ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು, ಅಷ್ಟೇ ಬದ್ಧತೆಯಿಂದ ನಿಭಾಯಿಸಿದರೆ ಫಲಿತಾಂಶ ಹೇಗಿರುತ್ತದೆ ಎನ್ನುವುದಕ್ಕೆ ಕರ್ನಾಟಕ ಅತ್ಯುತ್ತಮ ಉದಾಹರಣೆ. ನಮ್ಮ ಸರ್ಕಾರದ ಆಶಯಕ್ಕೆ ಪೂರಕವಾಗಿ ಜಿಲ್ಲಾ ಪಂಚಾಯತಿಗಳು ಹಾಗೂ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಹೆಜ್ಜೆ ಇರಿಸಿದರ ಪರಿಣಾಮ ನಮ್ಮ ಕಣ್ಣ ಮುಂದಿದೆ. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಇಂದು ನಾವು ನಡೆಸಿರುವ ಅಭಿವೃದ್ಧಿ ಕಾರ್ಯಗಳು ಇತರೆ ರಾಜ್ಯಗಳಿಗೂ ಮಾದರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2006ರ ಫೆಬ್ರವರಿಯಲ್ಲಿ ಅನುಷ್ಠಾನಕ್ಕೆ ಬಂದ ಯೋಜನೆ ಕರ್ನಾಟಕದಲ್ಲಿ ಬಹು ಯಶಸ್ವಿಯಾಗಿದೆ. ನಮ್ಮ ಪಂಚಾಯತಿಗಳು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ನಿರ್ವಹಿಸಿರುವ ಕಾರ್ಯಗಳು, ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತಿವೆ ಎನ್ನುವುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.
2023-24ರಿಂದ ಈವರೆಗೂ ರಾಜ್ಯದಲ್ಲಿ 3869 ಕೂಸಿನ ಮನೆಗಳ ನಿರ್ಮಾಣಕ್ಕೆ ನರೇಗಾ ನೆರವಾಗಿದೆ. 2139 ಅಂಗನವಾಡಿಗಳನ್ನು ಈ ಯೋಜನೆ ಮೂಲಕ ನಿರ್ಮಿಸಲಾಗಿದೆ. ಹಾಗೆಯೇ 3395 ಶಾಲೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಚಟುವಟಿಕೆಗಳು ನಮ್ಮ ಉದ್ದೇಶಗಳನ್ನು ಸಾಕಾರಗೊಳಿಸುತ್ತಿವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕ ಕಾಳಜಿ ವಹಿಸಿದೆ.
2023-24ರಿಂದ ಇಲ್ಲಿಯವರೆಗೆ
– 36515 ಜಾನುವಾರು ಶೆಡ್ ನಿರ್ಮಾಣ
– 299 ಸ್ಮಶಾನ ಅಭಿವೃದ್ಧಿ
– 10295 ಬಚ್ಚಲು ಗುಂಡಿ ನಿರ್ಮಾಣ
– 500 ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆಗೆ ಚಾಲನೆ
– 3869 ಕೂಸಿನ ಮನೆಗಳ ಸ್ಥಾಪನೆ
– 2139 ಅಂಗನವಾಡಿಗಳ ನಿರ್ಮಾಣ
– 3395 ಶಾಲಾಭಿವೃದ್ಧಿ ಕಾಮಗಾರಿಗಳು
– 3184 ಕಿ. ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
– 10894 ಕೆರೆಗಳ ಅಭಿವೃದ್ಧಿ
– 17.31 ಲಕ್ಷ ಒಟ್ಟು ಸೃಜಿಸಲಾದ ಗ್ರಾಮೀಣ ಆಸ್ತಿಗಳು
– 24.75 ಕೋಟಿ ಮಾನವ ದಿನಗಳ ಸೃಜನೆ
– 55 ಲಕ್ಷಕ್ಕೂ ಹೆಚ್ಚು ಉದ್ಯೋಗ ಪಡೆದ ಕೂಲಿಕಾರರು