ಬೆಂಗಳೂರು : ಸರ್ಕಾರಿ ನೌಕರರಿಗೆ ತಪ್ಪಾಗಿ/ಹೆಚ್ಚುವರಿಯಾಗಿ ಅಥವಾ ಕಡಿಮೆಯಾಗಿ ಪಾವತಿಸಲಾದ ಭತ್ಯೆಗಳನ್ನು ಸರಿಪಡಿಸಿ ಮರು ಪಾವತಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ/ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 1 ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಉಲ್ಲೇಖ [1]ರ ಆದೇಶದಂತೆ ಪರಿಷ್ಕರಿಸಲಾಗಿದೆ. HRMS 2.0 Arrears Module date Base ಅನ್ನು ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಪಡೆಯುತ್ತಿರುವ ಭತ್ಯೆಗಳ ವಿವರಗಳನ್ನು ವಿಶ್ಲೇಷಿಸಿದಾಗ ಕೆಳಕಂಡ ಅಂಶಗಳು ಕಂಡು ಬಂದಿರುತ್ತವೆ.
ವಿವಿಧ ವೃಂದ/ಹುದ್ದೆಗಳಿಗೆ ಭತ್ಯೆಗಳನ್ನು ಅನ್ವಯಿಸದಿದ್ದರೂ ಸಹ ಭತ್ಯೆಗಳನ್ನು ಸೆಳೆಯಲಾಗಿರುತ್ತದೆ.
ತಪ್ಪು ವರ್ಗೀಕರಣ ಮಾಡಿ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.
ನಿಗದಿತ ದರಕ್ಕಿಂತ ಹೆಚ್ಚಿನ ಅಥವಾ ಕಡಿಮೆ ದರದಲ್ಲಿ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.
ವೃಂದ ಬದಲಾವಣೆಯಾದಾಗ ಹಾಗೂ ಮರು ನೇಮಕಗೊಂಡಾಗ ಹಿಂದಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.
ಕಡ್ಡಾಯ ಭತ್ಯೆಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.
ಶಿಕ್ಷಣ ಇಲಾಖೆಯ ಆಗಸ್ಟ್ 2024 ರಿಂದ ಅಕ್ಟೋಬರ್ 2024ರ ಮಾಹೆಯಲ್ಲಿ ಸೆಳೆದಿರುವ ಭತ್ಯೆಗಳನ್ನು ANFFEEDING CHARGES, ANTI NAXAL ALLOWANCE, COMPA, FNGPC, GRADE PAY, HARDSHIP ALLOWANCES, HCGA, HCTA, HONORARIUM, LEAVE PAY, PENSION ALLOWANCE, PERSONAL PAY-PSR, PF, PP-FIXATION, PRINCIPAL ALLOWANCE, RATION ALLOWANCES, HGCE, SPA-CAUVERY, SPK-KRISHNA, SPECIAL ALLOWANCE- COMPUTER, PSL- KIT, STIPEND, WEEKLY OFF ಈ ರೀತಿ ನಮ್ಮ ಇಲಾಖೆಗೆ ಅನ್ವಯಿಸದ ಭತ್ಯೆಗಳನ್ನು ಸೆಳೆಯುತ್ತಿರುವುದು ಕಂಡು ಬಂದಿರುತ್ತದೆ. DEPUTATION ALLOWANCE ಹಾಗೂ FTA ಅನ್ನು ವೇತನ ಬಿಲ್ಲಿನಲ್ಲಿ ಸೆಳೆಯುತ್ತಿರುವುದು ಕಂಡು ಬಂದಿರುತ್ತದೆ.
ಉಲ್ಲೇಖ-1ರಲ್ಲಿ ಪ್ರಸ್ತಾಪಿಸಿರುವ ಭತ್ಯೆಗಳನ್ನು ಸೆಳೆಯಲು ವೇತನ ಬಟವಾಡೆ ಅಧಿಕಾರಿಗಳು ಸರ್ಕಾರ/ಇಲಾಖೆ/ಸಕ್ಷಮ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನಯ ಸೆಳೆಯತಕ್ಕದ್ದು, ಒಂದು ವೇಳೆ ವ್ಯತಿರಿಕ್ತವಾಗಿ ಡ್ರಾ ಮಾಡಿದ್ದಲ್ಲಿ ಸಂಬಂಧಿಸಿದ ವೇತನ ಬಡವಾಡ ಅಧಿಕಾರಿಗಳು ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಮತ್ತು ಮಾನ್ಯ ಮಹಾಲೇಖಪಾಲರ ಕಛೇರಿ ಅಕ್ಷೇಪಣೆಗಳಿಗೆ ವೇತನ ಬಡವಾಡ ಅಧಿಕಾರಿಗಳು ಬಾಧ್ಯಸ್ಥರಾಗಿರುತ್ತಾರೆಂದು ಸ್ಪಷ್ಟಪಡಿಸಿದೆ.
ಮುಂದುವರೆದು WASHING ALLOWANCE ಎಂದಿರುವುದನ್ನು UNIFORM MAINTAINANCE ALLOWANCE ಎಂದು ಮತ್ತು PP-PSR ಎಂದಿರುವುದನ್ನು PP-SFN ಎಂದು ಎಲ್ಲಾ ಡಿ.ಡಿ.ಓ ಗಳು ಬದಲಾಯಿಸಿಕೊಳ್ಳುವುದು.
ಎಲ್ಲಾ ಡಿ.ಡಿ.ಓ ಗಳು ತುರ್ತಾಗಿ ತಮ್ಮ ಹಂತದಲ್ಲಿ ಸೆಳೆಯಲಾಗುತ್ತಿರುವ ವಿವಿಧ ರೀತಿಯ ಭತ್ಯೆಗಳನ್ನು ಪರಿಶೀಲಿಸಿ, ಇಲಾಖಾವಾರು ಪ್ರತ್ಯೇಕವಾಗಿ ಯಾವುದಾದರೂ ಭತ್ಯೆಗಳ ಸಂಬಂಧ ಆದೇಶ ಹೊರಡಿಸಿದ್ದರೆ HRMS 2.0 ತಂತ್ರಾಂಶದಲ್ಲಿ ಅಳವಡಿಸಲು ಆದೇಶ ಪ್ರತಿಗಳನ್ನು ಸಲ್ಲಿಸುವುದು ಅನ್ವಯಿಸದಿರುವ ಭತ್ಯೆಗಳನ್ನು ನಿಲ್ಲಿಸುವುದು. ಭತ್ಯೆಗಳ ವರ್ಗೀಕರಣ ಸರಿಪಡಿಸುವುದು. ಹೆಚ್ಚಿನ ದರದಲ್ಲಿ ಸೆಳೆದಿರುವ ಭತ್ಯೆಗಳನ್ನು ವೇತನದಲ್ಲಿ ಕಟಾಯಿಸಿ ಸರ್ಕಾರಕ್ಕೆ ಮರುಭರಿಸಿ HRMS ಕೇಂದ್ರ ಕಛೇರಿಗೆ ಮಾಹಿತಿ ಸಲ್ಲಿಸಲು ತಿಳಿಸಿದೆ. ಇನ್ನಿತರೆ ಭತ್ಯೆಗಳಾದ ACPMR, PP-SPORTS, SCOUTS HONORARIUM, SDA, SP-LI-13 1 , HRMS ಕಛೇರಿಗೆ ಸಲ್ಲಿಸುವುದು.
ಶೀಘ್ರದಲ್ಲೇ HRMS 2.0 Payroll Module ನಲ್ಲಿ ವೇತನ ಸೆಳೆಯಬೇಕಾಗಿರುವುದರಿಂದ ಈ ಸುತ್ತೋಲೆಯಲ್ಲಿ ತಿಳಿಸಿರುವಂತೆ ಎಲ್ಲಾ ಡಿ.ಡಿ.ಓಗಳನ್ನು ತಮ್ಮ ಅಧೀನದ ಸಿಬ್ಬಂದಿಗಳ ಭತ್ಯೆಗಳನ್ನು ತುರ್ತಾಗಿ ಪರಿಶೀಲಿಸಿಕೊಂಡು ಸೆಳೆಯುತ್ತಿರುವ ಭತ್ಯೆಗಳು ಸರಿಯಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ದೃಢೀಕರಿಸಿ ಸಲ್ಲಿಸುವುದು. ಈ ರೀತಿ ಧೃಡೀಕರಣ ನೀಡದ ಭತ್ಯೆಗಳು HRMS 2.0 ನಲ್ಲಿ ಸೆಳೆಯಲು ಸಾಧ್ಯವಾಗುವುದಿಲ್ಲ. ತಪ್ಪಾಗಿ ಭತ್ಯೆಗಳನ್ನು ಸೆಳೆಯುತ್ತಿರುವ ನೌಕರರ ಜಿಲ್ಲಾವಾರು ಪಟ್ಟಿಗಳನ್ನು ಲಗತ್ತಿಸಿದ್ದು, ಸುತ್ತೋಲೆಯಲ್ಲಿ ತಿಳಿಸಿರುವಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು. ಜಿಲ್ಲಾ ಉಪನಿರ್ದೇಶಕರುಗಳು ಈ ಬಗ್ಗೆ ತುರ್ತಾಗಿ ಕ್ರಮಹಿಸಿ ಸಂಬಂಧಿಸಿದ ತಾಲ್ಲೂಕುಗಳು ಡಿ.ಡಿ.ಓಗಳು ಉಲ್ಲೇಖ-[1] ರ ಆದೇಶದಂತೆ ಶಿಕ್ಷಣ ಇಲಾಖೆಗೆ ನಿಗದಿಪಡಿಸಿದ ಭತ್ಯೆಗಳನ್ನು ಮಾತ್ರ ಸೆಳೆಯುತ್ತಿರುವ ಬಗ್ಗೆ ಪರಿಶೀಲಿಸಿ ತಾಲ್ಲೂಕಿನ ಎಲ್ಲಾ ಡಿ.ಡಿ.ಓಗಳ ಮಾಹಿತಿಗಳನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಕ್ರೋಢೀಕರಿಸಿ ತುರ್ತಾಗಿ ಸಲ್ಲಿಸುವಂತೆ ತಿಳಿಸಿದೆ.