ಬೆಂಗಳೂರು : ಖಜಾನೆ-2ರ ತಂತ್ರಾಂಶದ ಮುಖಾಂತರ ವಯೋ ನಿವೃತ್ರ/ ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ವಿವಿಧ ಪಾತ್ರದಾರಿಗಳು ಅನುಸರಿಸಬೇಕಾದ ಕ್ರಮಗಳು ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
1. DDO
a. ಡಿಡಿಓ ರವರು ನಿವೃತ್ರ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಖಜಾನೆ-2 ರ ತಂತ್ರಾಂಶದ ಮುಖಾಂತರ ಮಂಜೂರು ಮಾಡುವುದು ಮತ್ತು ನಿಯಮಗಳ ಅನುಸಾರ ಭೌತಿಕ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮಹಾಲೇಖಪಾಲರಿಗೆ ಸಲ್ಲಿಸುವುದು. ಭೌತಿಕ ಅರ್ಜಿಗಳನ್ನು ಸಲ್ಲಿಸುವ ಮುಖ ಪುಟದಲ್ಲಿ ಖಜಾನೆ-2 ರಲ್ಲಿ ಸೃಜನೆಗೊಳ್ಳುವ Case Number ನಮೂದಿಸಿ ಹಾಗೂ Form-7 ಮತ್ತು Form 7A ಅನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸಬೇಕಾಗಿರುತ್ತದೆ.
b. ಡಿಡಿಓ ರವರು ಮೇಲಿನ ಕ್ರ.ಸಂ 1(a) ಪಿಂಚಣಿ ಅರ್ಜಿಗಳನ್ನು ಹೊರತುಪಡಿಸಿ ಇತರೆ ಪಿಂಚಣಿ ಅರ್ಜಿಗಳನ್ನು (ಉದಾ: ಕುಟುಂಬ ಪಿಂಚಣಿ) ನಿಯಮಾನುಸಾರ ಈ ಹಿಂದಿನಂತೆ ಮಹಾಲೇಖಪಾಲರಿಗೆ ಸಲ್ಲಿಸುವುದು.
c. ಡಿಡಿಓ ರವರಿಗೆ ಖಜಾನೆ-2 ರ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಎದುರಾದಲ್ಲಿ ಸರಿಪಡಿಸಿಕೊಳ್ಳುವುದು. ಸಂಬಂದಪಟ್ಟ ಖಜಾನೆಯನ್ನು ಸಂಪರ್ಕಿಸಿ
d. ಡಿಡಿಓ ರವರು ಖಜಾನೆ-2 ರ ತಂತ್ರಾಂಶದಲ್ಲಿ ಅರ್ಜಿಗಳನ್ನು ಸಿದ್ಧಪಡಿಸುವಾಗ HRMS ಅನುಕಲನದ ಮುಖಾಂತರ ಸ್ವೀಕೃತವಾಗುವ ದತ್ತಾಂಶದಲ್ಲಿ ಯಾವುದೇ ತಪ್ಪಿದ್ದಲ್ಲಿ HRMS ನಲ್ಲಿ ಸರಿಪಡಿಸಿಕೊಂಡು ಮತ್ತೊಮ್ಮೆ ದತ್ತಾಂಶವನ್ನು ಸೆಳೆಯಬಹುದಾಗಿದೆ.
2. ಮಹಾಲೇಖಪಾಲರು
a. ಡಿಡಿಓ ರವರು ಖಜಾನೆ-2ರ ಆನ್‌ಲೈನ್ ಮುಖಾಂತರ ಸಲ್ಲಿಸುವ ಅರ್ಜಿಯನ್ನು ಭೌತಿಕವಾಗಿ ಸ್ವೀಕರಿಸುವ ಅರ್ಜಿಯೊಂದಿಗೆ ಪರಿಶೀಲಿಸಿ ಪಿಂಚಣಿ ಪ್ರಾಧೀಕರಿಸುವುದು.
b. ಪಿಂಚಣಿ ಪಾವತಿ ಆದೇಶ, ನಿವೃತ್ತಿ ಉಪದಾನ ಮತ್ತು ಪರಿವರ್ತಿತ ಪಿಂಚಣಿ ಆದೇಶಗಳನ್ನು (CVP) XML ಮತ್ತು PDF ಮಾದರಿಯಲ್ಲಿ ಖಜಾನೆಯ SFTP ನಲ್ಲಿ place ಮಾಡುವುದು.
3. ಖಜಾನೆ
a. ಮಹಾಲೇಖಪಾಲರಿಂದ ಸ್ವೀಕೃತವಾದ ಪಿಂಚಣಿ ಪಾವತಿ ಆದೇಶದನ್ವಯ ನಿಯಮಾನುಸಾರ ಕ್ರಮವಹಿಸಿ ಪ್ರಥಮ ಪಿಂಚಣಿ ಪಾವತಿಸುವುದು ಮತ್ತು ಮಾಹೆಯಾನ ಪಾವತಿಗಾಗಿ ಸಂಬಂಧಪಟ್ಟ Agency Bank ಮುಖಾಂತರ ಸಿ.ಪಿ.ಪಿ.ಸಿ. ರವರಿಗೆ ಹಿಂದಿನಂತೆ ವರ್ಗಾಯಿಸುವುದು.
4. ಸಿ.ಪಿ.ಪಿ.ಸಿ (ಸಾರ್ವಜನಿಕ ಕ್ಷೇತ್ರ ಬ್ಯಾಂಕುಗಳು)
a. ಯಾವುದೇ ಬದಲಾವಣೆ ಇರುವುದಿಲ್ಲ. ಸರ್ಕಾರಿ ಆದೇಶ ಸಂಖ್ಯೆ: ಆಇ 8 ಟಿಟಿಸಿ 1984, ದಿನಾಂಕ: 26.3.1986 ಮತ್ತು ತದನಂತರದ ತಿದ್ದುಪಡಿ ಕ್ರಮವಹಿಸುವುದು.
ತಂತ್ರಾಂಶದ ಮುಖಾಂತರ ಪಿಂಚಣಿ ಅರ್ಜಿಗಳನ್ನು ಮಹಾಲೇಖಪಾಲರಿಗೆ ಸಲ್ಲಿಸಲು ಮುಂದುವರೆಸುವುದು.
ಖಜಾನೆ-2ರ ತಂತ್ರಾಂಶದ ಮುಖಾಂತರ ವಯೋ ನಿವೃತ್ತಿ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ವಿವಿಧ ಪಾತ್ರದಾರಿಗಳು ಅನುಸರಿಸಬೇಕಾದ ಕ್ರಮಗಳನ್ನು ಈ ಆದೇಶದ ಅನುಬಂಧದಲ್ಲಿ ಲಗತ್ತಿಸಿದೆ.