ಬೆಂಗಳೂರು : 7ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಸಾಮೂಹಿಕ ವಿಮಾ ಯೋಜನೆ (EGIS) ವಂತಿಗೆ ಮೊತ್ತವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನೌಕರರ ಸಾಮೂಹಿಕ ವಿಮಾ ವಂತಿಗೆ ಪರಿಷ್ಕರಣೆಯ ಸಂಬಂಧ ಸರ್ಕಾರದಿಂದ ಆದೇಶವು ಹೊರಡಿಸದೆಯೇ, ವೇತನ ಬಟವಾಡೆ ಅಧಿಕಾರಿಗಳು 08/2024 ರ ಮಾಹೆಯ ವೇತನದಲ್ಲಿ ಹೊಸ EGIS ವಂತಿಗೆ (ಹೆಚ್ಚಿನ) ಕಟಾಯಿಸಿದ್ದು, ಸರ್ಕಾರದಿಂದ ಆದೇಶವು ಹೊರಡಿಸಿದ ನಂತರ ಕಟಾಯಿಸಬೇಕಾಗಿರುತ್ತದೆ. ಈ ಹೆಚ್ಚಿನ ವಂತಿಗೆಯನ್ನು ಮುಂದಿನ ತಿಂಗಳ ವಂತಿಕೆಗೆ ಹೊಂದಾಣಿಕೆ ಮಾಡಲು ಹಾಗೂ ಯಾವ ನೌಕರರ ಹೆಚ್ಚಿನ ವಂತಿಗೆ ಹಿಡಿಯಲಾಗಿದೆಯೋ ಅವರುಗಳ ಪಟ್ಟಿಯನ್ನು ಪಡೆದು, ಕ್ರಮತೆಗೆದುಕೊಳ್ಳುವ ಸಂಬಂಧ ಉಲ್ಲೇಖಿತ ಪತ್ರದಲ್ಲಿ ಸೂಕ್ತ ನಿರ್ದೇಶನ ನೀಡಿರುತ್ತಾರೆ.
ಸದರಿ ಮಾಹಿತಿ ಪತ್ರದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ, ಅದರಂತೆ ಕ್ರಮ ವಹಿಸಲು ಸೂಚಿಸಿದೆ.