ಬೆಂಗಳೂರು : : 2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ -1ರ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಅಂಕಗಳನ್ನು ಆನ್‌ಲೈನ್ ಮೂಲಕ ನಮೂದು ಮಾಡುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 237 ಮೌಲ್ಯಮಾಪನ ಕೇಂದ್ರಗಳಲ್ಲಿ 2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ -1ರ ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಅಂಕಗಳನ್ನು ಆನ್‌ಲೈನ್ ಮುಖಾಂತರ ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಂಡಲಿಯಿಂದ ಒದಗಿಸಲಾಗಿರುವ ತಂತ್ರಾಂಶವನ್ನು ಬಳಸಿ ಆಯಾ ಮೌಲ್ಯಮಾಪನ ಕೇಂದ್ರದಿಂದ ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದು ಮಾಡಲು ಸೂಚಿಸಿದೆ.
ತಂತ್ರಾಂಶದಲ್ಲಿ ಆನ್‌ಲೈನ್ ಮುಖಾಂತರ ಅಂಕಗಳನ್ನು ನಮೂದಿಸಲು ಅನುಸರಿಸಬೇಕಾದ ವಿಧಾನವನ್ನು ಕೆಳಕಂಡಂತೆ ವಿವರವಾಗಿ ತಿಳಿಸಿದೆ.
ಜಂಟಿಮುಖ್ಯ /ಉಪಮುಖ್ಯ /ಸಹಾಯಕ ಮೌಲ್ಯಮಾಪಕರ ನೋಂದಣಿ ಪ್ರಕ್ರಿಯೆ 10-04-2025ರಿಂದ ಪ್ರಾರಂಭ:
1. ಮೊದಲು ಮೌಲ್ಯಮಾಪನ ಕೇಂದ್ರದ ಜಂಟಿ ಮೌಲ್ಯಮಾಪಕರು ನಂತರ ಉಪಮುಖ್ಯ ಮೌಲ್ಯಮಾಪಕರು ಮತ್ತು ಸಹಾಯಕ ಮೌಲ್ಯಮಾಪಕರು ನೇಮಕಾತಿ ಆದೇಶದಲ್ಲಿ ನಮೂದಿಸಿರುವ Registration Link ಬಳಸಿ Web page open ಮಾಡುವುದು.
2. ಮೌಲ್ಯಮಾಪಕರು ಎಂಟ್ರಿ ಸಿಸ್ಟಮ್ ಸ್ಕ್ರೀನ್ ಅನ್ನು ಗುರುತಿಸುತ್ತಾರೆ.
3. 4 សំ New Registration Click a Enter Examiner Number (Code) ಎಂದಿರುತ್ತದೆ. Examiner Number (Code) ನ್ನು ನಿಗದಿಪಡಿಸಿದ ಬಾಕ್ಸ್‌ನಲ್ಲಿ ನಮೂದಿಸಿ, View button click ಮಾಡಬೇಕು.
4. ಅದೇ ವೆಬ್‌ಪೇಜ್‌ನಲ್ಲಿ ನಿಗದಿತ ಬಾಕ್ಸ್‌ನಲ್ಲಿ New Password ನ್ನು ನಮೂದಿಸಿ, ಮತ್ತೊಮ್ಮೆ Confirm Password ನಲ್ಲಿ ಅದೇ Password ನ್ನು ನಮೂದಿಸಬೇಕು. ಚಾಲ್ತಿಯಲ್ಲಿರುವ ನಿಮ್ಮ ಮೊಬೈಲ್ ನಂಬರ್ ನಮೂದಿಸಿ. Get OTP ಮೇಲೆ Click ಮಾಡಬೇಕು. ನಿಮ್ಮ ಮೊಬೈಲ್ ನಂಬರ್ಗೆಗೆ ಬಂದಿರುವ OTP Submit . Successfully Registered 202 Pop-up box Registration ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
5. Successfully Registered Username and Password ಮೆಸೇಜ್ ಬರುತ್ತದೆ.
6. ಪ್ರಥಮವಾಗಿ ಜಂಟಿಮುಖ್ಯ ಮೌಲ್ಯಮಾಪಕರು, New Registration ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ನಂತರ ಉಪಮುಖ್ಯ ಮೌಲ್ಯಮಾಪಕರು ಮತ್ತು ಸಹಾಯಕ ಮೌಲ್ಯಮಾಪಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಪ್ರಥಮವಾಗಿ ಜಂಟಿಮುಖ್ಯ ಮೌಲ್ಯಮಾಪಕರು ನೋಂದಣಿಯಾಗದೇ ಇದ್ದಲ್ಲಿ ಉಪಮುಖ್ಯ ಮೌಲ್ಯಮಾಪಕರು ಮತ್ತು ಸಹಾಯಕ ಮೌಲ್ಯಮಾಪಕರು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಂದೇಶವೂ ರವಾನೆಯಾಗುತ್ತದೆ.