ಬೆಂಗಳೂರು : ಇಂದಿನಿಂದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದು, ಬಸ್ ಟಿಕೆಟ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ.
ಗಣರಾಜ್ಯೋತ್ಸವ ರಜೆ ಮತ್ತು ವೀಕೆಂಡ್ ಒಟ್ಟಿಗೆ ಬಂದಿರುವುದರಿಂದ ತಮ್ಮ ತಮ್ಮ ಊರಿಗೆ ಹೋಗಬೇಕು ಅಂದುಕೊಂಡವರಿಗೆ ಶಾಕ್ ಎದುರಾಗಿದೆ. ಸಾಮಾನ್ಯ ದಿನಗಳಲ್ಲಿ ಸ್ಲೀಪರ್ ಬಸ್ ದರ 500 ರೂ. 800, 1000 ರೂ. ಇರುವ ರೇಟ್ ಇದೀಗ 2000 ಗಡಿ ದಾಟಿದೆ.
ಟಿಕೆಟ್ ದರ ಎಷ್ಟು ಹೆಚ್ಚಾಗಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು-ಮಂಗಳೂರು : ಸಾಮಾನ್ಯ ದಿನದ ದರ ₹500- ₹800, ಇಂದಿನ ದಿನದ ದರ ₹1400- ₹2000
ಬೆಂಗಳೂರು – ಉಡುಪಿ : ಸಾಮಾನ್ಯ ದಿನದ ದರ ₹600- ₹750, ಇಂದಿನ ದಿನದ ದರ ₹1650-₹1699
ಬೆಂಗಳೂರು – ಚಿಕ್ಕಮಗಳೂರು : ಸಾಮಾನ್ಯ ದಿನದ ದರ ₹550 ₹600, ಇಂದಿನ ದರ ₹1600-₹1500
ಬೆಂಗಳೂರು-ಹಾಸನ : ಸಾಮಾನ್ಯ ದಿನದ ದರ ₹650 ₹850, ಇಂದಿನ ದರ ₹1000-₹1200
ಬೆಂಗಳೂರು- ಬೆಳಗಾವಿ : ಸಾಮಾನ್ಯ ದಿನದ ದರ ₹1200 – ₹1300, ಇಂದಿನ ದರ ₹2500-₹3000
ಜನವರಿ 24 ರಂದು ಶನಿವಾರ, ಜನವರಿ 25 ರಂದು ಭಾನುವಾರ ಹಾಗೆಯೇ ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಮೂರು ದಿನಗಳ ಸಾಲು ಸಾಲು ರಜೆ ಇದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವು ಪ್ರದೇಶಗಳಿಗೆ ಕೆಎಸ್ ಆರ್ ಟಿಸಿ ಬಸ್ ಗಳು ಸಂಚಾರ ನಡೆಸಲಿವೆ.








