Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

UAE-ಓಮನ್’ನಿಂದ ಕತಾರ್’ವರೆಗೆ.. 48 ಗಂಟೆಗಳಲ್ಲಿ ಈ 8 ದೇಶಗಳೊಂದಿಗೆ ‘ಪ್ರಧಾನಿ ಮೋದಿ’ ಮಾತುಕತೆ!

03/03/2026 9:31 PM

BREAKING : ಇರಾನ್ ಕೌನ್ಸಿಲ್ ಕಟ್ಟಡದ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ

03/03/2026 9:01 PM

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

03/03/2026 9:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆಸ್ತಿ’ ವಿವರ ಸಲ್ಲಿಕೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Govt Employee
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆಸ್ತಿ’ ವಿವರ ಸಲ್ಲಿಕೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Govt Employee

By kannadanewsnow5712/04/2025 6:22 AM

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಕರ್ನಾಟಕ ಲೋಕಾಯುಕ್ತದ ಅಧಿಕಾರಿಗಳು ಕೋರಿದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸೂಚನೆ ನೀಡಿದೆ.

ಲೋಕಾಯುಕ್ತ ಕಾಯ್ದೆ 1984 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರಡಿ ಪ್ರಾಧಿಕರಿಸಲ್ಪಟ್ಟ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಚರಾಸ್ತಿ/ಸ್ಮಿರಾಸ್ತಿಗಳ ಮಾಹಿತಿ ಹಾಗೂ ವಿವರಗಳನ್ನು ಕೋರಿದ ಸಂದರ್ಭದಲ್ಲಿ ಅವುಗಳನ್ನು ಕೆಲವು ಇಲಾಖಾ ಅಧಿಕಾರಿಗಳು ಮತ್ತು ಸಕ್ಷಮ ಪ್ರಾಧಿಕಾರಿಗಳು ಒದಗಿಸದಿರುವ ಬಗ್ಗೆ ಉಲ್ಲೇಖ (1) ರ ಅರ ಸರ್ಕಾರದ ಪತ್ರದಲ್ಲಿ ನಿಬಂಧಕರು ಕರ್ನಾಟಕ ಲೋಕಾಯುಕ್ತ ಇವರು ಸರ್ಕಾರದ ಗಮನ ಸೆಳೆದಿದ್ದು, ಇಂತಹ ಮಾಹಿತಿಯನ್ನು (ಅವುಗಳ ಅರಸಿಕೆಗೆ (access) ಕೆಲವು ಸುರಕ್ಷತೆ ಮತ್ತು ಇತಿಮಿತಿಗಳನ್ನು ನಿಗದಿಪಡಿಸುವುದಕ್ಕೆ ಒಳಪಟ್ಟು) ಜಾಲತಾಣದಲ್ಲಿ ಪ್ರಕಟಿಸಿದಲ್ಲಿ (web host) ಅದು ಲೋಕಾಯುಕ್ತ ಸಂಸ್ಥೆಗೂ ಲಭ್ಯವಾಗುತ್ತದೆಯೆಂದು ಅಭಿಪ್ರಾಯ ಪಡುತ್ತಾ, ಇಂತಹ ಮಾಹಿತಿಯನ್ನು ಜಾಲತಾಣದಲ್ಲಿ ಪ್ರಕಟಪಡಿಸುವ ಸಂಬಂಧ ಎಲ್ಲಾ ಇಲಾಖಾ ಮುಖ್ಯಸ್ಮರಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಕೋರಿರುತ್ತಾರೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 24ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರುವಾಗ ಹಾಗೂ ತರುವಾಯ ಪ್ರತಿ ವರ್ಷ ಆತನ ಹಾಗೂ ಆತನ ಕುಟುಂಬದ ಸದಸ್ಯರ ಆಸ್ತಿ ಹೊಣೆಗಾರಿಕೆ ಪಟ್ಟಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ ರಾಜ್ಯದಲ್ಲಿದ್ದ Vigilance Commission ಕೈಗೊಳ್ಳುವ ಇಲಾಖಾ ವಿಚಾರಣೆಗಳಲ್ಲಿ ತನಿಖಾ ಸಂಸ್ಥೆಯು ಕೋರುವ ಮಾಹಿತಿ/ದಾಖಲೆಗಳನ್ನು ವಿಳಂಬವಿಲ್ಲದ ಅವರಿಗೆ ಒದಗಿಸುವಂತೆ ಉಲ್ಲೇಖ(2) ಮತ್ತು (3)ರ ಸುತ್ತೋಲೆಗಳಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಈ ಸೂಚನೆಗಳು ಲೋಕಾಯುಕ್ತದ ಪ್ರಕರಣಗಳಿಗೂ ಅನ್ವಯವಾಗುತ್ತವೆ ಎಂಬ ಅಂಶವನ್ನು ಪುನರುಚ್ಛರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಆಸ್ತಿ-ಹೊಣೆಗಾರಿಕಗೆ ಸಂಬಂಧಿಸಿದ ಮಾಹಿತಿ – ವಿವರಗಳನ್ನು ಲೋಕಾಯುಕ್ತದ ಸಕ್ರಮ ಅಧಿಕಾರಿಗಳು ಕೋರಿದ ಸಂದರ್ಭದಲ್ಲಿ ಅವುಗಳನ್ನು ಯಾವುದೇ ವಿಳಂಬವಿಲ್ಲದೇ ಅವರಿಗೆ ಒದಗಿಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಈ ಸೂಚನೆಗಳನ್ನು ಪಾಲಿಸಲು ವಿಫಲರಾದ ಇಲಾಖಾ ಮುಖ್ಯಸ್ಥರು ಹಾಗೂ ಸಕ್ಷಮ ಪ್ರಾಧಿಕಾರಗಳನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು.

BIG NEWS: State `government employees' take note: Important order from the government regarding submission of `asset details'!
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

03/03/2026 9:00 PM2 Mins Read

BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು

03/03/2026 8:53 PM1 Min Read

ರಾಜ್ಯದ ಪೋಷಕರಿಗೆ ಶಾಕ್: ಈ ವರ್ಷವೂ ಖಾಸಗಿ ಶಾಲೆಗಳ ಶುಲ್ಕ ಏರಿಕೆ; ಶೇ.15ರಷ್ಟು ಹೆಚ್ಚಳಕ್ಕೆ ಚಿಂತನೆ!

03/03/2026 8:39 PM1 Min Read
Recent News

UAE-ಓಮನ್’ನಿಂದ ಕತಾರ್’ವರೆಗೆ.. 48 ಗಂಟೆಗಳಲ್ಲಿ ಈ 8 ದೇಶಗಳೊಂದಿಗೆ ‘ಪ್ರಧಾನಿ ಮೋದಿ’ ಮಾತುಕತೆ!

03/03/2026 9:31 PM

BREAKING : ಇರಾನ್ ಕೌನ್ಸಿಲ್ ಕಟ್ಟಡದ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ

03/03/2026 9:01 PM

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

03/03/2026 9:00 PM

BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು

03/03/2026 8:53 PM
State News
KARNATAKA

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

By kannadanewsnow0903/03/2026 9:00 PM KARNATAKA 2 Mins Read

ಬೆಂಗಳೂರು : “ಜನತೆಗೆ ಗೌರವಯುತವಾಗಿ ಜೀವನ ನಡೆಸಲು ಮೂಲಸೌಕರ್ಯ ಕಲ್ಪಿಸುವುದೇ ಜನಪ್ರತಿನಿಧಿಗಳ ಕರ್ತವ್ಯ” ಎಂದು ಸಚಿವ ಕೆ.ಜೆ.ಜಾರ್ಜ್ ಅನಿಸಿಕೆ ವ್ಯಕ್ತಪಡಿಸಿದರು.…

BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು

03/03/2026 8:53 PM

ರಾಜ್ಯದ ಪೋಷಕರಿಗೆ ಶಾಕ್: ಈ ವರ್ಷವೂ ಖಾಸಗಿ ಶಾಲೆಗಳ ಶುಲ್ಕ ಏರಿಕೆ; ಶೇ.15ರಷ್ಟು ಹೆಚ್ಚಳಕ್ಕೆ ಚಿಂತನೆ!

03/03/2026 8:39 PM

BREAKING: ಡೆತ್ ನೋಟ್ ಬರೆದಿಟ್ಟು ಬ್ರಿಮ್ಸ್ ಆಸ್ಪತ್ರೆ ವೈದ್ಯ ಆತ್ಮಹತ್ಯೆ

03/03/2026 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.