ಬೆಂಗಳೂರು : ರಾಜ್ಯ ಸರ್ಕಾರವು 2025ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಮನವಮಿ (06.04.2025) ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಯಂತಿ (07.09.2025) ಭಾನುವಾರದಂದು ಹಾಗೂ ಋಗ್ ಉಪಕರ್ಮ ಮತ್ತು ಯಜುರ್ ಉಪಕರ್ಮ (09.08.2025) ಎರಡನೇ ಶನಿವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಸೌರಮಾನ ಯುಗಾದಿ (14.04.2025) ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ತಿರುಓಣಂ (05.09.2025) ಶುಕ್ರವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂಡಿಸಿರುವುದಿಲ್ಲ.