Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಷ್ಟ್ರಪತಿ, ಮಾಜಿ ರಾಷ್ಟ್ರಪತಿ ಹೆಸರು ತಪ್ಪಾಗಿ ಉಚ್ಚರಿಸಿದ ‘ಖರ್ಗೆ’, ವಿಡಿಯೋ ವೈರಲ್, ಬಿಜೆಪಿ ಆಕ್ರೋಶ

08/07/2025 10:13 PM

ಸುಳ್ಳು ಸುದ್ದಿ ಹಾವಳಿ ತಡೆಗೆ ಮುಂದಿನ ಅಧಿವೇಶನದಲ್ಲೇ ಕಾನೂನು ಜಾರಿ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

08/07/2025 10:05 PM

ರಾಜ್ಯದಲ್ಲಿ ಆರ್ಥಿಕ ಒತ್ತಡದಿಂದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಆತ್ಮ*ಹತ್ಯೆಗೆ ಶರಣು

08/07/2025 9:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ `ಪ್ರವೇಶಾತಿ ಅಭಿಯಾನ’ : ಕಾಲೇಜು ಶಿಕ್ಷಣ ಇಲಾಖೆ ಆದೇಶ.!
KARNATAKA

BIG NEWS : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ `ಪ್ರವೇಶಾತಿ ಅಭಿಯಾನ’ : ಕಾಲೇಜು ಶಿಕ್ಷಣ ಇಲಾಖೆ ಆದೇಶ.!

By kannadanewsnow5707/02/2025 5:55 AM

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವ ಸಲುವಾಗಿ ಪ್ರವೇಶಾತಿ ಅಭಿಯಾನ 2025-26 ಹಮ್ಮಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಪದವಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಿ, ಶೇಕಡಾವಾರು Gross Enrollment Ratio (GER) ವನ್ನು ಹೆಚ್ಚಿಸುವುದು ಹಾಗೂ ನಗರ, ಗ್ರಾಮೀಣ ಮತ್ತು ಅತಿ ಹಿಂದುಳಿದ ಪ್ರದೇಶಗಳಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ 2025-26 ಸಾಲಿನಲ್ಲಿ “ಪ್ರವೇಶಾತಿ ಅಭಿಯಾನ 2025-26ನ್ನು ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ದಿನಾಂಕ: 30-01-2025 ಹಾಗೂ 31-01-2025 ರಂದು ಪ್ರವೇಶಾತಿ ಅಭಿಯಾನದ ಆನ್‌ಲೈನ್ ಪೂರ್ವಭಾವಿ ಸಭೆಯಲ್ಲಿ ಪ್ರಾಂಶುಪಾಲರುಗಳಿಗೆ ಸೂಚಿಸಿರುವಂತೆ, ತಮ್ಮ ಕಾಲೇಜುಗಳಿಗೆ ಹಂಚಿಕೆ ಮಾಡಿರುವ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ 2025 ರ ಫೆಬ್ರವರಿ ತಿಂಗಳೊಳಗೆ ಭೇಟಿ ನೀಡಿ, ಅರ್ಹ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸುಗಳು ಮತ್ತು ಅವುಗಳಿಂದ ದೊರಕುವ ಉದ್ಯೋಗಾವಕಾಶಗಳ ಬಗ್ಗೆ ಪರಿಚಯಿಸಿ, ಮನದಟ್ಟು ಮಾಡಿ, ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳು ಈ ಕೆಳಕಂಡ ಸೂಚನೆಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಸೂಚನೆಗಳು

ಆಯಾ ಕಾಲೇಜುಗಳಲ್ಲಿ ಪ್ರವೇಶಾತಿ ಸಮಿತಿಯನ್ನು ರಚಿಸಿ, ಸುತ್ತಮುತ್ತ ಇರುವ ತಮ್ಮ ಕಾಲೇಜಿಗೆ ಹಂಚಿಕೆ ಮಾಡಲಾದ ಪದವಿ ಪೂರ್ವ ಕಾಲೇಜುಗಳನ್ನು ಅಧ್ಯಾಪಕ ಸದಸ್ಯರಿಗೆ ಹಂಚಿಕೆ ಮಾಡಿ, ಪ್ರವೇಶಾತಿ ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಫೆಬ್ರವರಿ-2025ರೊಳಗೆ ನಡೆಸುವುದು.

2025-26ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಪ್ರಮಾಣದ (Sanctioned Intake) ಕನಿಷ್ಠ 75% ಪ್ರವೇಶಾತಿಯನ್ನು ಭರ್ತಿ ಮಾಡಲು ಕ್ರಮ ವಹಿಸುವುದು ಹಾಗೂ 2024-25ನೇ ಶೈಕ್ಷಣಿಕ ಸಾಲಿನಲ್ಲಿ 75% ಕ್ಕಿಂತ ಹೆಚ್ಚಿನ ಪ್ರವೇಶಾತಿ ಮಾಡಿರುವ ಕಾಲೇಜುಗಳು ಹಿಂದಿನ ಶೈಕ್ಷಣಿಕ ವರ್ಷಕ್ಕಿಂತ ಕನಿಷ್ಠ ಶೇ.10% ರಷ್ಟು ಪ್ರವೇಶಾತಿ ಸಂಖ್ಯೆಯನ್ನು ಕಡ್ಡಾಯವಾಗಿ ಹೆಚ್ಚಳ ಮಾಡುವುದು.

ಪ್ರವೇಶಾತಿ ಪ್ರಕ್ರಿಯೆಯಲ್ಲಿ, ಖಾಯಂ ಅಧ್ಯಾಪಕರ ಉಪಸ್ಥಿತಿಯೊಂದಿಗೆ Admission Desk ನಲ್ಲಿ Rotation ಆಧಾರದ ಮೇಲೆ ಕಾರ್ಯ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.

ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊದಲನೇ ವರ್ಷದಲ್ಲಿ ಪ್ರವೇಶಾತಿಯನ್ನು ಪಡೆದು ನಂತರದಲ್ಲಿ ಪರೀಕ್ಷಾ ಅರ್ಜಿಯನ್ನು ಭರ್ತಿ ಮಾಡದೇ ಇರುವುದು ಹಾಗೂ ಮುಂದಿನ ತರಗತಿಗಳಿಗೆ ಪ್ರವೇಶಾತಿಯನ್ನು ಪಡೆಯದೇ ಇರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಯಾವುದೇ ಸ್ಟ್ರೀಮ್/ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ Dropout ದರವು 25% ಮೀರಿದರೆ, ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ದಾಖಲಾತಿ ಅಭಿಯಾನದಲ್ಲಿ ಕೈಗೊಂಡ ಕಾರ್ಯಕ್ರಮಗಳ ವಿವರಗಳನ್ನು ಪ್ರತಿ ಶುಕ್ರವಾರ ಇಲಾಖೆ ಹೊರಡಿಸುವ Google form ನಲ್ಲಿ ಭರ್ತಿ ಮಾಡುವುದು ಹಾಗೂ ಸದರಿ ವರದಿಯನ್ನು ಆಯಾ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಸಲ್ಲಿಸುವುದು.

BIG NEWS: The Department of Collegiate Education has ordered an 'admission drive' to increase the enrolment in government first grade colleges in the state.
Share. Facebook Twitter LinkedIn WhatsApp Email

Related Posts

ಸುಳ್ಳು ಸುದ್ದಿ ಹಾವಳಿ ತಡೆಗೆ ಮುಂದಿನ ಅಧಿವೇಶನದಲ್ಲೇ ಕಾನೂನು ಜಾರಿ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

08/07/2025 10:05 PM2 Mins Read

ರಾಜ್ಯದಲ್ಲಿ ಆರ್ಥಿಕ ಒತ್ತಡದಿಂದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಆತ್ಮ*ಹತ್ಯೆಗೆ ಶರಣು

08/07/2025 9:42 PM1 Min Read

BREAKING: ರಾಜ್ಯದಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ NIA

08/07/2025 9:22 PM1 Min Read
Recent News

ರಾಷ್ಟ್ರಪತಿ, ಮಾಜಿ ರಾಷ್ಟ್ರಪತಿ ಹೆಸರು ತಪ್ಪಾಗಿ ಉಚ್ಚರಿಸಿದ ‘ಖರ್ಗೆ’, ವಿಡಿಯೋ ವೈರಲ್, ಬಿಜೆಪಿ ಆಕ್ರೋಶ

08/07/2025 10:13 PM

ಸುಳ್ಳು ಸುದ್ದಿ ಹಾವಳಿ ತಡೆಗೆ ಮುಂದಿನ ಅಧಿವೇಶನದಲ್ಲೇ ಕಾನೂನು ಜಾರಿ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

08/07/2025 10:05 PM

ರಾಜ್ಯದಲ್ಲಿ ಆರ್ಥಿಕ ಒತ್ತಡದಿಂದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಆತ್ಮ*ಹತ್ಯೆಗೆ ಶರಣು

08/07/2025 9:42 PM

‘CDSCO’ ಹೊಸ ಮಾರ್ಗಸೂಚಿ ; ಅವಧಿ ಮುಗಿದ ಈ ‘ಔಷಧಿ’ಗಳನ್ನ ಕಸದ ಬುಟ್ಟಿ ಬದಲಿಗೆ ಶೌಚಾಲಯಕ್ಕೆ ಹಾಕಿ, ಕಾರಣ ತಿಳಿಯಿರಿ!

08/07/2025 9:41 PM
State News
KARNATAKA

ಸುಳ್ಳು ಸುದ್ದಿ ಹಾವಳಿ ತಡೆಗೆ ಮುಂದಿನ ಅಧಿವೇಶನದಲ್ಲೇ ಕಾನೂನು ಜಾರಿ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

By kannadanewsnow0908/07/2025 10:05 PM KARNATAKA 2 Mins Read

ಬೆಂಗಳೂರು: ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಪಿಡುಗು ತಡೆಗಟ್ಟಲು ರಾಜ್ಯ ಸರ್ಕಾರ…

ರಾಜ್ಯದಲ್ಲಿ ಆರ್ಥಿಕ ಒತ್ತಡದಿಂದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಆತ್ಮ*ಹತ್ಯೆಗೆ ಶರಣು

08/07/2025 9:42 PM

BREAKING: ರಾಜ್ಯದಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ NIA

08/07/2025 9:22 PM

ಐಶ್ವರ್ಯಗೌಡ ವಂಚನೆ ಪ್ರಕರಣ; ಇಡಿ ಕೇಳಿದ ದಾಖಲೆಗಳನ್ನು ಸಲ್ಲಿಸಿದ್ದೇನೆ- ಮಾಜಿ ಸಂಸದ ಡಿ.ಕೆ.ಸುರೇಶ್

08/07/2025 9:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.