ಬೆಂಗಳೂರು: ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಸಂಬಂಧ ಐಎಎಸ್ ಅಧಿಕಾರಿ ಎಂ.ಕನಗವಲ್ಲಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದದಾರೆ. ಅದರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವಿನ ಕುರಿತಂತೆ ಹಾಗೂ ರಾಜ್ಯದಲ್ಲಿ ಇದೇ ತರಹದ ಪಕರಣಗಳು ಮರು ಕಳಿಸದಂತೆ ಮೂಲ ವ್ಯವಸ್ಥೆ ಸುಧಾರಣೆಗಳನ್ನು ತರಲು (Basic System reforms) ತರಲು ಸೂಕ್ತ ಶಿಫಾರಸ್ಸಿನೊಂದಿಗೆ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಂಬಂಧ ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದಿದ್ದಾರೆ.
ಕೆಎಸ್ಎಂಎಸ್‌ಸಿಎಲ್ ರವರು ಟೆಂಡರ್ ಮೂಲಕ ಔಷಧಿಗಳ ಖರೀದಿ ಮತ್ತು ಎಂಪ್ಯಾನಲ್ ಲ್ಯಾಬೋರೇಟರಿಗಳಿಗೆ ಔಷಧಗಳ ಮಾದರಿಗಳನ್ನು ಒಳಪಡಿಸುವಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಗಳ ಬಗ್ಗೆ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಪಾತ್ರ ಮತ್ತು ಲೋಪಗಳನ್ನು ಎಸಗಿದ ಅಧಿಕಾರಿಗಳ ಮೇಲೆ ಜವಾಬ್ದಾರಿಗಳನ್ನು ನಿಗದಿ ಮಾಡುವ ಬಗ್ಗೆ ಮತ್ತು ಕೆಎಸ್‌ಎಂಎಸ್‌ಸಿಎಲ್ ನಲ್ಲಿ existing procedures ಗಳನ್ನು ಸೇರಿದಂತೆ ಇತ್ಯಾದಿ ಅಂಶಗಳ ಬಗ್ಗೆ ಪರಿಶೀಲಿಸಿ ವರದಿಯನ್ನು ಸಲ್ಲಿಸುವ ಸಂಬಂಧ IAS ಅಧಿಕಾರಿಯವರ ನೇತೃತ್ವದಲ್ಲಿ ಒಂದು ಪರಿಶೀಲನಾ ತಂಡ (verification team) ವನ್ನು ರಚಿಸಲು ತೀರ್ಮಾನಿಸಲಾಗಿರುತ್ತದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿನ ಸಮಿತಿ ಸಭಾ ನಡವಳಿಯಲ್ಲಿನ ತೀರ್ಮಾನದಂತೆ IAS ಅಧಿಕಾರಿಯವರ ನೇತೃತ್ವದಲ್ಲಿ ಒಂದು ಪರಿಶೀಲನಾ ತಂಡ (verification team) ವನ್ನು ರಚಿಸಲು ನಿರ್ಧರಿಸಿ, ಈ ಕೆಳಕಂಡ ಆದೇಶ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೆಎಸ್‌ಎಂಎಸ್‌ಸಿಎಲ್ ರವರು ಟೆಂಡರ್ ಮೂಲಕ ಔಷಧಿಗಳ ಖರೀದಿ ಮತ್ತು ಎಂಪ್ಯಾನಲ್ ಲ್ಯಾಬೋರೇಟರಿಗಳಿಗೆ ಔಷಧಗಳ ಮಾದರಿಗಳನ್ನು ಒಳಪಡಿಸುವಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಗಳ ಬಗ್ಗೆ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಪಾತ್ರ ಮತ್ತು ಲೋಪಗಳನ್ನು ಎಸಗಿದ ಅಧಿಕಾರಿಗಳ ಮೇಲೆ ಜವಾಬ್ದಾರಿಗಳನ್ನು ನಿಗದಿ ಮಾಡುವ ಬಗ್ಗೆ ಮತ್ತು ಕೆಎಸ್‌ಎಂಎಸ್‌ಸಿಎಲ್ ನಲ್ಲಿ existing procedures ಗಳನ್ನು ಸೇರಿದಂತೆ ಇತ್ಯಾದಿ ಅಂಶಗಳ ಬಗ್ಗೆ ಪರಿಶೀಲಿಸಿ ವರದಿಯನ್ನು ಸಲ್ಲಿಸುವ ಸಂಬಂಧ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಇವರ ನೇತೃತ್ವದಲ್ಲಿ ಕೆಳಕಂಡ ಸದಸ್ಯರನ್ನೊಳಗೊಂಡ ಪರಿಶೀಲನಾ ತಂಡ (verification team) ವನ್ನು ಕೆಳಗಿನಂತೆ ರಚಿಸಿದೆ.
ಎಂ.ಕನಗವಲ್ಲಿ, ಐಎಎಸ್ ಅಧಿಕಾರಿ
ವೆಂಕಟೇಶ್, ಸಹಾಯಕ ಔಷಧ ನಿಯಂತ್ರಕರು
ಡಾ.ಅಸೀಮಾ ಬಾನು, ಮೈಕ್ರೋಬಯಾಲಜಿಸ್ಟ್
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಉಪ ಕುಲಸಚಿವರಿಂದ ನಾಮನಿರ್ದೇಶಿತ ಒಬ್ಬ ಹಿರಿಯ ಫಾರ್ಮಾಕಾಲಜಿ ಪ್ರಾಧ್ಯಾಪಕರು
ಮೇಲ್ಕಂಡ ಪರಿಶೀಲನಾ ತಂಡವು (verification team) ಕೆಳಕಂಡ terms of reference ಗಳನ್ನು ಅನುಸರಿಸಿ ವಿವರವಾದ ವರದಿಯನ್ನು ಕಡ್ಡಾಯವಾಗಿ ಐದು (05) ದಿನಗಳೊಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿನ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸತಕ್ಕದ್ದು.
Terms of Reference:
1. The analysis of sequence of events beginning from the time of issue of the purchase order for the 196 batches of Intravenous Fluid Ringer Lactate till 30th November 2024 and to report for any procedural lapses at KSMSCL. The verification team shall also inquire into the role of all officers at KSMSCL so as to fix responsibilities for the lapses.
2. The existing procedures at KSMSCL need to be verified and gaps as compared to standard or good practices are to be identified with regard to the procedure of empanelment of Labs, testing of the samples, discarding of the batches or the entire supply depending on the NSQ reports etc. and report about the compliance of established or absence of standard process.
3. The good practices of States like Tamil Nadu and Rajasthan pertaining to drug procurement, quality testing, reporting of adverse effects etc. need to be compared with the existing practice at KSMSCL.
4. VC, RGUHS or representative to give suggestions for an effective SoP in place for Public Health Facilities.