ಬೆಂಗಳೂರು : 2024-25ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯದನ್ವಯ, 2024-25ನೇ ಸಾಲಿನ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ (Specified Post) ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡಲು ಬಗ್ಗೆ ಉಲ್ಲೇಖ-1 ರಲ್ಲಿ ಮಾರ್ಗಸೂಚಿ ಸಹಿತ ವೇಳಾಪಟ್ಟಿಯನ್ನು ಅಧಿಸೂಚಿಸಲಾಗಿತ್ತು. ಆದರೆ ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ದಿಷ್ಟಪಡಿಸಿದ (Specified Post) ಹುದ್ದೆಗಳಿಗೆ ನಿಗದಿಯಾಗಿದ್ದ ಲಿಖಿತ ಪರೀಕ್ಷೆಯನ್ನು ಮುಂಡೂಡಲು ಉಲ್ಲೇಖಿತ-2 ರಲ್ಲಿ ನಿರ್ದೇಶಕರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು ಇವರು ಮನವಿ ಸಲ್ಲಿಸಿರುತ್ತಾರೆ, ಸದರಿ ಮನವಿಯನ್ನು ಪರಿಶೀಲಿಸಿ ಆಡಳಿತಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಈಗಾಗಲೇ ಹೊರಡಿಸಲಾಗಿದ್ದ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪರಿಷ್ಕರಿಸಿದೆ. ಉಳಿದಂತೆ ಈ ಹಿಂದೆ ಇದ್ದ ಮಾರ್ಗಸೂಚಿ ಅಂಶಗಳು ಮತ್ತು ಸೂಚನೆಗಳು ಯಥಾವತ್ತಾಗಿ ಮುಂದುವರೆಯುತ್ತದೆ ಯಾವುದೇ ಬದಲಾವಣೆಗಳು ಇರುವುದಿಲ್ಲ.
-: ವೇಳಾಪಟ್ಟಿ :-
ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ ತತ್ಸಮಾನ ವೃಂದದ ಹುದ್ದೆಗಳಿಗೆ
ಅಧಿಕೃತ ಜ್ಞಾಪನ ಹೊರಡಿಸುವುದು. 1 [ಶಾಲಾಶಿಕ್ಷಣ ಇಲಾಖೆಯ ಅಧಿಕೃತ ಇಲಾಖಾ ವೆಬ್‌ಸೈಟ್‌ನಲ್ಲಿ] ಈಗಾಗಲೇ ದಿನಾಂಕ: 12/05/2025 ರಂದು ಅಧಿಸೂಚನೆ ಹೊರಡಿಸಲಾಗಿದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ 2 ಸಲ್ಲಿಸುವುದು [ವಿದ್ಯಾರ್ಹತೆ ಹಾಗೂ ವೈಟೇಜ್‌ಗೆ ಸಂಬಂದಿಸಿದ ಲಗತ್ತುಗಳನ್ನು ಸಹ ಅಭ್ಯರ್ಥಿಗಳೇ ಆನ್‌ಲೈನ್‌ನಲ್ಲಿಯೇ ಅಪ್ ಲೋಡ್ ಮಾಡುವುದು].
ಅಭ್ಯರ್ಥಿಗಳು 12/05/2025 ರಿಂದ 29/05/2025 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ 3 ಸೇವಾನುಭವ ಮತ್ತು ಹೆಚ್ಚಿನ ವಿದ್ಯಾರ್ಹತೆಗೆ ನಿಗಧಿಪಡಿಸಿರುವ ಅಂಕಗಳನ್ನು ಮತ್ತು ಅರ್ಹತೆಯನ್ನು ಪರಿಶೀಲಿಸಿ ಅನುಮೋದನೆ ನೀಡುವುದು.