Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

UAE-ಓಮನ್’ನಿಂದ ಕತಾರ್’ವರೆಗೆ.. 48 ಗಂಟೆಗಳಲ್ಲಿ ಈ 8 ದೇಶಗಳೊಂದಿಗೆ ‘ಪ್ರಧಾನಿ ಮೋದಿ’ ಮಾತುಕತೆ!

03/03/2026 9:31 PM

BREAKING : ಇರಾನ್ ಕೌನ್ಸಿಲ್ ಕಟ್ಟಡದ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ

03/03/2026 9:01 PM

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

03/03/2026 9:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಕಡ್ಡಾಯ ಜೀವ ವಿಮೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಕಡ್ಡಾಯ ಜೀವ ವಿಮೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5701/06/2025 9:37 AM

ಬೆಂಗಳೂರು :  ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು, NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಪಡೆಯಲು ಹೆಚ್ .ಆ‌ರ್.ಎಂ.ಎಸ್.ನಲ್ಲಿ ಸೇವಾ ವಿವರಗಳ ಪ್ರಾಥಮಿಕ ಮಾಹಿತಿಯನ್ನು ಇಂದೀಕರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮೆಯ ಎಲ್ಲಾ ಸೇವೆಗಳನ್ನು ಪ್ರಸ್ತುತ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಈ ಆನ್‌ಲೈನ್ ಸೇವೆಗಳನ್ನು ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಅರ್ಜಿಗಳನ್ನು ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳ ಮುಖಾಂತರ ವಿಮಾ ಇಲಾಖೆಗೆ ಸಲ್ಲಿಸಬೇಕಿರುತ್ತದೆ. ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ವೇತನ ಬಟವಾಡೆ ಅಧಿಕಾರಿಗಳಿಗೆ ಖಜಾನೆ DDO Code ಇಲ್ಲದಿರುವುದರಿಂದ ಇಂತಹ DDO ಗಳಿಗೆ ಈವರೆಗೆ ವಿಮಾ ಇಲಾಖೆಯಲ್ಲಿ DDO Login ಸೃಜಿಸಲು ಸಾಧ್ಯವಾಗಿರುವುದಿಲ್ಲ. ಇದರಿಂದಾಗಿ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ವಿಮಾ ಇಲಾಖೆಯ ಆನ್‌ಲೈನ್‌ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ, ಉಲ್ಲೇಖ(1) ರ ಸರ್ಕಾರದ ಆದೇಶದಲ್ಲಿ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ NTT DDO CODE ( NON TREASURY TRANSACTION DDO CODE) ಸೇವೆಗಳನ್ನು ಒದಗಿಸಲು ಅನುಮತಿಯನ್ನು ನೀಡಿ ಆದೇಶಿಸಲಾಗಿರುತ್ತದೆ.

ಪ್ರಸ್ತುತ ವಿಮಾ ಇಲಾಖೆಯಲ್ಲಿ HRMSನಲ್ಲಿ ಲಭ್ಯವಿರುವ ರಾಜ್ಯ ಸರ್ಕಾರಿ ನೌಕರರ ಪ್ರಾಥಮಿಕ ವಿವರಗಳ ದತ್ತಾಂಶವನ್ನು ವಿಮಾ ಇಲಾಖೆಗೆ ಪಡೆದು ಅದರ ಆಧಾರದ ಮೇಲೆ ವಿಮಾದಾರರ ದತ್ತಾಂಶವನ್ನು ಮಾನ್ಯ ಮಾಡುತ್ತಿರುವುದರಿಂದ ಹಾಗೂ ಪ್ರಸ್ತುತ HRMS-KGID ದತ್ತಾಂಶಗಳ ಅನುಕಲನ ತಂತ್ರಾಂಶವು ಅಭಿವೃದ್ಧಿಯಾಗುತ್ತಿರುವುದರಿಂದ ರಾಜ್ಯ ಸರ್ಕಾರಿ ನೌಕರರ ದತ್ತಾಂಶವು HRMS ಮತ್ತು KGID ತಂತ್ರಾಂಶಗಳಲ್ಲಿ ಏಕರೂಪವಾಗಿರಬೇಕು. ಇದರಿಂದಾಗಿ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು NTT DDO CODE ಆಧಾರದ ಮೇಲೆ ಒದಗಿಸಲು HRMS ನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರ ಪ್ರಾಥಮಿಕ ವಿವರಗಳು ಇರುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ಸೇವಾ ವಿವರಗಳು HRMS ನಲ್ಲಿ ಇಲ್ಲವಾದಲ್ಲಿ ಅವರ ಮಾತೃ ಇಲಾಖೆಯಲ್ಲಿನ HRMS ನೋಡಲ್ ಅಧಿಕಾರಿಯ ಮುಖಾಂತರ HRMS ನಲ್ಲಿ ಅವರ Service Register ಅನ್ನು ಸೃಜಿಸಬೇಕಿರುತ್ತದೆ ಹಾಗೂ ವೈಯಕ್ತಿಕ ವಿವರಗಳು(ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ಲಿಂಗ, ಪಾನ್‌ಸಂಖ್ಯೆ, ಸರ್ಕಾರಿ ಸೇವೆಗೆ ಸೇರಿದ ದಿನಾಂಕ, ಪ್ರಥಮ ವಿಮಾ ಪಾಲಿಸಿ ಸಂಖ್ಯೆ,ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಇತ್ಯಾದಿ) ಅಪೂರ್ಣವಿದ್ದಲ್ಲಿ ಸಂಪೂರ್ಣವಾದ ಮಾಹಿತಿಯೊಂದಿಗೆ HRMS ನಲ್ಲಿ ಇಂದೀಕರಿಸುವುದು ಅಗತ್ಯವಾಗಿರುತ್ತದೆ.

ಮೇಲ್ಕಂಡ ಸಮಸ್ಯೆಯನ್ನು ನಿವಾರಿಸಲು ಉಲ್ಲೇಖ(2)ರ ಪತ್ರದಲ್ಲಿ ವಿಮಾ ನಿರ್ದೇಶಕರು ಸಲ್ಲಿಸಿರುವ ಕೋರಿಕೆಯನ್ನು ಪರಿಶೀಲಿಸಿ, ಅನ್ಯ ಸೇವೆ/ನಿಯೋಜನೆ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರು NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್‌ಲೈನ್ ಸೇವೆಗಳನ್ನು ಪಡೆಯುವುದನ್ನು ಸಾಧ್ಯಗೊಳಿಸಲು ಅನುವಾಗುವಂತೆ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್‌ಲೈನ್‌ ಸೇವೆಗಳನ್ನು ಪಡೆಯಲು ಅನುವಾಗುವಂತೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಅನ್ಯ ಸೇವೆ/ನಿಯೋಜನೆ ಮೇರೆಗೆ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಅವರ ಮಾತೃ ಇಲಾಖೆಯ HRMS ನೋಡಲ್ ಅಧಿಕಾರಿಯ ಮೂಲಕ HRMS ನಲ್ಲಿ Service Register ಅನ್ನು ಸೃಜಿಸಲು ಕ್ರಮವಹಿಸಲು ಹಾಗೂ ಪ್ರಸ್ತುತ HRMS ಮೂಲಕ ವೇತನ ಪಡೆಯುತ್ತಿರುವ ಅಧಿಕಾರಿ/ನೌಕರರು ತಮ್ಮ ವೈಯಕ್ತಿಕ ವಿವರಗಳ ಮಾಹಿತಿಯು ಅಪೂರ್ಣ/ತಿದ್ದುಪಡಿ ಇದ್ದಲ್ಲಿ ಸಂಪೂರ್ಣವಾದ ಮಾಹಿತಿಯನ್ನು HRMS ನಲ್ಲಿ ಇಂದೀಕರಿಸಲು ಆದೇಶಿಸಿದೆ.

May be an image of text that says "ಇಲಾಖೆಯಿಂದ ಅನ್ಯ ಸೇವ/ನಿಯೋಜನೆಯ ನಿಗಮ, ಮಂಡಳಿ ಮತ್ತು ಸ್ವಾಯತ್ತ NTT ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಪಡೆಯಲು ಪ್ರಾಥಮಿಕ ಇಂದೀಕರಿಸುವ ಕವಿಇ ದಿನಾಂಕ: ಪ್ರಸ್ಥಾವನೆ: ಕರ್ನಾಟಕ ಇಲಾಖೆಯ ಕಡ್ಡಾಯ ಜೀವ ವಿಮಯ ಎಲ್ಲಾ ಸೇವಗಳನ್ನು ಸೇವೆಗಳನ್ನು ಪಡೆಯಲು ಸರ್ಕಾರದ ಮುಖಾಂತರ ಅಧಿಕಾರಿಗಳು ವಿಮಾ ញយសក ಸಲ್ಲಿಸಬೇಕಿರುತ್ತದೆ. ಮಾತೃ ಇಲಾಖೆಯಿಂದ ಸ್ವಾಯಕ್ತ ಸಂಸ್ಥಗಳಲ್ಲಿ ಸಲ್ಲಿಸುತ್ತಿರುವ DDO ಸಾಧ್ಯವಾಗಿರುವುದಿಲ್ಲ. ವಿಮಾ ಸೇವೆ/ನಿಯೋಜನೆಯ ಸರ್ಕಾರದ ಅಧಿಕಾರಿಗಳು ಮತ್ತು ಗಳಿಗೆ ಇಲಾಖೆಯ ಆನ್ಲೈನ್ ಈಹಿನ್ನಲೆಯಲ್ಲಿ, ಉಲ್ಲೇಖ್(1) ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ DDO CODE TREASURY TRANSACTION DDO CODE) ಆಧಾರದ ಮೇಲೆ ವಿಮಾ ಇಲಾಖೆಯ ಪ್ರಸ್ತುತ ಇಲಾಖೆಯಲ್ಲಿ ದತ್ತಾಂಶವನ್ನು ಆಲಾಖೆಗೆ ಮಾಡುತ್ತಿರುವುದರಿಂದ ಪ್ರಸ್ತುತ ಲಭ್ಯವಿರುವ ರಾಜ್ಯ ಸರ್ಕಾರಿ ನೌಕರರ ಅದರ ಆಧಾರದ ಮೇಲೆ ದತ್ತಾಂಶವನ್ನು ದತ್ತಾಂಶಗಳ ಅನುಕಲನ ತಂತ್ರಾಂಶವು ಮತ್ತು KGID ತಂತ್ರಾಂಶಗಳಲ್ಲಿ ಸೇವೆಗಳನ್ನು NTT DDO ಪ್ರಾಥಮಿಕ ವಿವರಗಳು ಸಂಸ್ಥಗಳಲ್ಲಿ ವಿಮಾ HRMS ಇರುವುದು ಕಡ್ಡಾಯವಾಗಿರುತ್ತದೆ. ನಿಗಮ, ಮಂಡಳಿ ಮತ್ತು"

 

May be an image of text

May be an image of text

BIG NEWS: State government employees pay attention: Important order from the government regarding `compulsory life insurance'!
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

03/03/2026 9:00 PM2 Mins Read

BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು

03/03/2026 8:53 PM1 Min Read

ರಾಜ್ಯದ ಪೋಷಕರಿಗೆ ಶಾಕ್: ಈ ವರ್ಷವೂ ಖಾಸಗಿ ಶಾಲೆಗಳ ಶುಲ್ಕ ಏರಿಕೆ; ಶೇ.15ರಷ್ಟು ಹೆಚ್ಚಳಕ್ಕೆ ಚಿಂತನೆ!

03/03/2026 8:39 PM1 Min Read
Recent News

UAE-ಓಮನ್’ನಿಂದ ಕತಾರ್’ವರೆಗೆ.. 48 ಗಂಟೆಗಳಲ್ಲಿ ಈ 8 ದೇಶಗಳೊಂದಿಗೆ ‘ಪ್ರಧಾನಿ ಮೋದಿ’ ಮಾತುಕತೆ!

03/03/2026 9:31 PM

BREAKING : ಇರಾನ್ ಕೌನ್ಸಿಲ್ ಕಟ್ಟಡದ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ

03/03/2026 9:01 PM

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

03/03/2026 9:00 PM

BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು

03/03/2026 8:53 PM
State News
KARNATAKA

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

By kannadanewsnow0903/03/2026 9:00 PM KARNATAKA 2 Mins Read

ಬೆಂಗಳೂರು : “ಜನತೆಗೆ ಗೌರವಯುತವಾಗಿ ಜೀವನ ನಡೆಸಲು ಮೂಲಸೌಕರ್ಯ ಕಲ್ಪಿಸುವುದೇ ಜನಪ್ರತಿನಿಧಿಗಳ ಕರ್ತವ್ಯ” ಎಂದು ಸಚಿವ ಕೆ.ಜೆ.ಜಾರ್ಜ್ ಅನಿಸಿಕೆ ವ್ಯಕ್ತಪಡಿಸಿದರು.…

BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು

03/03/2026 8:53 PM

ರಾಜ್ಯದ ಪೋಷಕರಿಗೆ ಶಾಕ್: ಈ ವರ್ಷವೂ ಖಾಸಗಿ ಶಾಲೆಗಳ ಶುಲ್ಕ ಏರಿಕೆ; ಶೇ.15ರಷ್ಟು ಹೆಚ್ಚಳಕ್ಕೆ ಚಿಂತನೆ!

03/03/2026 8:39 PM

BREAKING: ಡೆತ್ ನೋಟ್ ಬರೆದಿಟ್ಟು ಬ್ರಿಮ್ಸ್ ಆಸ್ಪತ್ರೆ ವೈದ್ಯ ಆತ್ಮಹತ್ಯೆ

03/03/2026 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.