Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಿಲಿಂಡರ್ ಕೊರತೆ ಬೆನ್ನಲ್ಲೇ, ಬೆಂಗಳೂರಲ್ಲಿ ಮನೆಯ ಕಂಪೌಂಡ್ ನಲ್ಲಿದ್ದ, ತುಂಬಿದ ಸಿಲಿಂಡರ್ ಕದ್ದೋಯ್ದ ಕಳ್ಳ!

12/03/2026 12:23 PM

BIG NEWS :  `OBC’ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯವೊಂದೇ ಮಾನದಂಡವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

12/03/2026 12:19 PM

ALERT : ಮಹಿಳೆಯರೇ ನಿಮ್ಮ ಕೂದಲು ಮಾರಿ ಪಾತ್ರೆ ಖರೀದಿಸುತ್ತೀರಾ? ತಪ್ಪದೇ ಇದನ್ನು ಓದಲೇಬೇಕು !

12/03/2026 12:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದಿಂದ `ಹಿಂದೂ ದೇವಾಲಯಗಳ ಆಸ್ತಿ ರಕ್ಷಣೆಗೆ’ ಮಹತ್ವದ ಕ್ರಮ : ಉಳಿಯಿತು 10,700 ಎಕರೆ ‘ದೇವರ ಸ್ವತ್ತು’.!
KARNATAKA

BIG NEWS : ರಾಜ್ಯ ಸರ್ಕಾರದಿಂದ `ಹಿಂದೂ ದೇವಾಲಯಗಳ ಆಸ್ತಿ ರಕ್ಷಣೆಗೆ’ ಮಹತ್ವದ ಕ್ರಮ : ಉಳಿಯಿತು 10,700 ಎಕರೆ ‘ದೇವರ ಸ್ವತ್ತು’.!

By kannadanewsnow5721/12/2024 11:49 AM

ಬೆಂಗಳೂರು : ಬುಟಾಟಿಕೆ ಮತ್ತು ಪೊಳ್ಳು ಹಿಂದುತ್ವವಾದ ಪ್ರತಿಪಾದಕರಾದ ಬಿ.ಜೆ.ಪಿ ಯವರು ಧರ್ಮ ಧರ್ಮಗಳ‌ ನಡುವೆ ದ್ವೇಷದ ಬೆಂಕಿ ಹಚ್ಚಿ, ಹಿಂದೂ ಧರ್ಮದ ಉಳಿವಿಗಾಗಿ ಯಾವುದೇ ಕಾರ್ಯ ಮಾಡದಿದ್ದರೂ, ಬರೀ ಬಾಯಿ ಮಾತಿನಲ್ಲಿ ಹಿಂದೂ ಧರ್ಮ, ದೇವಾಲಯಗಳ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಭಾಷಣ ಮಾಡುವವರ ಮುಂದೆ ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ‌ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಗೆ ಪಣ ತೊಟ್ಟಿರುವ ರಾಮಲಿಂಗಾರೆಡ್ಡಿಯವರ ಕಾರ್ಯ ಆಸ್ತಿಕ ಸಮುದಾಯದಲ್ಲಿ ಸಂತೋಷದ ಹೊನಲನ್ನು‌ ಹರಿಸಿದೆ.

ರಾಜ್ಯದ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಹಿಂದಿನ ಬಿಜೆಪಿ ಸರಕಾರ ತೆರವು ಮಾಡುವ ಕಡೆ ಯಾವುದೇ ಒಲವು ತೋರಲಿಲ್ಲ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರ ಬದ್ಧತೆಯಿಂದ ಈವರೆಗೆ ರಾಜ್ಯದ ವಿವಿಧ ದೇವಸ್ಥಾನಗಳ 10,700 ಎಕರೆ ಜಮೀನನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 5022 ಆಸ್ತಿಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸೃಷ್ಟಿಸಿ, ದೇವಸ್ಥಾನಗಳ ಅಧೀನಕ್ಕೆ ನೀಡಲಾಗಿದೆ.

ಒತ್ತುವರಿ ತೆರವುಗೊಳಿಸಿದ ಮುಜರಾಯಿ ಇಲಾಖೆ:

ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34,564 ದೇವಸ್ಥಾನಗಳ ಪೈಕಿ ಬಹುತೇಕ ದೇವಸ್ಥಾನಗಳಿಗೆ ಸರಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ, ಬಹುತೇಕ ದೇವಸ್ಥಾನಗಳ ಆಸ್ತಿ ಖಾಸಗಿ ಪಾಲಾಗಿತ್ತು. ಇದೀಗ ಸರ್ವೆ ನಡೆಸಿ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದಲ್ಲಿ 34,166 ಸಿ ದರ್ಜೆಯ ದೇವಸ್ಥಾನಗಳು, 193 ಬಿ ದರ್ಜೆಯ ದೇವಸ್ಥಾನ ಹಾಗೂ 205 ‘ಎ’ ದರ್ಜೆಯ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೆ ಸರ್ಕಾರದಿಂದ ಹಾಗೂ ದಾನಿಗಳಿಂದ ದಾನದ ರೂಪದಲ್ಲಿ ಬಂದ ಸಾವಿರಾರು ಎಕರೆ ಆಸ್ತಿಯಿದೆ. ಆದರೆ, ಈವರೆಗೆ ಆ ಆಸ್ತಿಗಳಿಗೆ ಸೂಕ್ತ ದಾಖಲೆಗಳಿರಲಿಲ್ಲ. ಇದೀಗ ಕಂದಾಯ ಇಲಾಖೆ ಎಲ್ಲ ಆಸ್ತಿಗಳಿಗೆ ದಾಖಲೆ ಒದಗಿಸುವ ಕೆಲಸ ಮಾಡಿದೆ.

ನಮ್ಮ ಸರಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ದೇವಸ್ಥಾನಗಳಿಗೆ ಮರಳಿ ಕೊಡಿಸಲಾಗಿದೆ. ದಾಖಲೆಗಳು ಇಲ್ಲದೇ ಇದ್ದ ಜಮೀನುಗಳಿಗೆ ಸೂಕ್ತ ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಯಶಸ್ವಿಯಾಗಿದೆ.

ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಂಡ ಪರಿಣಾಮ ವರ್ಷದಲ್ಲಿ 5022 ಆಸ್ತಿಗಳನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸೂಕ್ತ ದಾಖಲೆ ಒದಗಿಸಿದ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇಲಾಖೆ ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಆ ಪಕ್ಷದಿಂದ ಮಾಡಲು ಆಗದ ಕೆಲಸವನ್ನು ನಾವು ಮಾಡಿದ್ದೇವೆ. ಧರ್ಮ ಬೇರೆ ರಾಜಕೀಯ ಬೇರೆ, ಧರ್ಮ ಭಾವನೆಗೆ ಸಂಬಂಧಿಸಿದ್ದು ಅದರೊಡನೆ ರಾಜಕೀಯ ಬೆರೆಸಿ, ಕಿಚ್ಚು ಹಚ್ಚಿಸುವ ಕೆಲಸವನ್ನು ಇನ್ನಾದರೂ ಬಿ.ಜೆ.ಪಿ ಅವರು ಬಿಡಬೇಕು ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.

ಹಿಂದೂ ದೇವಾಲಯಗಳನ್ನು ರಕ್ಷಿಸಲು ಇವರ ಅಧಿಕಾರವಧಿಯಲ್ಲಿ ಇವರಿಗೆ ಸಾಧ್ಯವಾಗಲಿಲ್ಲವೇಕೆ? ಕಾಂಗ್ರೆಸ್ ಸರ್ಕಾರವೇ ಬಂದು ಈ ಕ್ರಾಂತಿಕಾರಿ ಬದಲಾವಣೆ‌ ಮಾಡಲೆಂದು ಕಾಯುತ್ತಿದ್ದರೇ ಇವರು ಎಂದು ಕಿಡಿಕಾರಿದರು.

700 acres of 'God's property' remained 700 ಎಕರೆ 'ದೇವರ ಸ್ವತ್ತು'.! BIG NEWS : ರಾಜ್ಯ ಸರ್ಕಾರದಿಂದ `ಹಿಂದೂ ದೇವಾಲಯಗಳ ಆಸ್ತಿ ರಕ್ಷಣೆಗೆ' ಮಹತ್ವದ ಕ್ರಮ : ಉಳಿಯಿತು 10 BIG NEWS: State govt takes major step to 'protect property of Hindu temples': 10
Share. Facebook Twitter LinkedIn WhatsApp Email

Related Posts

BIG NEWS : ಸಿಲಿಂಡರ್ ಕೊರತೆ ಬೆನ್ನಲ್ಲೇ, ಬೆಂಗಳೂರಲ್ಲಿ ಮನೆಯ ಕಂಪೌಂಡ್ ನಲ್ಲಿದ್ದ, ತುಂಬಿದ ಸಿಲಿಂಡರ್ ಕದ್ದೋಯ್ದ ಕಳ್ಳ!

12/03/2026 12:23 PM1 Min Read

ALERT : ಮಹಿಳೆಯರೇ ನಿಮ್ಮ ಕೂದಲು ಮಾರಿ ಪಾತ್ರೆ ಖರೀದಿಸುತ್ತೀರಾ? ತಪ್ಪದೇ ಇದನ್ನು ಓದಲೇಬೇಕು !

12/03/2026 12:13 PM2 Mins Read

BREAKING : ‘KMF’ ಗೆ ಪೂರೈಸುವ ಹಾಲಿನಲ್ಲೂ ಕಲಬೆರಕೆ ಪತ್ತೆ : ತಪ್ಪಿತಸ್ಥರಿಗೆ 3 ವರ್ಷ ಜೈಲು ಶಿಕ್ಷೆ ಫಿಕ್ಸ್!

12/03/2026 12:08 PM1 Min Read
Recent News

BIG NEWS : ಸಿಲಿಂಡರ್ ಕೊರತೆ ಬೆನ್ನಲ್ಲೇ, ಬೆಂಗಳೂರಲ್ಲಿ ಮನೆಯ ಕಂಪೌಂಡ್ ನಲ್ಲಿದ್ದ, ತುಂಬಿದ ಸಿಲಿಂಡರ್ ಕದ್ದೋಯ್ದ ಕಳ್ಳ!

12/03/2026 12:23 PM

BIG NEWS :  `OBC’ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯವೊಂದೇ ಮಾನದಂಡವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

12/03/2026 12:19 PM

ALERT : ಮಹಿಳೆಯರೇ ನಿಮ್ಮ ಕೂದಲು ಮಾರಿ ಪಾತ್ರೆ ಖರೀದಿಸುತ್ತೀರಾ? ತಪ್ಪದೇ ಇದನ್ನು ಓದಲೇಬೇಕು !

12/03/2026 12:13 PM

BREAKING : ‘KMF’ ಗೆ ಪೂರೈಸುವ ಹಾಲಿನಲ್ಲೂ ಕಲಬೆರಕೆ ಪತ್ತೆ : ತಪ್ಪಿತಸ್ಥರಿಗೆ 3 ವರ್ಷ ಜೈಲು ಶಿಕ್ಷೆ ಫಿಕ್ಸ್!

12/03/2026 12:08 PM
State News
KARNATAKA

BIG NEWS : ಸಿಲಿಂಡರ್ ಕೊರತೆ ಬೆನ್ನಲ್ಲೇ, ಬೆಂಗಳೂರಲ್ಲಿ ಮನೆಯ ಕಂಪೌಂಡ್ ನಲ್ಲಿದ್ದ, ತುಂಬಿದ ಸಿಲಿಂಡರ್ ಕದ್ದೋಯ್ದ ಕಳ್ಳ!

By kannadanewsnow0512/03/2026 12:23 PM KARNATAKA 1 Min Read

ಬೆಂಗಳೂರು : ರಾಜ್ಯಾ, ದೇಶ ಸೇರಿದಂತೆ ಎಲ್ಲೆಡೆ ಸಿಲಿಂಡರ್ ವ್ಯತ್ಯಯದಲ್ಲಿ ಭಾರಿ ಸಮಸ್ಯೆ ಉಂಟಾಗಿದೆ. ಈಗಲೇ ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್…

ALERT : ಮಹಿಳೆಯರೇ ನಿಮ್ಮ ಕೂದಲು ಮಾರಿ ಪಾತ್ರೆ ಖರೀದಿಸುತ್ತೀರಾ? ತಪ್ಪದೇ ಇದನ್ನು ಓದಲೇಬೇಕು !

12/03/2026 12:13 PM

BREAKING : ‘KMF’ ಗೆ ಪೂರೈಸುವ ಹಾಲಿನಲ್ಲೂ ಕಲಬೆರಕೆ ಪತ್ತೆ : ತಪ್ಪಿತಸ್ಥರಿಗೆ 3 ವರ್ಷ ಜೈಲು ಶಿಕ್ಷೆ ಫಿಕ್ಸ್!

12/03/2026 12:08 PM

ಬಂಡೀಪುರ, ನಾಗರಹೊಳೆ ಸಫಾರಿ ಸ್ಥಗಿತ, ಪುನಾರಂಭ ವಿಚಾರ ಕುರಿತು ಸಚಿವ ಈಶ್ವರ ಖಂಡ್ರೆ ಸಮರ್ಥನೆ

12/03/2026 12:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.