ಬೆಂಗಳೂರು :ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಮತ್ತು ಮಕಕ್ಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧಗಂಟೆ ಮೊದಲೇ ಶಾಲೆಗೆ ಹಾಜರಾಗುವಮತೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1) ರ ಸುತ್ತೋಲೆಯಲ್ಲಿ ಶಾಲೆಗಳಲ್ಲಿ ಶಿಕ್ಷಕರು ನಿಗಧಿತ ಅವಧಿಯೊಳಗೆ ದೈನಂದಿನ ಕರ್ತವ್ಯಕ್ಕೆ ಹಾಜರಾಗಿ, ಬೋಧನಾ-ಕಲಿಕಾ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಿರ್ವಹಿಸುವುದರೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸಮರ್ಪಕವಾಗಿ ಕರ್ತವ್ಯನಿರ್ವಹಿಸಲು ಈಗಾಗಲೇ ಮಾರ್ಗದರ್ಶನ ನೀಡಲಾಗಿರುತ್ತದೆ.
ಉಲ್ಲೇಖ (4) ರಂತೆ 5,8 ಮತ್ತು 9 ನೇ ತರಗತಿ ಮೌಲ್ಯಾಂಕನ ಪರೀಕ್ಷೆಗಳು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲು ಕ್ರಮವಹಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಪ್ರತಿ ಶಾಲೆಯ ಭೌತಿಕ ಹಾಗೂ ಮಾನವ ಸಂಪನ್ಮೂಲ, ಬೋಧನಾ ಕಲಿಕಾ ಅಂಶಗಳು, ಶಾಲಾ ಶೈಕ್ಷಣಿಕ ಪರಿಸರ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯ ಎಲ್ಲಾ ಮಕ್ಕಳು ನಿರೀಕ್ಷಿತ ಕಲಿಕಾ ಮಟ್ಟ ಹೊಂದಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನ ಗೊಳಿಸುವುದು. ಶಾಲೆಯಲ್ಲಿನ ಪ್ರತಿ ಮಗುವಿನ ದೈಹಿಕ, ಮಾನಸಿಕ ಬೌದ್ಧಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಗಮನಿಸಿ, ಪ್ರಗತಿಯನ್ನು ನಿರಂತರವಾಗಿ ಅರ್ಥೈಸಿಕೊಂಡು. ಮಕ್ಕಳನ್ನು ಶೈಕ್ಷಣಿಕವಾಗಿ ಪರಿಪೂರ್ಣಗೊಳಿಸಲು ಶಿಕ್ಷಕರ ಪಾತ್ರ ಗಮನಾರ್ಹವಾಗಿದೆ.
ಶಾಲೆಯಲ್ಲಿ ಮಕ್ಕಳ ಬೋಧನಾ-ಕಲಿಕೆ ಉತ್ತಮೀಕರಿಸಲು ಶಿಕ್ಷಕರ ಪೂರ್ವಸಿದ್ಧತೆ, ಕಲಿಕಾ ಪರಿಸರ, ಬೋಧನಾ ಪದ್ಧತಿ ಸುಧಾರಿಸುವುದು. ಬೋಧನಾ ಕಲಿಕಾ ಸಾಮಗ್ರಿಗಳನ್ನು ಸಮಯೋಚಿತವಾಗಿ ಬಳಸಿಕೊಂಡು ಕಲಿಕೆಯನ್ನು ಸದೃಡಗೊಳಿಸುವುದು. ಅಲ್ಲದೇ ಮಕ್ಕಳಲ್ಲಿ ಭಾಷೆ ಮತ್ತು ಮತ್ತು ಗಣಿತ ಮತ್ತು ವಿಜ್ಞಾನದ ಮೂಲ ಸಾಮರ್ಥ್ಯದ ಕಲಿಕೆಯನ್ನು ಖಚಿತಪಡಿಸಿಕೊಂಡು, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ, ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನ ಇತ್ಯಾದಿಗಳ ನಿರ್ವಹಣೆಯಲ್ಲಿ ಶಾಲೆಗಳ ಮುಖ್ಯ ಶಿಕ್ಷಕರು ಪ್ರಥಮ ಹಂತದ ಮೇಲ್ವಿಚಾರಕರಾಗಿದ್ದು. ಶಾಲೆಯಲ್ಲಿ ಮಕ್ಕಳ ಕಲಿಕಾ ಸಾರ್ವತ್ರೀಕರಣದತ್ತ ಸಾಗಲು ಶಾಲಾ ಹಂತದಲ್ಲಿಯೇ ಮೇಲ್ವಿಚಾರಣೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಅತ್ಯವಶ್ಯವಿದೆ.
ಇಲಾಖಾ ಮಾರ್ಗಸೂಚಿಯಲ್ಲಿ ಸೂಚಿಸಿರುವಂತೆ ಮುಖ್ಯ ಶಿಕ್ಷಕರು ಶಾಲೆ ಪ್ರಾರಂಭಕ್ಕೆ ಅರ್ಧ ಗಂಟೆ ಮುಂಚಿತವಾಗಿ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಾಗಿ, ಎಲ್ಲಾ ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡು ಪಾಠಬೋಧನೆ ವೇಳಾಪಟ್ಟಿಯಂತೆ ಕ್ರಮವಹಿಸುವುದು. ಶಿಕ್ಷಕರು ಕಡ್ಡಾಯವಾಗಿ ಪೂರ್ವ ಮಂಜೂರಾತಿ ಪಡೆದು ರಜೆ ಮೇಲೆ ತೆರಳುವುದು. ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಎಲ್ಲಾ ಶಿಕ್ಷಕರು ನಿಗಧಿತ ಸಮಯದೊಳಗೆ ಕರ್ತವ್ಯಕ್ಕೆ ಹಾಜರಾಗಿ ಇಲಾಖಾ ಮಾರ್ಗಸೂಚಿಗಳು ಹಾಗೂ ಕಾಲ ಕಾಲಕ್ಕೆ ನೀಡುವ ಸೂಚನೆಗಳಂತೆ ಮಕ್ಕಳ ಗುಣಮಟ್ಟ ಶಿಕ್ಷಣವನ್ನು ಸಾಧಿಸುವ ನಿಟ್ಟಿನಲ್ಲಿ ಕ್ರಮವಹಿಸುವುದು.
ಶಾಲೆಯಲ್ಲಿ ನಲಿ ಕಲಿ, ಬಹುವರ್ಗ ಬೋಧನೆ ಹಾಗೂ ತರಗತಿ ಬೋಧನೆ, ಪಾಠ ವೀಕ್ಷಣೆ ಶಿಕ್ಷಕರ ದೈನಂದಿನ ಪಾಠ, ಟಿಪ್ಪಣಿ ಇತ್ಯಾದಿಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಪ್ರತಿ ವಾರ ಪರಿಶೀಲಿಸುವುದು, ಡಿ ಎಸ್ a ఆరా ಟಿ ಯಿಂದ ನಿಗಧಿಪಡಿಸಿರುವ ಪಾಠಬೋಧನೆ ವೇಳಾಪಟ್ಟಿಯಂತೆ ನಿಗಧಿತ ಸಮಯದೊಳಗೆ ಪಠ್ಯಕ್ರಮ ಪೂರ್ಣಗೊಳಿಸಿ, ಪ್ರತಿ ಮಾಹೆಯಾನದ ವರದಿಯನ್ನು ಶಾಲೆಯಲ್ಲಿ ತರಗತಿವಾರು ಮತ್ತು ಶಿಕ್ಷಕವಾರು ಪ್ರಕಟಿಸುವುದು. ಆಗಿಂದಾಗ್ಗೆ ಎಸ್ ಡಿ ಎಂ ಸಿ ಪೋಷಕರ ಸಭೆಯಲ್ಲಿ ಕಡ್ಡಾಯವಾಗಿ ಮಕ್ಕಳ ಸಾಧನೆಗಳನ್ನು ಉತ್ತೇಜಿಸುವುದು, ಕಲಿಕೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಕೈಗೊಂಡು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮವಹಿಸುವುದು.
ಇಲಾಖೆಯ ಜನಪ್ರಿಯ ಯೋಜನೆಗಳಾದ ಪ್ರಧಾನ ಮಂತ್ರಿ ಪೋಷಣ್ ಕಾರ್ಯಕ್ರಮದಡಿ ಮಧ್ಯಾಹ್ನ ಉಪಹಾರ, ಕ್ಷೀರ ಭಾಗ್ಯ ಯೋಜನೆ ಇನ್ನಿತರೇ ಕಾರ್ಯಕ್ರಮಗಳನ್ನು ಪ್ರತಿದಿನ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಮೇಲುಸ್ತುವಾರಿ ವಹಿಸಿ ಯಶಸ್ವಿಗೊಳಿಸುವುದು. ಶಾಲಾವಧಿ ಮುಗಿದ ನಂತರ ಮಕ್ಕಳು ಸುರಕ್ಷತೆಯಿಂದ ಶಾಲೆಯಿಂದ ನಿರ್ಗಮಿಸುವ ಬಗ್ಗೆ ಕಾಳಜಿ ವಹಿಸುವುದು ಹಾಗೂ ಶಾಲಾ ದಾಸ್ತಾನು, ಶಾಲಾ ಸಾಮಗ್ರಿ, ಸುರಕ್ಷಿತವಾಗಿ ಕಾಪಾಡಲು ಕ್ರಮವಹಿಸುವುದು.
ಮೇಲಿನಂತೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದ ಜವಾಬ್ದಾರಿಯಿದ್ದರೂ ಸಹ ಕೆಲವು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿಗಳು ಶಾಲೆಗೆ ಹಾಜರಾಗಿ, ಶಾಲಾವಧಿಯಲ್ಲೇ ಮುಖ್ಯ ಶಿಕ್ಷಕರ ಸಹಕಾರ ಪಡೆದು ಸಂಘ-ಸಂಸ್ಥೆ, ಹಾಗೂ ವೈಯಕ್ತಿಕ ಕೆಲಸಗಳು, ಖಾಸಗಿ ವ್ಯವಹಾರಗಳು, ಖಾಸಗಿ ಕಾರ್ಯಕ್ರಮಗಳಲ್ಲಿ ತೊಡಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು, ಗ್ರಾಮಸ್ಥರು, ಸಾರ್ವಜನಿಕರು, ಪೋಷಕರು, ಎಸ್.ಡಿ ಎಂ ಸಿ ಮತ್ತು ಇತರರಿಂದ ಹಲವಾರು ದೂರುಗಳು ಈ ಕಛೇರಿಯಲ್ಲಿ ಸ್ವೀಕೃತವಾಗುತ್ತಿವೆ. ಕೆಲವು ಶಾಲಾ ಉಸ್ತುವಾರಿ ಅಧಿಕಾರಿ, ಸಿಬ್ಬಂದಿಗಳು ಶಿಕ್ಷಕರನ್ನು ತಮ್ಮೊಂದಿಗೆ ಅನಾವಶ್ಯಕವಾಗಿ ಕರೆದೊಯ್ಯುತ್ತಿರುವ ಕುರಿತಂತೆ ದೂರುಗಳನ್ನು ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಶಿಕ್ಷಕರ ಇಂತಹ ಕರ್ತವ್ಯಲೋಪ, ನಿರ್ಲಕ್ಷ್ಯ್ರತೆ, ಉದಾಸೀನತೆ ನಿರ್ಬಂಧಿಸಲು ಹಾಗೂ ಇಂತಹವರ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಿಗಳಿಗೆ ಆಗಿಂದಾಗ್ಗೆ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಅಲ್ಲದೇ ಕೆಲವು ತಾಲ್ಲೂಕುಗಳಲ್ಲಿ ಇಂತಹ ದೂರುಗಳು ಸ್ವೀಕೃತವಾಗಿದ್ದರು ಇದನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡಿ, ಶಾಲಾವಧಿಯಲ್ಲೇ ಮಕ್ಕಳಿಗೆ ಶೈಕ್ಷಣಿಕ ಹಿನ್ನೆಡೆಗೆ ಕಾರಣರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದೆ.
ಮೇಲಿನಂತೆ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ, ಸಹ ಶಿಕ್ಷಕರ ಮತ್ತು ಸಿಬ್ಬಂದಿಗಳು ಶಾಲಾವಧಿಯಲ್ಲಿ ತರಗತಿಗಳಿಗೆ ಗೈರುಹಾಜರಾಗಿ ಮಕ್ಕಳ ಶೈಕ್ಷಣಿಕ ಹಿನ್ನೆಡೆಗೆ ಕಾರಣರಾಗಿ ಕರ್ತವ್ಯಲೋಪವೆಸಗುವ ದೂರುಗಳು ಸ್ವೀಕೃತವಾದಲ್ಲಿ ಸಂಬಂಧಿಸಿದ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಸಂಬಂಧಿಸಿದ ವ್ಯಾಪ್ತಿಯ ಮೇಲುಸ್ತುವಾರಿ ಅಧಿಕಾರಿಗಳನ್ನು ಹೊಣೆಗಾರನ್ನಾಗಿಸಿ ಗಂಭೀರ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡುತ್ತಾ ಕಟ್ಟು ನಿಟ್ಟಿನ ಸೂಚನೆ ನೀಡಿದೆ.