ಬೆಂಗಳೂರು: ರಾಜ್ಯ ಸರ್ಕಾರವು 2025-26ನೇ ಸಾಲಿನಿಂದಲೇ ಜಾರಿಗೊಳಿಸಲು ಚರ್ಚೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿ(SEP) ವರದಿ ಸಿದ್ದವಾಗಿದ್ದು,2025- 26 ನೇ ಸಾಲಿನಿಂದಲೇ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ರಾಜ್ಯ ಶಿಕ್ಷಣ ನೀತಿ ಆಯೋಗ ಈ ತಿಂಗಳ ಕೊನೆಯ ವಾರ ಸಭೆ ನಡೆಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಎಸ್ಇಪಿ ವರದಿ ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ನಿರ್ಧರಿಸಲಾಗಿದ್ದು, ಮಧ್ಯಂತರ ವರದಿಯ ಶಿಫಾರಸ್ಸಿನ ಮೂಲಕ 4 ವರ್ಷದ ಪದವಿಯನ್ನು ಮೂರು ವರ್ಷಕ್ಕೆ ಕಡಿತಗೊಳಿಸಲಾಗಿದೆ. ಆಂಗ್ಲ ಭಾಷೆಯಲ್ಲಿ ಎಸ್ಇಪಿ ವರದಿ ತಯಾರಿಸಿದ್ದು, ಅನುವಾದ ಕಾರ್ಯ ನಡೆಯುತ್ತಿದೆ. ಬಹಳ ಎಚ್ಚರದಿಂದ ಅನುವಾದ ಮಾಡಬೇಕಿರುವುದರಿಂದ ಆಯೋಗ ಸಮಯ ಕೇಳಿದೆ. ಕೊನೆಯ ವಾರ ವರದಿ ಸಲ್ಲಿಸಲು ಆಯೋಗ ನಿರ್ಧರಿಸಿದೆ ಎಂದು ಹೇಳಿದ್ದಾರೆ.