Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರೇ ಎಚ್ಚರ ; ಈ 6 ಆಹಾರಗಳು ನಿಮ್ಮ ಗರ್ಭಕೋಶ ದುರ್ಬಲಗೊಳಿಸ್ಬೋದು.! ತಕ್ಷಣ ಕಡಿಮೆ ಮಾಡಿ

27/02/2026 10:04 PM

BIGG NEWS : ‘ತಕ್ಷಣ ಪುಸ್ತಕ ಹಿಂತಿರುಗಿಸಿ’, ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಕುರಿತ 8ನೇ ತರಗತಿ ಪುಸ್ತಕ ಹಿಂತೆಗೆದುಕೊಂಡ ‘NCERT’

27/02/2026 9:50 PM

ಮಾ.1ರಿಂದ ರೈಲು ಟಿಕೆಟ್’ಗಳಿಂದ ಗ್ಯಾಸ್ ಸಿಲಿಂಡರ್ ಬೆಲೆವರೆಗೆ ಹಲವು ನಿಯಮ ಬದಲಾವಣೆ ; ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

27/02/2026 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : `ಅನ್ನಭಾಗ್ಯ ಅಕ್ಕಿ’ ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಕಠಿಣ ಕ್ರಮ ಫಿಕ್ಸ್.!
KARNATAKA

BIG NEWS : ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : `ಅನ್ನಭಾಗ್ಯ ಅಕ್ಕಿ’ ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಕಠಿಣ ಕ್ರಮ ಫಿಕ್ಸ್.!

By kannadanewsnow5720/06/2025 8:03 AM

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಸಲಹೆ ನೀಡಿದ್ದಾರೆ.

ನಗರದ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಗುರುವಾರ ಮಾಹಿತಿ ಪಡೆದು ಅವರು ಮಾತನಾಡಿದರು.
ಬಡವರಿಗಾಗಿ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯು ಅರ್ಹ ಫಲಾನುಭವಿಗಳಿಗೆ ಕಡ್ಡಾಯವಾಗಿ ತಲುಪಬೇಕು. ಯಾವುದೇ ಕಾರಣಕ್ಕೂ ಬಡವರಿಗೆ ಅನ್ಯಾಯ ಆಗಬಾರದು ಎಂದು ಧರ್ಮಜ ಉತ್ತಪ್ಪ ಅವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗಿದ್ದು, ಕೆಲವು ಮಾಲೀಕರು ತಮ್ಮ ಕಾರ್ಮಿಕರ ಪಡಿತರ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಅದನ್ನು ಕೂಡಲೇ ಪಡಿತರ ಚೀಟಿದಾರರ ಕುಟುಂಬಕ್ಕೆ ಹಿಂತಿರುಗಿಸಬೇಕು. ಅಲ್ಲದೇ ಪಡಿತರಚೀಟಿ ಹೊಂದಿರುವವರೂ ಸಹ ಹಣದಾಸೆಗೆ ತಮಗೆ ದೊರೆಯುವ ಪಡಿತರವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದ್ದು, ದೂರು ಬಂದ ಮಾಲೀಕರ ಮನೆಯಲ್ಲಿಯೂ ಸಹ ಪರಿಶೀಲಿಸಲಾಗುವುದು, ಒಂದು ವೇಳೆ ಪಡಿತರ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದಲ್ಲಿ, ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸದಸ್ಯರಾದ ಬಿ.ಡಿ.ಅಣ್ಣಯ್ಯ ಅವರು ಮಾತನಾಡಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಸೂಕ್ತ ರೀತಿಯಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಬಳಿಕ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಮಾತನಾಡಿ, ಸರ್ಕಾರ ಬಡವರ ಅಭಿವೃದ್ಧಿಗಾಗಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳಿಗೆ ಅದನ್ನು ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಅಧ್ಯಕ್ಷರು ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜನೆ ಮಾಡಬೇಕು. ನೇರವಾಗಿ ಜನರಿಗೆ ತಲುಪುವ ಯೋಜನೆಗಳಲ್ಲಿ ಏನಾದರು ತೊಡಕುಗಳಿದ್ದಲ್ಲಿ ಅದನ್ನು ಜಿಲ್ಲಾ ಮಟ್ಟದ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಸದಸ್ಯರಾದ ಕಾಂತರಾಜು ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳು ಹಲವರ ಪಾಲಿಗೆ ಬೆಳಕಾಗಿದೆ. ಜಿಲ್ಲೆಯಲ್ಲಿಯೂ 5 ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವ ಸಲುವಾಗಿ ವಿನೂತನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾಳಿಮಾಡ ಪ್ರಶಾಂತ್ ಅವರು ಮಾತನಾಡಿ ತಾಲೂಕು ಮಟ್ಟದ ಸಭೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಮಾಡಬೇಕು. ಸಭೆಗೆ ಆಹಾರ ನಿರೀಕ್ಷಕರು ಕಡ್ಡಾಯವಾಗಿ ಹಾಜರಿರಬೇಕು. ಈ ಬಗ್ಗೆ ತಾ.ಪಂ.ಇಒ ಮತ್ತು ತಹಶೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಪಂಕಜ ಅವರು ಮಾತನಾಡಿ ಅನ್ಯಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನ ಬಗ್ಗೆ ಹಲವು ಮಾಹಿತಿ ನೀಡಿದರು.

ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ತೆರಳುವ ಸರ್ಕಾರಿ ಬಸ್ ದೇವರಪುರದಲ್ಲಿ ನಿಲ್ಲಿಸುವಂತಾಗಬೇಕು. ಮಹೀಳೆಯರಿಗೆ ಹಾಗೂ ಇತರರಿಗೂ ಅನುಕೂಲ ಆಗಲಿದೆ. ಆ ನಿಟ್ಟಿನಲ್ಲಿ ಶಕ್ತಿ ಯೋಜನೆಯನ್ನು ಮತ್ತಷ್ಟು ಬಲಪಡಿಸಿದಂತಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಬಳಿಕ ಮಾತನಾಡಿದ ಅಧ್ಯಕ್ಷರು, ಜಿಲ್ಲೆಯ ಹಲವು ಭಾಗಗಗಳಿಗೆ ಸರ್ಕಾರಿ ಬಸ್ ಸಂಪರ್ಕವನ್ನು ಒದಗಿಸಲಾಗಿದೆ. ಇನ್ನೂ ಹಲವು ಹೊಸ ಬಸ್ ಮಾರ್ಗಗಳಿದ್ದು ಅಲ್ಲಿಗೂ ಸೂಕ್ತ ಸಂಪರ್ಕ ಒದಗಿಸುವಂತೆ ಕೆಎಸ್ಆಸರ್ಟಿ್ಸಿ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಾಕಾಂಕ್ಷಿಗಳು ಇದ್ದು, ಯುವನಿಧಿ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಕಡ್ಡಾಯವಾಗಿ ಉದ್ಯೋಗ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.

ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು, ಜಿಲ್ಲೆಯಲ್ಲಿ ಸಂಚಾರಿ ನೋಂದಣಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

ಈ ಕಾರ್ಯಕ್ರಮಗಳು ಅರ್ಹರಿಗೆ ಕಡ್ಡಾಯವಾಗಿ ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಧರ್ಮಜ ಉತ್ತಪ್ಪ ಅವರು ಸೂಚಿಸಿದರು.

ಸಮಿತಿ ಉಪಾಧ್ಯಕ್ಷರಾದ ಕೆ.ಸಿ.ಭೀಮಯ್ಯ, ನಾಸೀರ್, ಸದಸ್ಯರಾದ ಸುಂದರ, ಕೆ.ಎಂ.ಬಶೀರ್, ಮುಸ್ತಫ, ಧನ್ಯ, ಕಾಂತರಾಜು, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಮತ್ತು ಕಾಳಿಮಾಡ ಪ್ರಶಾಂತ್, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರಾದ ವೀಣಾ, ಸೆಸ್ಕ್ ಎಂಜಿನಿಯರ್, ಇತರರು ಇದ್ದರು.

BIG NEWS: State 'ration card holders' take note: Strict action will be taken if 'Annabhagya rice' is sold in the black market!
Share. Facebook Twitter LinkedIn WhatsApp Email

Related Posts

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೈಸೂರು ವಿಭಾಗದ ಭಾಗಶಃ ರದ್ದಾಗಿದ್ದ ಈ ರೈಲು ಸಂಚಾರ ಪುನರಾರಂಭ

27/02/2026 9:13 PM1 Min Read

ಜನಗಣತಿ ವೇಳೆ ಕೆಲ ಶಿಕ್ಷಕರಿಗೆ ವಿನಾಯ್ತಿ ನೀಡಿ: ಸಾಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಎಸಿಗೆ ಮನವಿ

27/02/2026 8:35 PM1 Min Read

ಸಾಗರದ ಅರಣ್ಯ ಇಲಾಖೆ ನೌಕರರ ನೂತನ ‘ಸಮುದಾಯ ಭವನ ವನಸಿರಿ’ಯನ್ನು ಸಿಸಿಎಫ್ ಡಾ.ಹನುಮಂತಪ್ಪ ಉದ್ಘಾಟನೆ

27/02/2026 8:18 PM1 Min Read
Recent News

ಮಹಿಳೆಯರೇ ಎಚ್ಚರ ; ಈ 6 ಆಹಾರಗಳು ನಿಮ್ಮ ಗರ್ಭಕೋಶ ದುರ್ಬಲಗೊಳಿಸ್ಬೋದು.! ತಕ್ಷಣ ಕಡಿಮೆ ಮಾಡಿ

27/02/2026 10:04 PM

BIGG NEWS : ‘ತಕ್ಷಣ ಪುಸ್ತಕ ಹಿಂತಿರುಗಿಸಿ’, ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಕುರಿತ 8ನೇ ತರಗತಿ ಪುಸ್ತಕ ಹಿಂತೆಗೆದುಕೊಂಡ ‘NCERT’

27/02/2026 9:50 PM

ಮಾ.1ರಿಂದ ರೈಲು ಟಿಕೆಟ್’ಗಳಿಂದ ಗ್ಯಾಸ್ ಸಿಲಿಂಡರ್ ಬೆಲೆವರೆಗೆ ಹಲವು ನಿಯಮ ಬದಲಾವಣೆ ; ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

27/02/2026 9:35 PM

ನಿಮ್ಮ ಹೆಸ್ರಲ್ಲಿ ಬೇರೆ ಯಾರಾದ್ರು ಸಾಲ ಪಡೆದಿರ್ಬೋದು ಅನ್ನೋ ಡೌಟ್ ಇದ್ಯಾ.? ಈಗಲೇ ಈ ರೀತಿ ಚೆಕ್ ಮಾಡಿ!

27/02/2026 9:15 PM
State News
KARNATAKA

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೈಸೂರು ವಿಭಾಗದ ಭಾಗಶಃ ರದ್ದಾಗಿದ್ದ ಈ ರೈಲು ಸಂಚಾರ ಪುನರಾರಂಭ

By kannadanewsnow0927/02/2026 9:13 PM KARNATAKA 1 Min Read

ಮೈಸೂರು: ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ನಡೆಯುತ್ತಿದ್ದ ರಸ್ತೆ ಕೆಳಸೇತುವೆ (RUB) ಕಾಮಗಾರಿಯ ಹಿನ್ನೆಲೆಯಲ್ಲಿ ಈ…

ಜನಗಣತಿ ವೇಳೆ ಕೆಲ ಶಿಕ್ಷಕರಿಗೆ ವಿನಾಯ್ತಿ ನೀಡಿ: ಸಾಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಎಸಿಗೆ ಮನವಿ

27/02/2026 8:35 PM

ಸಾಗರದ ಅರಣ್ಯ ಇಲಾಖೆ ನೌಕರರ ನೂತನ ‘ಸಮುದಾಯ ಭವನ ವನಸಿರಿ’ಯನ್ನು ಸಿಸಿಎಫ್ ಡಾ.ಹನುಮಂತಪ್ಪ ಉದ್ಘಾಟನೆ

27/02/2026 8:18 PM

GOOD NEWS: ರಾಜ್ಯದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: 26ನೇ ಕಂತಿನ ಹಣ ಬಿಡುಗಡೆ, ಖಾತಿಗೆ ಜಮಾ

27/02/2026 7:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.