ನವದೆಹಲಿ : ದೇಶಾದ್ಯಂತ ಹೋಳಿ ಹಬ್ಬಕ್ಕೂ ಮೊದಲೇ ಬಿಸಿಲಿನ ಝಳ ತೀವ್ರವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಗರಿಷ್ಠ ತಾಪಮಾನ 2 ರಿಂದ 5 ಡಿಗ್ರಿಗಳಷ್ಟು ಹೆಚ್ಚಾಗಿದೆ. ಹವಾಮಾನ ಇಲಾಖೆಯು ಹಲವು ರಾಜ್ಯಗಳಲ್ಲಿ ತೀವ್ರ ಶಾಖದ ಅಲೆಯ ಬಗ್ಗೆ ಎಚ್ಚರಿಕೆ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನವು 1 ರಿಂದ 2 ಡಿಗ್ರಿಗಳಷ್ಟು ಹೆಚ್ಚಾಗಬಹುದು. ಹಲವು ಪ್ರದೇಶಗಳಲ್ಲಿ ಬಿಸಿಲಿನ ತಾಪದ ಬಗ್ಗೆ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂದು ಗರಿಷ್ಠ ತಾಪಮಾನ 40-41 ಡಿಗ್ರಿಗಳ ನಡುವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ ರಾಜಸ್ಥಾನದ ಬಾರ್ಮರ್‌ನಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ದಾಖಲಾಗಿತ್ತು. ಬರಾನ್‌ನಲ್ಲಿ ಕನಿಷ್ಠ ತಾಪಮಾನ 12.8 ಡಿಗ್ರಿ ದಾಖಲಾಗಿದೆ. ಚುರುವಿನಲ್ಲಿ 35.8 ಡಿಗ್ರಿ, ಜೋಧ್‌ಪುರದಲ್ಲಿ 37.2 ಡಿಗ್ರಿ, ಶ್ರೀಗಂಗಾನಗರದಲ್ಲಿ 32.5 ಡಿಗ್ರಿ, ಜೈಸಲ್ಮೇರ್‌ನಲ್ಲಿ 37.4 ಡಿಗ್ರಿ, ನಾಗೌರ್‌ನಲ್ಲಿ 36.6 ಡಿಗ್ರಿ, ಚಿತ್ತೋರ್‌ಗಢದಲ್ಲಿ 37.7 ಡಿಗ್ರಿ, ಜಲೋರ್‌ನಲ್ಲಿ 38.4 ಡಿಗ್ರಿ, ಸಿರಾಹಿಯಲ್ಲಿ 36.4 ಡಿಗ್ರಿ, ಅಜ್ಮೀರ್‌ನಲ್ಲಿ 35.2 ಡಿಗ್ರಿ ಮತ್ತು ಸಿಕಾರ್‌ನಲ್ಲಿ 34.5 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ.