ಬೆಂಗಳೂರು: ಅಮೆರಿಕದ ನ್ಯೂಯಾರರ್ಕ್‌ನ ಎನ್‌ಸಿಐ ಆಸ್ಪತ್ರೆಯಲ್ಲಿ ನಟ ಶಿವರಾಜ್ ಕುಮಾರ್ ಗೆ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ತಮ್ಮ ನೆಚ್ಚಿನ ನಟ ಬೇಗ ಗುಣಮುಖವಾಗಲೇಂದು ಅಭಿಮಾನಿಗಳು ವಿಶೇಷ ಪೂಜೆ ಮಾಡಿದ್ದಾರೆ.
ಡಿಸೆಂಬರ್ 24ರ ಇಂದು ನಟ ಶಿವರಾಜ್ ಕುಮಾರ್ ಅವರಿಗೆ ಆಪರೇಷನ್ ನಡೆಯಲಿದೆ. ಆ ಬಳಿಕ ಚಿಕಿತ್ಸೆ ಪಡೆದು ಜನವರಿ.26ಕ್ಕೆ ಬೆಂಗಳೂರಿಗೆ ಅವರು ವಾಪಾಸ್ಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಆರೋಗ್ಯಕ್ಕಾಗಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿದ್ದಾರೆ.
ಡಾ ಮುರುಗೇಶನ್ ಮನೋಹರ್ ವೈಧ್ಯರಿಂದ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಮೂತ್ರ ಕೋಶದ ಕೆಳಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಇನ್ನೂ ಮೊದಲ ಹಂತದಲ್ಲೇ ಇದೆ. ಹೀಗಾಗಿ ಶಿವರಾಜ್ ಕುಮಾರ್ ಆಪರೇಷನ್ ಮಾಡಿಸಲಿದ್ದಾರೆ. ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ದೇವಸ್ಥಾನಗಳಲ್ಲಿ ಪೂಜೆ ಮಾಡಿಸುತ್ತಿದ್ದಾರೆ.
ಅಮೇರಿಕಾಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಭಾವುಕರಾಗಿಯೇ ಮಾತನಾಡಿದಂತ ನಟ ಶಿವರಾಜ್ ಕುಮಾರ್, ನಿನ್ನೆಯಿಂದಲೇ ನಾನು ಅಮೇರಿಕಾಕಕ್ಕೆ ತೆರಳುತ್ತಿರುವಂತ ವಿಷಯ ತಿಳಿದು ಮನೆಗೆ ಸಂಬಂಧಿಕರು, ಕುಟುಂಬಸ್ಥರು, ಅಭಿಮಾನಿಗಳು ಆಗಮಿಸಿ, ಮಾತನಾಡಿಸುತ್ತಿ್ದದಾರೆ ಎಂದರು. ನನಗೆ ಡಿಸೆಂಬರ್.24ರಂದು ಆಪರೇಷನ್ ಮಾಡಲು ಅಮೇರಿಕಾದಲ್ಲಿ ವೈದ್ಯರು ನಿಗದಿ ಪಡಿಸಿದ್ದಾರೆ. ಆ ಬಳಿಕ ವೈದ್ಯರ ನಿರೀಕ್ಷೆಯಲ್ಲಿದ್ದು ಜನವರಿ 26ರಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಅಂತ ತಿಳಿಸಿದರು.