ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರ KSRTC ಬಸ್ ಟಿಕೆಟ್ ಹಾಗೂ ಮೆಟ್ರೋ ಪ್ರಯಾಣದ ಟಿಕೆಟ್ ದರ ಹೆಚ್ಚಳ ಮಾಡಿ ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಇದೀಗ ವಿದ್ಯುತ್ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಇಂದು ಇಂಧನ ಇಲಾಖೆ ಸಚಿವ ಕೆ ಜೆ ಚಾರ್ಜ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಹೌದು ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿದ್ದೇವೆ. ಈ ವರ್ಷ 56 ಸಬ್ ಸ್ಟೇಷನ್ ಖರೀದಿ ಮಾಡಿದ್ದೇವೆ. ಮುಂದಿನ ವರ್ಷ 100 ಸಬ್ ಸ್ಟೇಷನ್ ಖರೀದಿ ಮಾಡುತ್ತೇವೆ. ತೆಲಂಗಾಣ ಕರ್ನಾಟಕ ಬಿಟ್ಟರೆ ಎಲ್ಲಾ ಕಡೆಗೆ ಸ್ಮಾರ್ಟ್ ಮೀಟರ್ ಇದೆ. ಸ್ಮಾರ್ಟ್ ಮೀಟರ್ ಅಳವಡಿಕೆಗೆ 900 ರೂಪಾಯಿಗೆ ಸಬ್ಸಿಡಿ ಕೊಡ್ತಿದ್ದೇವೆ. ಮನೆ ಮನೆಗೆ ಹೋಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಬೇಕು ಎಂದರು.
ಹೊಸದಾಗಿ ವಿದ್ಯುತ್ ಕನೆಕ್ಷನ್ ಪಡೆಯುವವರಿಗೆ ಹಾಗು ಟೆಂಪರ್ವರಿಯಾಗಿ ಪಡೆಯುವವರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ. ಪರಮನೆಂಟ್ ವೇಳೆ ಅದೇ ಮೀಟರ್ ಹಾಕ್ತಾರೆ. ಬೆಸ್ಕಾಂನವರು ಮೂರು ಪಾರ್ಟ್ ಟೆಂಡರ್ ಕರೆದಿದ್ದಾರೆ ಒಬ್ಬರು ಸ್ಮಾರ್ಟ್ ಮೀಟರ್ ಅಳವಡಿಸುತ್ತಾರೆ ಸಿಮ್ ಹಾಕುವವರು ಬೇರೆ ಬ್ಲಾಕ್ ಲಿಸ್ಟ್ ನಲ್ಲಿರುವ ರಾಜಶ್ರೀ ಕಂಪನಿಗೆ ಟೆಂಡರ್ ನೀಡಿರುವ ವಿಚಾರವಾಗಿ, ರಾಜಶ್ರೀ ಕಂಪನಿ ಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.