Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಖ್ಖರಿಗೆ ಮಾಡಿದ ಅವಮಾನ ; ‘ರವನೀತ್ ಸಿಂಗ್’ರನ್ನು ‘ದೇಶದ್ರೋಹಿ’ ಎಂದು ಕರೆದ ‘ರಾಹುಲ್ ಗಾಂಧಿ’ಗೆ ಬಿಜೆಪಿ ತರಾಟೆ

04/02/2026 6:33 PM

BREAKING : ಮಣಿಪುರದ ನೂತನ ಸಿಎಂ ಆಗಿ ಬಿಜೆಪಿಯ ಯುಮ್ನಮ್ ಖೇಮಚಂದ್ ಸಿಂಗ್ ಪ್ರಮಾಣ ವಚನ ಸ್ವೀಕಾರ

04/02/2026 6:22 PM

BREAKING : ಮಣಿಪುರದ ಮುಖ್ಯಮಂತ್ರಿಯಾಗಿ ‘ಯುಮ್ನಾಮ್ ಖೇಮ್ ಚಂದ್ ಸಿಂಗ್’ ಪ್ರಮಾಣ ವಚನ ಸ್ವೀಕಾರ

04/02/2026 6:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರಿಗೆ ಕಚೇರಿಯಲ್ಲಿ ಇನ್ಮುಂದೆ ಹರಿದ ಜೀನ್ಸ್, ಸ್ಲೀವ್ ಲೆಸ್ ಬ್ಲೌಸ್ ನಿಷೇಧ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರಿಗೆ ಕಚೇರಿಯಲ್ಲಿ ಇನ್ಮುಂದೆ ಹರಿದ ಜೀನ್ಸ್, ಸ್ಲೀವ್ ಲೆಸ್ ಬ್ಲೌಸ್ ನಿಷೇಧ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5722/12/2025 5:22 PM

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಹಾಗೂ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಸರ್ಕಾರಿ ನೌಕರರು ಚಲನವಲನ ವಹಿ (Movement Register) ಮತ್ತು ನಗದು ಘೋಷಣೆ ವಹಿ (Cash Declaration Register) ಯನ್ನು ನಿರ್ವಹಣೆ ಮಾಡದಿರುವುದು, ಸಭ್ಯ ಉಡುಗೆ ತೊಡುಗೆಗಳನ್ನು ಧರಿಸದಿರುವ ಕುರಿತು ಸಾರ್ವಜನಿಕರಿಂದ/ಸಂಘ ಸಂಸ್ಥೆಗಳಿಂದ ಹಲವಾರು ದೂರುಗಳು ಸ್ವೀಕೃತವಾಗುತ್ತಿವೆ. ಈ ಕುರಿತು ಈ ಹಿಂದೆ ಹಲವು ಸುತ್ತೋಲೆಗಳನ್ನು ಹೊರಡಿಸಲಾಗಿರುತ್ತದೆ. ಆದಾಗ್ಯೂ ಸದರಿ ಸುತ್ತೋಲೆಗಳನ್ನು ಪಾಲನೆ ಮಾಡದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದೆ.

1. ಚಲನವಲನ ವಹಿ ನಿರ್ವಹಣೆ(Movement Register):

ಹಾಗೂ ಕಚೇರಿ ವೇಳೆಯಲ್ಲಿ ಸರ್ಕಾರಿ ನೌಕರರ ಚಲನವಲನವನ್ನು ನಿಯಂತ್ರಿಸಲು ಚಲನವಲನ ವಹಿಯ ನಿರ್ವಹಣೆ ಬಗ್ಗೆ ಸುತ್ತೋಲೆ ಸಂಖ್ಯೆ: ಸಿಆಸುಇ 02 ತಎಇ 2016, ದಿನಾಂಕ: 12.04.2016, 2 05 ៩ 2020, ໖:07.02.2020 का ಮುಕಾ/4464335/2025, ದಿನಾಂಕ:25.07.2022 ನ್ನು ಹೊರಡಿಸಲಾಗಿದ್ದು, ಅದರಂತೆ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಲನವಲನ ವಹಿ (Movement Register) ಯನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಸೂಚಿಸಿದೆ.

ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಸರ್ಕಾರಿ ಕಚೇರಿಗಳ ನಿಗದಿತ ಪ್ರಾರಂಭ ಸಮಯವಾದ ಬೆಳಿಗ್ಗೆ 10.10 ಗಂಟೆಗೆ ಕಾರ್ಯಾಲಯಕ್ಕೆ ಹಾಜರಾಗಬೇಕು ಹಾಗೂ ಕಛೇರಿ ಸಮಯ ಮುಗಿಯುವವರೆಗೂ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ಹಾಜರಿರಬೇಕು. ಕಚೇರಿ ಸಮಯದಲ್ಲಿ ಅಧಿಕೃತ ಕಾರ್ಯಕ್ಕಾಗಿ ಹೊರ ಹೋಗಬೇಕಾದ್ದಲ್ಲಿಚಲನವಲನ ವಹಿಯಲ್ಲಿ ಹೊರ ಹೋಗುವ ಕಾರಣ/ಉದ್ದೇಶವನ್ನು ದಾಖಲಿಸಬೇಕು.

ಮೇಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಹೊರ ಹೋಗುವ ಸಮಯ ಹಾಗೂ ಹಿಂದಿರುಗಿದ ಸಮಯವನ್ನು ಸಹಿ ಮತ್ತು ದಿನಾಂಕದೊಂದಿಗೆ ದಾಖಲಿಸಬೇಕು.

ಚಲನವಲನ ವಹಿಯಲ್ಲಿ ದಾಖಲು ಮಾಡದೇ ಕರ್ತವ್ಯ ಸ್ಥಳದಲ್ಲಿ ಹಾಜರಿಲ್ಲದ ಅಧಿಕಾರಿ/ಸಿಬ್ಬಂದಿಗಳನ್ನು ಅನಧಿಕೃತವಾಗಿ ಗೈರು ಹಾಜರಿ ಎಂದು ಪರಿಗಣಿಸುವುದು ಮತ್ತು ಮೇಲಾಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳುವುದು.

ಕಚೇರಿ ಸಮಯದಲ್ಲಿ ಅನಧಿಕೃತವಾಗಿ ಮೇಲಾಧಿಕಾರಿಗಳು ನಿಯಂತ್ರಿಸುವುದು. ಹೊರ ಹೋಗುವ ನೌಕರರನ್ನು ಮೇಲಾಧಿಕಾರಿಗಳು ನಿಯಂತ್ರಿಸುವುದು.

2.ನಗದು ಘೋಷಣೆ ವಹಿ (Cash Declaration Register):

ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಕುರಿತು ಸಿಆಸುಇ(ಆಸು) 21 ಕತವ 2022, ದಿನಾಂಕ: 04.02.2022 ಮತ್ತು 14.03.2022 ರಲ್ಲಿ ಸುತ್ತೋಲೆಗಳನ್ನು ಹೊರಡಿಸಲಾಗಿದೆ.

ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್ ನಲ್ಲಿ ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ, ಕಛೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯ ನಿಗದಿತ ನಮೂನೆಯಲ್ಲಿ ಸಹಿಯೊಂದಿಗೆ ಘೋಷಿಸತಕ್ಕದ್ದು.

ಮೇಲಾಧಿಕಾರಿಗಳು ತಮ್ಮ ಎಲ್ಲಾ ಸಿಬ್ಬಂದಿಗಳು ನಗದು ಘೋಷಣಾ ವಹಿಯಲ್ಲಿ ನಮೂದಿಸುತ್ತಿರುವ ಬಗ್ಗೆ ಆಗ್ಗಿಂದಾಗ್ಗೆ ಪರಿಶೀಲಿಸಲು ಸೂಚಿಸಿದೆ.

3. ಸಭ್ಯ ಉಡುಗೆ ತೊಡುಗೆಗಳನ್ನು ಧರಿಸುವುದು:

ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ನೌಕರರುಗಳು ಸರ್ಕಾರದ ಘನತೆಗೆ ಧಕ್ಕೆ ಬಾರದಂತೆ ಮತ್ತು ಶೋಭೆಯನ್ನು ತರುವಂತಹ ಸಭ್ಯ ಉಡುಗೆ ತೊಡುಗೆಗಳನ್ನು ಮಾತ್ರ ಧರಿಸಬೇಕೆಂದು ಸರ್ಕಾರವು ಪರಿಷ್ಕೃತ ಸುತ್ತೋಲೆ ಸಂಖ್ಯೆ: ಸಿಆಸುಇ 65 ಇಆಸು 2013, ದಿನಾಂಕ:16.09.2013 ರಂದು ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

BIG NEWS: State government employees will no longer be allowed to wear torn jeans and sleeveless blouses in the office: Important order from the government!
Share. Facebook Twitter LinkedIn WhatsApp Email

Related Posts

ವಸಂತ್ ನಾಯಕ ಹತ್ಯೆ ಪ್ರಕರಣ : ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ

04/02/2026 6:13 PM2 Mins Read

BREAKING : ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೊಟ್ಟಿತಲೆ ಪರಾಕ್ : ಐತಿಹಾಸಿಕ ಮೈಲಾರಲಿಂಗ ಕಾರ್ಣಿಕ ನುಡಿ

04/02/2026 6:06 PM1 Min Read

SHOCKING NEWS : ಚಾಕಲೇಟ್‌ ಬದಲಿಗೆ ಪಟಾಕಿ ಸಿಡಿದು 3 ವರ್ಷದ ಮಗುವಿಗೆ ತೀವ್ರ ಗಾಯ

04/02/2026 5:59 PM2 Mins Read
Recent News

ಸಿಖ್ಖರಿಗೆ ಮಾಡಿದ ಅವಮಾನ ; ‘ರವನೀತ್ ಸಿಂಗ್’ರನ್ನು ‘ದೇಶದ್ರೋಹಿ’ ಎಂದು ಕರೆದ ‘ರಾಹುಲ್ ಗಾಂಧಿ’ಗೆ ಬಿಜೆಪಿ ತರಾಟೆ

04/02/2026 6:33 PM

BREAKING : ಮಣಿಪುರದ ನೂತನ ಸಿಎಂ ಆಗಿ ಬಿಜೆಪಿಯ ಯುಮ್ನಮ್ ಖೇಮಚಂದ್ ಸಿಂಗ್ ಪ್ರಮಾಣ ವಚನ ಸ್ವೀಕಾರ

04/02/2026 6:22 PM

BREAKING : ಮಣಿಪುರದ ಮುಖ್ಯಮಂತ್ರಿಯಾಗಿ ‘ಯುಮ್ನಾಮ್ ಖೇಮ್ ಚಂದ್ ಸಿಂಗ್’ ಪ್ರಮಾಣ ವಚನ ಸ್ವೀಕಾರ

04/02/2026 6:21 PM

ವಸಂತ್ ನಾಯಕ ಹತ್ಯೆ ಪ್ರಕರಣ : ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ

04/02/2026 6:13 PM
State News
KARNATAKA

ವಸಂತ್ ನಾಯಕ ಹತ್ಯೆ ಪ್ರಕರಣ : ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ

By kannadanewsnow0504/02/2026 6:13 PM KARNATAKA 2 Mins Read

ಉತ್ತರಕನ್ನಡ : ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಸಂತ ನಾಯಕ ಕೊಲೆಗೈದ ನಾಲ್ವರಿಗೆ…

BREAKING : ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೊಟ್ಟಿತಲೆ ಪರಾಕ್ : ಐತಿಹಾಸಿಕ ಮೈಲಾರಲಿಂಗ ಕಾರ್ಣಿಕ ನುಡಿ

04/02/2026 6:06 PM

SHOCKING NEWS : ಚಾಕಲೇಟ್‌ ಬದಲಿಗೆ ಪಟಾಕಿ ಸಿಡಿದು 3 ವರ್ಷದ ಮಗುವಿಗೆ ತೀವ್ರ ಗಾಯ

04/02/2026 5:59 PM

BREAKING : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶಾಕ್ : ಟಿಕೆಟ್ ದರ ಏರಿಕೆಗೆ ರಾಜ್ಯ  ಸರ್ಕಾರ ಗ್ರೀನ್ ಸಿಗ್ನಲ್!

04/02/2026 5:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.