ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರವು ಕಳೆದ ಸಾವಿರ ದಿನಗಳಲ್ಲಿ ರೂ.1.16 ಲಕ್ಷ ಕೋಟಿ ಅನುದಾನ ಬಳಕೆ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರವು ಕಳೆದ ಸಾವಿರ ದಿನಗಳಲ್ಲಿ ರೂ.1.16 ಲಕ್ಷ ಕೋಟಿ ಅನುದಾನ ಬಳಕೆ ಮಾಡಿದ್ದು, ರಾಜ್ಯದ 1.37 ಕೋಟಿ ಕುಟುಂಬಗಳನ್ನು ಸರ್ಕಾರದ ಯಾವುದಾದರೊಂದು ಕಲ್ಯಾಣ ಕಾರ್ಯಕ್ರಮದ ಫಲಾನುಭವಿಯಾಗಿಸಿದ ಇತಿಹಾಸ ಸೃಷ್ಟಿಸಿದೆ ಎಂದು ಹೇಳಿದ್ದಾರೆ.
1,000 ದಿನಗಳ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇವೆ. ನಿಮ್ಮ ಪ್ರೀತಿ – ಸಹಕಾರ ಮುಂದೆಯೂ ನಮ್ಮೊಂದಿಗಿರಲಿ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರವು ಕಳೆದ ಸಾವಿರ ದಿನಗಳಲ್ಲಿ ರೂ.1.16 ಲಕ್ಷ ಕೋಟಿ ಅನುದಾನ ಬಳಕೆ ಮಾಡಿದ್ದು, ರಾಜ್ಯದ 1.37 ಕೋಟಿ ಕುಟುಂಬಗಳನ್ನು ಸರ್ಕಾರದ ಯಾವುದಾದರೊಂದು ಕಲ್ಯಾಣ ಕಾರ್ಯಕ್ರಮದ ಫಲಾನುಭವಿಯಾಗಿಸಿದ ಇತಿಹಾಸ ಸೃಷ್ಟಿಸಿದೆ.
1,000 ದಿನಗಳ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು… pic.twitter.com/yAtHeCEEgR
— CM of Karnataka (@CMofKarnataka) February 14, 2026
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನ : ಹಾವೇರಿಯಲ್ಲಿ ಇಂದು `ಸಾಧನಾ ಸಮಾವೇಶ’ !
2023ರ ಮೇ 20ರಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 1000 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇಂದು ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ‘ಭೂ ಗ್ಯಾರಂಟಿ’ ಯೋಜನೆಯಡಿ 1.10 ಲಕ್ಷ ಬಡವರಿಗೆ ಹಕ್ಕು ಪತ್ರ ವಿತರಣೆ ಮಾಡಲು ಉದ್ದೇಶಿಸಲಾಗಿದೆ.
ಹಾವೇರಿಯಲ್ಲಿ ಇಂದು ಭೂ ಗ್ಯಾರಂಟಿ ಯೋಜನೆಯ ಸಮರ್ಪಣಾ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ದಲ್ಲಿ ಹಾವೇರಿ ಸೇರಿದಂತೆ ಸುತ್ತಲ 8 ಜಿಲ್ಲೆಗಳ ಸುಮಾರು 1.10 ಲಕ್ಷ ಜನರಿಗೆ ಭೂಮಿಯ ಹಕ್ಕುಪತ್ರ ವಿತರಿಸಲಾಗುತ್ತದೆ.ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸರಕಾರದ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ.








