ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ರಜಾ ಸೌಲಭ್ಯಗಳು ಹಾಗೂ ನಿಯಮಗಳ ಕುರಿತಂತೆ ಸರ್ಕಾರವು ಮಹತ್ವದ ಮಾಹಿತಿ ನೀಡಿದ್ದು, ಗಳಿಕೆ ರಜೆ, ಶಿಶುಪಾಲನಾ ರಜೆ ಸೇರಿ ಹಲವು ರಜೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಜೆಯನ್ನು ಹಕ್ಕೆಂದು ಪಡೆಯಲಾಗದು. ರಜೆಯನ್ನು ಮಂಜೂರು ಮಾಡುವ ಅಧಿಕಾರಿಯು ಸಾರ್ವಜನಿಕ ಹಿತ ದೃಷ್ಟಿಯಿಂದ ರಜೆ ಮಂಜೂರು ಮಾಡಬಹುದು ಅಥವಾ ತಿರಸ್ಕರಿಸಬಹುದು. ರಜೆಯ ಸ್ವರೂಪವನ್ನು ಮಾರ್ಪಡಿಸುವ ಹಾಗಿಲ್ಲ. ಸತತವಾಗಿ 4 ತಿಂಗಳಿಗಿಂತಲೂ ಹೆಚ್ಚಾಗಿ ಅನಧಿಕೃತ ಗೈರು ಹಾಜರಾದಲ್ಲಿ, ಅಂತಹ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಿ (ಸಿಸಿಎ) ಪ್ರಕಾರ ಸೇವೆಯಿಂದ ವಜಾ ಮಾಡಬಹುದು. ಅನುಮತಿ ಇಲ್ಲದೆ ಗೈರು ಹಾಜರಾದಲ್ಲಿ ‘ಅನಧಿಕೃತ ಗೈರು ಹಾಜರಿ’ ಎಂದು ಪರಿಗಣಿಸಿ ಸಂಬಳವನ್ನು ಕಟಾವು ಮಾಡಲಾಗುವುದು.
ರಜಾ ನಿಯಮಗಳು (ನಿಯಮ 105 ರಿಂದ 206)