Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಲ್ಲಾ ಉದ್ಯಮಿಗಳಿಗೂ ರಾಜ್ಯದಲ್ಲಿ ಭೂಮಿ ಇದೆ: ಆಂಧ್ರದ ಆಮಿಷಕ್ಕೆ ಸಚಿವ ಎಂ.ಬಿ ಪಾಟೀಲ್ ಪ್ರತ್ಯುತ್ತರ

16/07/2025 2:28 PM

ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನದ ಅಂಗವಾಗಿ ಬೃಹತ್‌ ಬೈಕ್‌ ರೈಡ್‌ ನಡೆಸಿದ 6,000 ಸವಾರರು

16/07/2025 2:22 PM

ಕರ್ನಾಟಕದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ?: ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

16/07/2025 2:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದಿಂದ `ಗಾಂಧಿ ಸಾಕ್ಷಿ ಕಾಯಕ 2.0′ ತಂತ್ರಾಂಶ ಲೋಕಾರ್ಪಣೆ
KARNATAKA

BIG NEWS : ರಾಜ್ಯ ಸರ್ಕಾರದಿಂದ `ಗಾಂಧಿ ಸಾಕ್ಷಿ ಕಾಯಕ 2.0′ ತಂತ್ರಾಂಶ ಲೋಕಾರ್ಪಣೆ

By kannadanewsnow5703/10/2024 10:43 AM

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿರ್ವಹಿಸುವ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ಮಾಹಿತಿಗಳು, ಕಾಮಗಾರಿಗಳನ್ನು ವಹಿಸುವ ಇಲಾಖೆಗಳಿಂದ ಬಿಡುಗಡೆಯಾಗುವ ಅನುದಾನದ ಸ್ವೀಕೃತಿ ಹಾಗೂ ಬಳಕೆ, ಸೂಕ್ತ ರೀತಿಯಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮುಂತಾದ ವಿವಿಧ ಅಂಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗಾಂಧಿ ಸಾಕ್ಷಿ ಕಾಯಕ 2.0 (ವರ್ಕ್ ಮಾನಿಟರಿಂಗ್ ಸಿಸ್ಟಂ) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಗಾಂಧಿ ಜಯಂತಿ ದಿನದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆಗೊಳಿಸಿದರು.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಕರ್ನಾಟಕ ಸರ್ಕಾರದ ಅಂಗಸAಸ್ಥೆಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು ರಾಜ್ಯಾದ್ಯಂತ ತನ್ನ ಜಾಲವನ್ನು ಹೊಂದಿದ್ದು, ಸರ್ಕಾರದ ವತಿಯಿಂದ ಕೈಗೊಳ್ಳಲಾಗುವ ನಿರ್ಮಾಣ ಯೋಜನೆಗಳು ಹಾಗೂ ವಿವಿಧ ಇಲಾಖೆಗಳು ವಹಿಸುವ ಕಟ್ಟಡಗಳು, ರಸ್ತೆ ಅಭಿವೃದ್ಧಿ ಮೊದಲಾದ ಕಾಮಗಾರಿಗಳನ್ನು ಕಳೆದ 51 ವರ್ಷಗಳಿಂದ ನಿಗದಿತ ಕಾಲಾವಧಿಯಲ್ಲಿ ಉತ್ತಮ ಗುಣಮಟ್ಟದಿಂದ ಅನುಷ್ಠಾನಗೊಳಿಸುತ್ತಿದೆ.

ಕೆಆರ್‌ಐಡಿಎಲ್ ಸಂಸ್ಥೆಯ ವಹಿವಾಟನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸೂಕ್ತ ತಂತ್ರಾAಶದ ಅವಶ್ಯಕತೆ ಇದ್ದ ಕಾರಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗರ‍್ನೆನ್ಸ್ ಮೂಲಕ ಈ ತಂತ್ರಾಂಶ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಏನಿದು ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶ? 

  • ಕಾಮಗಾರಿ ವಹಿಸುವ ಇಲಾಖೆಗಳು ಅನುದಾನಗಳನ್ನು ನಿಗಮದ ಕೇಂದ್ರ ಕಛೇರಿಯ ಖಾತೆಗೆ ನೇರವಾಗಿ ಜಮೆ ಮಾಡುವ ಸೌಲಭ್ಯವನ್ನು ಒಳಗೊಂಡ ಈ ತಂತ್ರಾಂಶ ಗ್ರೂಪ್ ಲೀಡರ್‌ಗಳು ಮತ್ತು ಸಾಮಗ್ರಿಗಳ ಸರಬರಾಜುದಾರರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಹಾಗೂ ಇವರಿಗೆ ಆನ್ಲೈನ್ ಮೂಲಕ ಹಣ ಬಿಡುಗಡೆ ಮಾಡಬಹುದಾಗಿದೆ.
  • ಕಾಮಗಾರಿಗಳ ನಿರ್ವಹಣೆಗಾಗಿ ಕೇಂದ್ರ ಕಛೇರಿಯ ಖಾತೆಯಿಂದ ಉಪವಿಭಾಗಗಳಿಗೆ ಅನುದಾನ ಬಿಡುಗಡೆ.
  • ಕಾಮಗಾರಿಗಳ ಪ್ರಗತಿಯ ವಿವಿಧ ಹಂತಗಳ ಛಾಯಾಚಿತ್ರಗಳ ಜಿಯೋ ಟ್ಯಾಗ್‌ಛಾಯಾಚಿತ್ರಗಳ ಆರೋಹಣ.
  • ಕಾಮಗಾರಿಗಳ ಲೆಕ್ಕಪತ್ರಗಳ ನಿರ್ವಹಣೆ.

ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶದ ಅಳವಡಿಕೆಯಿಂದ ಆಗುವ ಅನುಕೂಲಗಳು

  • ಕಾಮಗಾರಿ ವಹಿಸುವ ಇಲಾಖೆಗಳು ಬಿಡುಗಡೆ ಮಾಡುವ ಅನುದಾನಗಳ ಯೋಜನಾವಾರು ಬಿಡುಗಡೆ, ಕಾಮಗಾರಿಗಳ ಪ್ರಗತಿಗೆ ವ್ಯಯಿಸಲಾದ ವೆಚ್ಚ, ಉಳಿಕೆ ಅನುದಾನಗಳ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ.
  • ಜಿಯೋ ಟ್ಯಾಗ್ ಹಾಗೂ ಜಿಯೋ ಫೆನ್ಸಿಂಗ್ ಛಾಯಾಚಿತ್ರಗಳ ಆರೋಹಣ ಮಾಡುವ ಕಾರಣದಿಂದ, ಡೂಪ್ಲಿಕೇಟ್ ಕಾಮಗಾರಿಗಳನ್ನು ನಿರ್ವಹಿಸುವ ಸಾಧ್ಯತೆಗಳನ್ನು ತಡೆಯಬಹುದು
  • ಕಾಮಗಾರಿಗಳ ನಿರ್ವಹಣೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿ, ವಿತರಣೆ ಮುಂತಾದ ವಿವರಗಳನ್ನು ದಾಖಲಿಸುವ ಕಾರಣದಿಂದ ಸಾಮಗ್ರಿಗಳ ಕೊರತೆ ಉಂಟಾಗದAತೆ ಮುನ್ನೆಚ್ಚರಿಕೆ ಪಡೆಯಲು ಅನುಕೂಲವಾಗುವುದು..
  • ಪ್ರತಿ ಕಾಮಗಾರಿಯ ವಿವಿಧ ಹಂತಗಳ ಪ್ರಗತಿಯ ವಿವರಗಳು, ಛಾಯಾಚಿತ್ರಗಳು, ಆ ಕಾಮಗಾರಿಗೆ ಬಿಡುಗಡೆಯಾದ ಅನುದಾನ, ವೆಚ್ಚ ಹಾಗೂ ಉಳಿದಿರುವ ಅನುದಾನ ಲಭ್ಯತೆಯ ವಿವರಗಳು ನೈಜಸಮಯದಲ್ಲೇ ಲಭ್ಯವಾಗುವ ಕಾರಣ, ಕಾಮಗಾರಿಗಳಮೇಲ್ವಿಚಾರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
  • ಕಾಮಗಾರಿಗಳ ಅಂದಾಜು ಮೊತ್ತ ಹಾಗೂ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚ ಮಾಡುವುದು ಹಾಗೂ ಆಯಾ ಕಾಮಗಾರಿಗಾಗಿ ಬಿಡುಗಡೆಯಾದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲು ಸಾಧ್ಯವಾಗದಂತೆ ತಡೆಯಬಹುದಾಗಿರುತ್ತದೆ.
  • ಈ ತಂತ್ರಾAಶವು ಜಿ.ಎಸ್.ಟಿ-ವ್ಯಾಲಿಡೇಶನ್ ಆಪ್ ಹೊಂದಿರುವ ಕಾರಣ ನಕಲಿ ಅಥವಾ ಅಸಮರ್ಪಕ ಜಿ.ಎಸ್.ಟಿ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು, ಜಿ.ಎಸ್.ಟಿ ಬಿಲ್‌ಗಳ ನಿರ್ವಹಣೆ ಸುಲಭಸಾಧ್ಯವಾಗಲಿದ್ದು, ತನ್ಮೂಲಕ ಮೊತ್ತಗಳ ನಿಗಮಕ್ಕೆ ಉಂಟಾಗುವ ಸಂಭವನೀಯ ನಷ್ಟವನ್ನು ತಪ್ಪಿಸಬಹುದಾಗಿರುತ್ತದೆ.
  • ಹಣಕಾಸಿನ ವ್ಯವಹಾರದ ಸುರಕ್ಷೆತೆಗಾಗಿ DSC (Digital Signature Key) ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
  • ಲಾಗಿನ್ ಸುರಕ್ಷತೆಗಾಗಿ SMS ಮತ್ತು OTP ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
  • ಈ ತಂತ್ರಾಂಶದ ಮೂಲಕ ಪರಿಣಾಮಕಾರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸುವ ಕಾರಣದಿಂದ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಕಾಲಾವಧಿಯೊಳಗೆ ಅಂತಿಮಗೊಳಿಸಲು ಅನುಕೂಲವಾಗುವುದು.

ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶದ ಅಳವಡಿಕೆಯು ಕೆ.ಆರ್.ಐ.ಡಿ.ಎಲ್., ಸಂಸ್ಥೆಯನ್ನು ಸಧೃಡಗೊಳಿಸಲು ಇಟ್ಟಿರುವ ಹೆಜ್ಜೆ. ಈ ಮೂಲಕ ರಾಜ್ಯ ಸರ್ಕಾರ ಕೆ ಆರ್ ಐ ಡಿ ಎಲ್ ಪಾರದರ್ಶಕತೆಗೆ ಮಹತ್ವದ ಹೆಜ್ಜೆ ಇರಿಸಿದೆ.

BIG NEWS : ರಾಜ್ಯ ಸರ್ಕಾರದಿಂದ `ಗಾಂಧಿ ಸಾಕ್ಷಿ ಕಾಯಕ 2.0' ತಂತ್ರಾಂಶ ಲೋಕಾರ್ಪಣೆ BIG NEWS: State government launches 'Gandhi Sakshi Kayaka 2.0' software
Share. Facebook Twitter LinkedIn WhatsApp Email

Related Posts

ಎಲ್ಲಾ ಉದ್ಯಮಿಗಳಿಗೂ ರಾಜ್ಯದಲ್ಲಿ ಭೂಮಿ ಇದೆ: ಆಂಧ್ರದ ಆಮಿಷಕ್ಕೆ ಸಚಿವ ಎಂ.ಬಿ ಪಾಟೀಲ್ ಪ್ರತ್ಯುತ್ತರ

16/07/2025 2:28 PM2 Mins Read

ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನದ ಅಂಗವಾಗಿ ಬೃಹತ್‌ ಬೈಕ್‌ ರೈಡ್‌ ನಡೆಸಿದ 6,000 ಸವಾರರು

16/07/2025 2:22 PM2 Mins Read

ಕರ್ನಾಟಕದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ?: ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

16/07/2025 2:13 PM1 Min Read
Recent News

ಎಲ್ಲಾ ಉದ್ಯಮಿಗಳಿಗೂ ರಾಜ್ಯದಲ್ಲಿ ಭೂಮಿ ಇದೆ: ಆಂಧ್ರದ ಆಮಿಷಕ್ಕೆ ಸಚಿವ ಎಂ.ಬಿ ಪಾಟೀಲ್ ಪ್ರತ್ಯುತ್ತರ

16/07/2025 2:28 PM

ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನದ ಅಂಗವಾಗಿ ಬೃಹತ್‌ ಬೈಕ್‌ ರೈಡ್‌ ನಡೆಸಿದ 6,000 ಸವಾರರು

16/07/2025 2:22 PM

ಕರ್ನಾಟಕದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ?: ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

16/07/2025 2:13 PM

BREAKING: 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಿಸಿದ NCERT: ದೆಹಲಿ ಸುಲ್ತಾನರು ಕ್ರೂರಿಗಳು, ಮೊಘಲರು ಅಸಹಿಷ್ಣುಗಳಂತೆ

16/07/2025 2:13 PM
State News
KARNATAKA

ಎಲ್ಲಾ ಉದ್ಯಮಿಗಳಿಗೂ ರಾಜ್ಯದಲ್ಲಿ ಭೂಮಿ ಇದೆ: ಆಂಧ್ರದ ಆಮಿಷಕ್ಕೆ ಸಚಿವ ಎಂ.ಬಿ ಪಾಟೀಲ್ ಪ್ರತ್ಯುತ್ತರ

By kannadanewsnow0916/07/2025 2:28 PM KARNATAKA 2 Mins Read

ಬೆಂಗಳೂರು: ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ ಭೂಸ್ವಾಧೀನವನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕಾಯಿತು. ಆದರೆ ಈ ಉದ್ಯಮಿಗಳಿಗೆ…

ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನದ ಅಂಗವಾಗಿ ಬೃಹತ್‌ ಬೈಕ್‌ ರೈಡ್‌ ನಡೆಸಿದ 6,000 ಸವಾರರು

16/07/2025 2:22 PM

ಕರ್ನಾಟಕದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ?: ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

16/07/2025 2:13 PM

BREAKING : ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಚಾಕುವಿನಿಂದ ಇರಿದು ಆಟೊ ಚಾಲಕನ ಬರ್ಬರ ಹತ್ಯೆ

16/07/2025 2:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.