಟರ್ ಡಿಕ್ಕಿಯಾಗಿ, ಫಾರೆಸ್ಟ್ ಗಾರ್ಡ್ ಸೇರಿದಂತೆ ಇಬ್ಬರ ಸಾವು!

25/08/2025 10:15 AM

BIG NEWS : ರಾಜ್ಯದಲ್ಲಿ `ಗಣೇಶ ಹಬ್ಬ’ ಆಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

25/08/2025 9:59 AM

BREAKING :  ಇಸ್ರೇಲ್ ರಕ್ಷಣಾ ಪಡೆಯಿಂದ `ಹೌತಿ ಬಂಡುಕೋರರ’ ಪ್ರದೇಶಗಳಲ್ಲಿ ಏರ್ ಸ್ಟ್ರೈಕ್ | WATCH VIDEO

25/08/2025 9:56 AM

ಗ್ರೌಂಡ್ ಸಿಸ್ಟಮ್ ಸಮಸ್ಯೆ : ಪರೀಕ್ಷಾ ಹಾರಾಟವನ್ನು ಮುಂದೂಡಿದ ಸ್ಪೇಸ್ಎಕ್ಸ್ ಸ್ಟಾರ್ಶಿಪ್ | SpaceX

25/08/2025 9:49 AM
State News
KARNATAKA

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ : ಬೈಕ್ ಗೆ ಕ್ಯಾಂಟರ್ ಡಿಕ್ಕಿಯಾಗಿ, ಫಾರೆಸ್ಟ್ ಗಾರ್ಡ್ ಸೇರಿದಂತೆ ಇಬ್ಬರ ಸಾವು!

By kannadanewsnow0525/08/2025 10:15 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಬೈಕ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್…

BIG NEWS : ರಾಜ್ಯದಲ್ಲಿ `ಗಣೇಶ ಹಬ್ಬ’ ಆಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

25/08/2025 9:59 AM

BIG NEWS : ರಾಜ್ಯದಲ್ಲಿ `ಗಣೇಶ ಮೂರ್ತಿ’ ಪ್ರತಿಷ್ಠಾಪನೆ, ವಿಸರ್ಜನೆಗೆ ಈ ನಿಯಮಗಳ ಪಾಲನೆ ಕಡ್ಡಾಯ | Ganesha Chaturthi

25/08/2025 9:21 AM

BREAKING : ಬೆಂಗಳೂರಲ್ಲಿ ಕಿಲ್ಲರ್ `BMTC’ಗೆ ಮತ್ತೊಂದು ಬಲಿ : ಬಸ್ ಹರಿದು 11 ವರ್ಷದ ಬಾಲಕ ಸಾವು.!

25/08/2025 8:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.